ಗುಂಡ್ಲುಪೇಟೆ/ಚಾಮರಾಜನಗರ : ತಾಲೂಕಿನ ಹಸಗೂಲಿ ಗ್ರಾಮದ ಪುಟ್ಟಮಾದಮ್ಮ(55) ಮಧ್ಯರಾತ್ರಿ ಮಲಗಿದ್ದ ಸಮಯದಲ್ಲಿ ಮನೆಯ ಒಳಗೆ ಬೆಂಕಿ ಬಿದ್ದಿದ್ದು ಇದರಿಂದ ಪುಟ್ಟಮಾದಮ್ಮ ಸಂಪೂರ್ಣ ಸುಟ್ಟು ಸಾವನಪ್ಪಿರುವ ಘಟನೆ ಸೋಮವಾರ ಮುಂಜಾನೆ ಸುಮಾರಿಗೆ ನಡೆದಿದೆ.
ಮನೆಯ ಒಳಗೆ ಸೌದೆಯ ಕಟ್ಟಿಗೆಗಳು ಮತ್ತಿತರ ಒಣಗಿದ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ರಾತ್ರಿ ಮಲಗಿದ್ದಾಗ ಸೀಮೆ ಎಣ್ಣೆ ದೀಪದಿಂದ ಬೆಂಕಿ ಹೊತ್ತಿದ್ದು, ಪುಟ್ಟಮಾದಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಪುಟ್ಟಮಾದಮ್ಮ ಒಳಗಾಗಿದ್ದರು ಎಂಬ ಶಂಕೆಯೂ ಇದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬ ಅನುಮಾನವು ಸಹ ಇದೆ ಎಂಬುದು ಕೆಲವರ ಅಭಿಪ್ರಾಯ. ಮಧ್ಯರಾತ್ರಿ ಬೆಂಕಿ ಬಿದ್ದಿದ್ದು ಎಲ್ಲರೂ ನಿದ್ರೆಯಲ್ಲಿರುವ ಕಾರಣ ಯಾರಿಗೂ ತಿಳಿದು ಬಂದಿಲ್ಲ ನಂತರ 3.30ರ ಸಮಯದಲ್ಲಿ ಕೆಲವರು ಬೆಂಕಿಯನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿ, ಮುಂದೆ ಆಗಬಹುದಾಗಿದ್ದ ದೊಡ್ಡ ಅನಾಹುತವೊಂದನ್ನ ತಡೆದಿದ್ದಾರೆ.
ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಬೇಗೂರು ಪಿಎಸ್‍ಐ ಲೋಕೇಶ್, ಸರ್ಕಲ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ, ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.