ಚಾಮರಾಜನಗರ : ರಾತ್ರಿ ಪಾಳಿಯಲ್ಲಿ ವೈದ್ಯರಿಲ್ಲದಿದ್ದರಿಂದ ಬೇರೊಂದು ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿ ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹನೂರು ತಾಲೂಕಿನ ರಾಮಾಪುರ ರಸ್ತೆಯಲ್ಲಿ ನಡೆದಿದೆ.
ಕೌದಳ್ಳಿ ಗ್ರಾಮದ ಮುಬಾರಕ್ ಪಾಷಾ ಎಂಬವರ ಪತ್ನಿ ಆಯೇಷಾ ಎಂಬಾಕೆ 108 ಆ್ಯಂಬುಲೆನ್ಸ್ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೌದಳ್ಳಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ಯಾರೂ ವೈದ್ಯರಿಲ್ಲದ ಪರಿಣಾಮ ಕುರಟ್ಟಿ ಹೊಸೂರು, ಶೆಟ್ಟಹಳ್ಳಿ, ದಂಟಹಳ್ಳಿ ಗ್ರಾಪಂ ವ್ಯಾಪ್ತಿಯ ಹತ್ತಾರು ಗ್ರಾಮದ ಜನರು ತೊಂದರೆಗೊಳಗಾಗುತ್ತಿದ್ದು ರಾತ್ರಿ ಪಾಳಿ ವೈದ್ಯರೊಬ್ಬರನ್ನು ನೇಮಿಸಬೇಕೆಂದು ಮುಬಾರಕ್ ಒತ್ತಾಯಿಸಿದ್ದಾರೆ.
ಆಯೇಷಾ ಅವರಿಗೆ ಇದು ಮೂರನೇ ಮಗುವಾಗಿದ್ದು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಮಾಗಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವ ಪತ್ತೆ