ETV Bharat / state

ಚಾಮರಾಜನಗರ: ಕುಡಿದ ಮತ್ತಿನಲ್ಲಿ ಆ್ಯಸಿಡ್ ಕುಡಿದು ವ್ಯಕ್ತಿ ಸಾವು - ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆ

ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕುಡಿದ ಮತ್ತಿನಲ್ಲಿ ಆ್ಯಸಿಡ್​ ಸೇವಿಸಿ ಮೃತಪಟ್ಟಿದ್ದಾರೆ.

ಸಿದ್ದರಾಜು
ಸಿದ್ದರಾಜು
author img

By

Published : Jul 25, 2023, 6:49 PM IST

ಚಾಮರಾಜನಗರ : ಕುಡಿದ ಮತ್ತಿನಲ್ಲಿ‌ ಆ್ಯಸಿಡ್ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ಸಿದ್ದರಾಜು (35) ಮೃತ ದುರ್ದೈವಿ. ಈತ ಕುಡಿದ ಮತ್ತಿನಲ್ಲಿ ಮನೆಯಲ್ಲಿಟ್ಟಿದ್ದ ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಸೇವಿಸಿ ಅಸ್ವಸ್ಥಗೊಂಡಿದ್ದರು.

ನಂತರ ಕೊಳ್ಳೇಗಾಲ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಂದಿ ಬೇಟೆಯಾಡಿದ್ದ 7 ಮಂದಿ ಬಂಧನ: ಕಾಡುಹಂದಿ ಬೇಟೆಯಾಡಿ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ, ಏಳು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಶಿವಾನಂದ ಸ್ಮಾರಕದ ಬಳಿ ನಡೆದಿದೆ.

ಅಕ್ಷಯ್, ಸುರೇಶ್, ಸುಧೀರ್ ಕುಮಾರ್, ಮಲ್ಲೇಶ್, ನಂದಕುಮಾರ್, ಗುರುಮೂರ್ತಿ, ವಿದ್ವಾನ್ ಬಂಧಿತ ಆರೋಪಿಗಳು. ಇವರು ಕೊತ್ತಲವಾಡಿ ಗ್ರಾಮದ ಎಲ್ಲೆ ಯಾನಗಹಳ್ಳಿ ರಸ್ತೆಯ ಜಮೀನಿನಲ್ಲಿ ಅಕ್ರಮವಾಗಿ ನಾಡ ಬಂದೂಕುಗಳಿಂದ ಗುಂಡು ಹಾರಿಸಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸವನ್ನು ಕತ್ತರಿಸಿ, ಕಾರಿನಲ್ಲಿ ಸಾಗಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಬಂಧಿತರಿಂದ ಕಾಡು ಹಂದಿ ಮಾಂಸ, ಮೂರು ನಾಡ ಬಂದೂಕು, ಎರಡು ಕಬ್ಬಿಣದ ಮಚ್ಚುಗಳ ಸಮೇತ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಧೀಶರ ಸೂಚನೆ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ : ಇನ್ನೊಂದೆಡೆ ನಾಗರಹೊಳೆ ಉದ್ಯಾನದಲ್ಲಿ ಜಿಂಕೆ ಬೇಟೆಯಾಡಿ, ಆರೋಪಿಗಳು ಜೋಳದ ಹೊಲದಲ್ಲಿ ಮಾಂಸ ಬಚ್ಚಿಟ್ಟಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಪರಿಕರವನ್ನು (ಜುಲೈ 22-2023) ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಲ್ಲದೇ, ತಪ್ಪಿಸಿಕೊಂಡ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದರು.

ಘಟನೆಯ ವಿವರ : ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಹಾಗೂ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರಿನ ಜೋಳದ ಹೊಲದಲ್ಲಿ ಅಕ್ರಮವಾಗಿ ಕಾಡು ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂದು ಖಚಿತ ಮಾಹಿತಿ ಬಂದಿತ್ತು. ಈ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದಾಗ, ಜೋಳದ ಹೊಲದಲ್ಲಿ ರಕ್ತಸಿಕ್ತವಾಗಿದ್ದ ಮೂರು ಕತ್ತಿಗಳು, ಎರಡು ಚಾಕು, ಅನತಿ ದೂರದಲ್ಲಿ ನಾಲ್ಕು ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಆದರೆ, ದಾಳಿಯ ಸುಳಿವರಿತು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯಸ್ಥ ಹರ್ಷಕುಮಾರ ಚಿಕ್ಕನರಗುಂದ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ, ವಲಯ ಅರಣ್ಯಾಧಿಕಾರಿಗಳಾದ ರತನ್‌ಕುಮಾರ್, ಗಣರಾಜ್ ಪಟಗಾರ್, ಡಿಆರ್‌ಎಫ್‌ಒಗಳಾದ ಸಿದ್ದರಾಜು, ಪ್ರಸನ್ನಕುಮಾರ್, ವೀರಭದ್ರಯ್ಯ, ಮನೋಹರ್, ರಾಮು ಹಾಗೂ ಗಸ್ತು ವನಪಾಲಕರಾದ ವಸಂತಕುಮಾರ, ಲಿಂಗರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ನಾಗರಹೊಳೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಜಿಂಕೆ ಬೇಟೆ: ಮಾಂಸ ಜೋಳದ ಹೊಲದಲ್ಲಿ ಪತ್ತೆ.. ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.