ಚಾಮರಾಜನಗರ: ಕಬ್ಬು ಕಟಾವು ಮಾಡಲು ಬಂದವರು ಭಾರಿ ಗಾತ್ರದ ಹೆಬ್ಬಾವನ್ನು ಕಂಡು ಹೌಹಾರಿದ ಘಟನೆ ಯಳಂದೂರು ತಾಲೂಕಿನ ದಾಸನಹುಂಡಿ ಸಮೀಪದ ಮುಂಟಿಪಾಲ್ಯದಲ್ಲಿ ನಡೆದಿದೆ.
ಗ್ರಾಮದ ಹರೀಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ 11 ಅಡಿ ಉದ್ದದ 35 ಕೆಜಿಗೂ ಹೆಚ್ಚು ತೂಕದ ಹೆಬ್ಬಾವನ್ನು ಕಬ್ಬು ಕಟಾವು ಮಾಡಲು ಬಂದ ಕಾರ್ಮಿಕರು ಕಂಡು ಸಂತೇಮರಹಳ್ಳಿ ಸ್ನೇಕ್ ಮಹೇಶ್ ಅವರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ 1 ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆಹಿಡಿದು ಮರಳಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಮಹಿಳೆ ಕೊಂದ.. ಶವ ಹೊರಹಾಕಿ ಮನೆಯೊಳಗೆ ನಿದ್ದೆ ಮಾಡಿದ ಚಿಕ್ಕಬಳ್ಳಾಪುರದ ಭೂಪ!
ಭಾರಿ ಗಾತ್ರದ ಹೆಬ್ಬಾವು ಬೇಟೆ ಅರಸಿ ಜಮೀನಿನಲ್ಲಿ ಮಲಗಿತ್ತು. ಕಬ್ಬಿನ ಫಸಲಿನ ನಡುವೆ ಮಲಗಿದ್ದರಿಂದ ಪ್ರಯಾಸಪಟ್ಟು ಹಿಡಿಯಬೇಕಾಯಿತು. ಒಂದು ವಾರದ ತನಕ ಬೇಟೆಗಾಗಿ ಹೆಬ್ಬಾವುಗಳು ಮಲಗಿದ್ದಲ್ಲೇ ಮಲಗಲಿವೆ ಎಂದು ಉರಗ ತಜ್ಞ ಮಹೇಶ್ ತಿಳಿಸಿದರು.
ಅರಣ್ಯ ಪ್ರದೇಶ, ಬೆಲ್ಲವತ್ತ ಜಲಾಶಯಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಆಗಾಗ್ಗೆ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತವೆ.