ETV Bharat / state

ಅವರೇನೂ ಅಸ್ಪೃಶ್ಯರಲ್ಲ ಹೇಳಿಕೆ..‌ ಹೆಚ್​​ಡಿಕೆ ವಿರುದ್ಧ ಕೊಳ್ಳೇಗಾಲದಲ್ಲಿ ದೂರು ದಾಖಲು - ಈಟಿವಿ ಭಾರತ ಕನ್ನಡ ನ್ಯೂಸ್​

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಪ್ರಗತಿಪರ ಸಂಘಟನೆಯ ಒಕ್ಕೂಟ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದೆ.

a-complaint-was-failed-against-hdk-in-kollegala
ಅವರೇನೂ ಅಸ್ಪೃಶ್ಯರಲ್ಲ ಹೇಳಿಕೆ..‌. ಹೆಚ್​​ಡಿಕೆ ವಿರುದ್ಧ ಕೊಳ್ಳೇಗಾಲದಲ್ಲಿ ದೂರು ದಾಖಲು
author img

By

Published : Nov 30, 2022, 10:48 PM IST

ಚಾಮರಾಜನಗರ : ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರೇನೂ ಅಸ್ಪೃಶ್ಯರಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ವಿರುದ್ಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟವು ದೂರು ನೀಡಿದೆ. ಸಂಘಟನೆಯ ಸಂಚಾಲಕರಾದ ಶೇಖರ್ ಎಂಬವರು ದೂರು ಸಲ್ಲಿಸಿದ್ದಾರೆ.

ಸಿ.ಎಂ. ಇಬ್ರಾಹಿಂ ಅವರೇನೂ ಅಸ್ಪೃಶ್ಯರಲ್ಲ ಎಂದು ಮಾಜಿ‌ ಸಿಎಂ ಕುಮಾರಸ್ವಾಮಿ ಹೇಳುವ ಮೂಲಕ ಅಸ್ಪೃಶ್ಯ‌ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಅಸ್ಪೃಶ್ಯತೆ ಆಚರಣೆಗೆ ಪೂರಕವಾಗಿ ಹೇಳಿಕೆ ಕೊಟ್ಟು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ ಎಂದು ಶೇಖರ್ ಆರೋಪಿಸಿದ್ದಾರೆ.

a-complaint-was-failed-against-hdk-in-kollegala
ಹೆಚ್​​ಡಿಕೆ ವಿರುದ್ಧ ಕೊಳ್ಳೇಗಾಲದಲ್ಲಿ ದೂರು ದಾಖಲು

ಈ ಸಂಬಂಧ ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ದೂರು ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ದೂರು ನೀಡಲಾಗಿದೆ. ಕಳೆದ 21ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಪಂಚರತ್ನ ಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಲ್ಲಿ, ಸಿ.ಎಂ.ಇಬ್ರಾಹಿಂ ಅವರನ್ನು ಮುಖ್ಯಮಂತ್ರಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ಸಿ.ಎಂ.ಇಬ್ರಾಹಿಂ ಅವರನ್ನೂ ಮುಖ್ಯಮಂತ್ರಿ ಮಾಡುತ್ತೇವೆ. ಅವರೇನೂ ಅಸ್ಪೃಶ್ಯರಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ : ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಾಭ್ಯಾಸ: ಹೆಚ್​​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.