ಚಾಮರಾಜನಗರ : ಜಿಲ್ಲೆಯಲ್ಲಿಂದು 73 ಕೊರೊನಾ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4926ಕ್ಕೆ ಏರಿಕೆಯಾಗಿದೆ.
ಇಂದು 64 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 712 ಆಗಿದೆ. 36 ಮಂದಿ ಸೋಂಕಿತರು ಐಸಿಯುನಲ್ಲಿದ್ದು 212 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 1168 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಮೃತರ ವಿವರ :
ಇಂದು ಕೊರೊನಾ ಹೊರತುಪಡಿಸಿ ಬೇರೆ ಕಾರಣದಿಂದ ಓರ್ವ ಸಾವನ್ನಪ್ಪಿದ್ದಾರೆ. ಹನೂರಿನ 30 ವರ್ಷದ ಮಹಿಳೆ ಕಿಡ್ನಿ ಸಮಸ್ಯೆ ಹಾಗೂ ಕ್ಷಯ ರೋಗದ ಕಾರಣದಿಂದ ಕಳೆದ 8 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದಾರೆ. ಇವರ ನಿಧನದ ಬಳಿಕ ಕೋವಿಡ್ ದೃಢಪಟ್ಟಿದೆ.