ETV Bharat / state

ಚಾಮರಾಜನಗರ: 52 ಮಂದಿಗೆ ಕೊರೊನಾ ದೃಢ... ಇಬ್ಬರು ಬಲಿ - Chamrajnagara latest news

ಜಿಲ್ಲೆಯಲ್ಲಿಂದು 53 ಮಂದಿಗೆ ಕೊರೊನಾ ವಕ್ಕರಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

Chamrajnagara corona case
Chamrajnagara corona case
author img

By

Published : Aug 12, 2020, 8:56 PM IST

ಚಾಮರಾಜನಗರ: ಇಂದು ಜಿಲ್ಲೆಯಲ್ಲಿ 52 ಕೋವಿಡ್ ಪಾಸಿಟಿವ್ ಕೇಸ್​​ಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಚಾಮರಾಜನಗರ ತಾಲೂಕಿನಲ್ಲಿ 23, ಕೊಳ್ಳೇಗಾಲದಲ್ಲಿ 17, ಗುಂಡ್ಲುಪೇಟೆಯಲ್ಲಿ 3, ಯಳಂದೂರುನಲ್ಲಿ 2, ಹನೂರು ತಾಲೂಕಿನಲ್ಲಿ 7 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

Funeral of who died from corona
ಮೃತರ ಅಂತ್ಯಕ್ರಿಯೆ

ಯಳಂದೂರು ತಾಲೂಕಿನ ಕಂದಳ್ಳಿ ಗ್ರಾಮದ 69 ವರ್ಷದ ವೃದ್ಧ ಕಳೆದ 8 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಳ್ಳೇಗಾಲದ ದೇವಾಂಗಪೇಟೆಯ 80 ವರ್ಷದ ವೃದ್ಧ ಕಳೆದ 4 ರಂದು ಸೋಂಕಿತರಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಪಿಎಫ್ಐ ಸಂಘಟನೆ ಕಾರ್ಯಕರ್ತರು ಗೌರವಯುತವಾಗಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 26 ಸೋಂಕಿತರು ಮೃತಪಟ್ಟಿದ್ದಾರೆ.

ಸದ್ಯ 421 ಸಕ್ರಿಯ ಪ್ರಕರಣಗಳಿದ್ದು, ಹೋಂ ಐಸೋಲೇಷನ್​​ನಲ್ಲಿ 112, ಐಸಿಯುನಲ್ಲಿ 23 ಮಂದಿ ದಾಖಲಾಗಿದ್ದಾರೆ. 599 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.