ಕೊಳ್ಳೇಗಾಲ : ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿ ಹೆಚ್ಚುತ್ತಿವೆ. ಅದರಲ್ಲೂ ಶಾಲಾ ಮತ್ತು ಕಾಲೇಜು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕೊಳ್ಳೇಗಾಲ ತಾಲೂಕಿನ ಶಾಲಾ ಕಾಲೇಜಿನಲ್ಲಿ ಕೊರೊನಾ ಆಭ೯ಟ ಜೋರಾಗುತ್ತಿದೆ. ಮಕ್ಕಳು ಹಾಗೂ ಶಿಕ್ಷಕರು ಕೊರೊನಾ ಸೋಂಕಿನಿಂದ ಬಾಧಿತರಾಗುತ್ತಿದ್ದಾರೆ.
ಖಾಸಗಿ ವಾಸವಿ ವಿದ್ಯಾ ಕೇಂದ್ರದ 7 ವಿದ್ಯಾಥಿ೯ಗಳು ಹಾಗೂ ನಾಲ್ಕು ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ. ಸತ್ತೇಗಾಲದಲ್ಲಿ ಆರು ಮಂದಿ ಪ್ರೌಢಶಾಲಾ ವಿದ್ಯಾಥಿ೯ಗಳಿಗೆ ಕೊರೊನಾ ತಗುಲಿದೆ.
ಓದಿ: ಚಳಿ ಜ್ವರಕ್ಕೆ ಹಾಸಿಗೆ ಹಿಡಿಯುತ್ತಿರುವ ಜನ: ಕೊರೊನಾ ಭಯಕ್ಕೆ ಮೆಡಿಕಲ್, ಖಾಸಗಿ ಆಸ್ಪತ್ರೆಗಳಿಂದಲೇ ಔಷಧ!
ಈ ಬಗ್ಗೆ ಬಿಇಒ ಚಂದ್ರ ಪಾಟೀಲ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ನಿಯಮಾವಳಿಯಂತೆ ಕೊರೊನಾ ಪತ್ತೆಯಾದ ಶಾಲೆಗಳಿಗೆ ಸಾನಿಟೈಸ್ ಮಾಡಿಸುವಂತೆ ಸೂಚಿಸಲಾಗಿದೆ. ಸತ್ತೇಗಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮೂರು ದಿನ ರಜೆ ನೀಡಲಾಗಿದೆ.
ಇನ್ನೂ ಖಾಸಗಿ ಶಾಲೆ ವಾಸವಿ ವಿದ್ಯಾ ಕೇಂದ್ರದ ಶಾಲೆಯ ಏಳು ಮಕ್ಕಳು ಹಾಗೂ ನಾಲ್ವರು ಶಿಕ್ಷಕರಿಗೆ ಕೊರೊನಾ ಕಾಣಿಸಿದೆ. ತರಗತಿಗಳನ್ನು ಸಾನಿಟೈಸ್ ಮಾಡಿಸಿ ಆಯಾ ತರಗತಿಗೆ ರಜೆ ನೀಡುವಂತೆ ತಿಳಿಸಲಾಗಿದೆ. ಹಾಗೆಯೇ ಸೋಂಕಿತರ ಸಂಪರ್ಕದಲ್ಲಿದ್ದವರಿಗೂ ಕೊರೊನಾ ತಪಾಸಣೆಯನ್ನು ಸಮರ್ಪಕವಾಗಿ ನಡೆಸಲಾಗುತ್ತಿದೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ