ಚಾಮರಾಜನಗರ: ಆಕಸ್ಮಿಕವಾಗಿ ಬೆಂಕಿ ತಗುಲಿ 40 ಕ್ಕೂ ಹೆಚ್ಚು ಕುರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕೋಡಿಉಗನೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಹಾದೇವ ಎಂಬವರ ಕುರಿದೊಡ್ಡಿಗೆ ಆಕಸ್ಮಿಕ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಓದಿ: ಕುರಿ ಮೈತೊಳೆಯಲು ಹೋದವ ನೀರುಪಾಲು.. ಮೃತದೇಹ ಹೊರತೆಗೆದ ಪಿಎಸ್ಐ
ಇವರ ಕುರಿದೊಡ್ಡಿಯಲ್ಲಿ 40 ಕ್ಕೂ ಹೆಚ್ಚು ಕುರಿಗಳಿದ್ದವು. ಬೆಂಕಿ ಬಿದ್ದ ಕೂಡಲೇ ನೋಡನೋಡುತ್ತಿದ್ದಂತೆ ಎಲ್ಲ ಕುರಿಗಳು ಸುಟ್ಟು ಕರಕಲವಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು, ಬೆಂಕಿ ಅವಘಡ ಉಂಟಾಗುತ್ತಿದ್ದಂತೆ ಎಚ್ಚೆತ್ತ ಮಹಾದೇವ ಹಾಗೂ ನೆರೆಹೊರೆಯವರು ಅಗ್ನಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.