ETV Bharat / state

ಚಾಮರಾಜನಗರದಲ್ಲಿ 3 ದಿನ ಸರಳ ದಸರಾ: ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ಪ್ರಸಾರ - Dasara celebration

ಚಾಮರಾಜನಗರದಲ್ಲಿ 17 ರಿಂದ 20 ರವರೆಗೆ ಜಿಲ್ಲಾ ಕೇಂದ್ರದಲ್ಲಿ ಸರಳ‌ ದಸರಾ ಆಚರಣೆ ನಡೆಯಲಿದ್ದು, ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Chamrajnagar
Chamrajnagar
author img

By

Published : Oct 16, 2020, 10:50 AM IST

ಚಾಮರಾಜನಗರ: ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಜಿಲ್ಲಾಡಳಿತದ ವತಿಯಿಂದ ಇದೇ 17 ರಿಂದ 20 ರವರೆಗೆ ಜಿಲ್ಲಾ ಕೇಂದ್ರದಲ್ಲಿ ಸರಳ‌ ದಸರಾ ನಡೆಯಲಿದೆ.

17ರ ಬೆಳಗ್ಗೆ 10.30ಕ್ಕೆ ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಜನಪ್ರತಿನಿಧಿಗಳು ಚಾಲನೆ ನೀಡಲಿದ್ದಾರೆ.‌ ದಸರಾ ಪ್ರಯುಕ್ತ 17 ರಿಂದ 20 ರವರೆಗೆ ಪ್ರತಿದಿನ ಸಂಜೆ 7 ರಿಂದ 8 ರವರೆಗೆ ಚಾಮರಾಜೇಶ್ವರ ದೇವಾಲಯದ ಆವರಣದೊಳಗೆ ಭಕ್ತಿ ಸಂಗೀತ, ಜಾನಪದ ಗೀತೆ ಗಾಯನ, ವತಂಬೂರಿ ಪದ, ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದು, ವರ್ಚುಯಲ್ ಮೂಲಕ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ.

ಈ ಹಿಂದೆ ಜಿಲ್ಲಾ ದಸರಾ ಕಾರ್ಯಕ್ರಮಗಳಲ್ಲಿ ಪ್ರಖ್ಯಾತ ಗಾಯಕರು, ಹಾಸ್ಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡುವ ಮೂಲಕ ಮೈಸೂರಿನ ವೈಭವವನ್ನು ಗಡಿಜಿಲ್ಲೆಗೆ ತರುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.