ಚಾಮರಾಜನಗರ: ಜಿಲ್ಲೆಯಲ್ಲಿಂದು 20 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 591ಕ್ಕೆ ಏರಿಕೆಯಾಗಿದೆ. ಹಾಗೆಯೇ 29 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಇಂದು ಸೋಂಕು ದೃಢಪಟ್ಟವರಲ್ಲಿ ಒಂದು ವರ್ಷದ ಮಗು ಕೂಡಾ ಇದ್ದು, 15ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ವಕ್ಕರಿಸಿದಂತಾಗಿದೆ. ಸದ್ಯ 307 ಮಂದಿ ಮೇಲೆ ನಿಗಾ ಇಡಲಾಗಿದೆ.
ಗುಂಡ್ಲುಪೇಟೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 193ರಷ್ಟಿದೆ. ಚಾಮರಾಜನಗರದಲ್ಲಿ 130, ಕೊಳ್ಳೇಗಾಲದಲ್ಲಿ 169, ಹನೂರಿನಲ್ಲಿ 34, ಯಳಂದೂರಿನಲ್ಲಿ 52 ಹಾಗೂ ಅಂತರ್ ಜಿಲ್ಲೆಯ 13 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.