ETV Bharat / state

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 2 ವರ್ಷ ಜೈಲು ಶಿಕ್ಷೆ - undefined

ಆಟವಾಡುತ್ತಿದ್ದ ಬಾಲಕನಿಗೆ ಜ್ಯೂಸ್ ನೀಡುವ ಆಸೆ ತೋರಿಸಿ ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದು ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಕಿರುಚಾಟ ಕೇಳಿ ಸ್ಥಳೀಯರು ಬಾಲಕನನ್ನು ರಕ್ಷಿಸಿ, ಆರೋಪಿ ಕೆಂಪಾರೆಡ್ಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ
author img

By

Published : Jul 25, 2019, 8:17 PM IST

ಚಾಮರಾಜನಗರ: ಜ್ಯೂಸ್ ನೀಡುವ ಆಸೆ ತೋರಿಸಿ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷ ಜೈಲು, ₹ 400 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಕೇತನಹಳ್ಳಿ ಗ್ರಾಮದ ಕೆಂಪಾರೆಡ್ಡಿ ಶಿಕ್ಷೆಗೊಳಪಟ್ಟ ಅಪರಾಧಿ.

ಆಟೋ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಂಪಾರೆಡ್ಡಿ, 2016ರ ನ.15ರಂದು ಚಾಮರಾಜೇಶ್ವರ ದೇಗುಲದ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕನಿಗೆ ಜ್ಯೂಸ್ ನೀಡುವ ಆಸೆ ತೋರಿಸಿದ್ದಾನೆ. ಬಳಿಕ ಬಾಲಕನನ್ನು ಸತ್ಯಮಂಗಲ ರಾಷ್ಟ್ರೀಯ ಹೆದ್ದಾರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕನ ಕಿರುಚಾಟ ಕೇಳಿದ ಸ್ಥಳೀಯರು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

ನೊಂದ ಬಾಲಕನ ಹೇಳಿಕೆ ಮತ್ತು ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನ್ಯಾಯಾಧೀಶರು ಅಪರಾಧಿಗೆ 2 ವರ್ಷ ಶಿಕ್ಷೆ ಮತ್ತು ₹ 400 ದಂಡ ವಿಧಿಸಿದ್ದಾರೆ. ಕಾನೂನು ಪ್ರಾಧಿಕಾರವು ನೊಂದ ಬಾಲಕನಿಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ಕೋರ್ಟ್‌ ತೀರ್ಪು ನೀಡಿದೆ.
ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.

Intro:ಜ್ಯೂಸ್ ಆಸೆ ತೋರಿಸಿ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 2 ವರ್ಷ ಜೈಲೂಟ

ಚಾಮರಾಜನಗರ: ಜ್ಯೂಸ್ ಆಸೆ ತೋರಿಸಿ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾ. ಜಿ.ಬಸವರಾಜ ಎರಡು ವರ್ಷ ಜೈಲು, 200 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

Body:ಚಿಕ್ಕಬಳ್ಳಾಪುರ ತಾಲೂಕಿನ ಕೇತನಹಳ್ಳಿ ಗ್ರಾಮದ ಕೆಂಪಾರೆಡ್ಡಿ ಶಿಕ್ಷೆಗೊಳಗಾದವನು. ಅಪರಾಧಿಯೂ ಆಟೋ ಚಾಲಕನಾಗಿದ್ದು 2016 ನ. 15 ರಂದು ಚಾಮರಾಜೇಶ್ವರ ದೇಗುಲ ಮುಂಭಾಗದಲ್ಲಿ ಆಟ ಆಡುತ್ತಿದ್ದ ಬಾಲಕನೋರ್ವನನ್ನು ಜ್ಯೂಸ್ ಆಸೆ ತೋರಿಸಿ ಸತ್ಯಮಂಗಲಂ ರಾ.ಹೆದ್ದಾರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕನ ಕಿರುಚಾಟ ಕೇಳಿ ಸ್ಥಳೀಯರು ಬಾಲಕನನ್ನು ರಕ್ಷಿಸಿ ಕೆಂಪಾರೆಡ್ಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.

Conclusion:ನೊಂದ ಬಾಲಕ ಮತ್ತು ಇತರೆ ಸಾಕ್ಷಿಗಳ ಆಧಾರದ ಮೇಲೆ ನ್ಯಾಯಾಧೋಶರು ಅಪರಾಧಿಗೆ 2 ವರ್ಷ ಶಿಕ್ಷೆ ಮತ್ತು 400 ರೂ. ದಂಡ ವಿಧಿಸಿದ್ದಾರೆ. ಕಾನೂನು ಪ್ರಾಧಿಕಾರವು ನೊಂದ ಬಾಲಕನಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ್ದು, ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.