ETV Bharat / state

ಚಾಮರಾಜನಗರದಲ್ಲಿಂದು 18 ಮಂದಿಗೆ ಕೊರೊನಾ ; 48 ಜನ ಗುಣಮುಖ - ಚಾಮರಾಜನಗರ ಕೊರೊನಾ ಸುದ್ದಿ

ಚಾಮರಾಜನಗರ ಜಿಲ್ಲೆಯಲ್ಲಿ ಇಂದು 48 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..

Chamarajanagar
ಚಾಮರಾಜನಗರ
author img

By

Published : Oct 26, 2020, 8:49 PM IST

ಚಾಮರಾಜನಗರ : ಜಿಲ್ಲೆಯಲ್ಲಿಂದು 18 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,798ಕ್ಕೆ ಏರಿಕೆಯಾಗಿದೆ. ಇಂದು 48 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 284ಕ್ಕೆ ಇಳಿದಿದೆ. 23 ಮಂದಿ ಸೋಂಕಿತರು ಐಸಿಯುನಲ್ಲಿದ್ದು, 128 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ.

234 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯ ಒಟ್ಟು ಪರೀಕ್ಷೆಗಳ ಸಂಖ್ಯೆ ಇಂದು 89 ಸಾವಿರ ದಾಟಿದೆ, ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ.

ಮಹಿಳೆ ಬಲಿ : ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದ 76 ವರ್ಷದ ಮಹಿಳೆ ಕಳೆದ 24 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ 26 ರಂದು ಮೃತಪಟ್ಟಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.