ETV Bharat / state

ಭತ್ತದ ಜಮೀನಿನಲ್ಲಿ 15 ಅಡಿ ಹೆಬ್ಬಾವು... ಬೆಚ್ಚಿ ಬಿದ್ದ ರೈತ - python at Kollegal

ಭತ್ತದ ಜಮೀನಿನಲ್ಲಿ ಭಾರಿ ಗಾತ್ರದ‌ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ರೈತ ಹೌಹಾರಿದ್ದಾನೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಅರಣ್ಯಕ್ಕೆ ಸೇರಿಸಲಾಗಿದೆ.

python
ಹೆಬ್ಬಾವು
author img

By

Published : Oct 12, 2020, 10:20 PM IST

ಕೊಳ್ಳೇಗಾಲ(ಚಾಮರಾಜನಗರ): ತಾಲೂಕಿನ ಸತ್ತೇಗಾಲದ ಶಿವನ ಸಮುದ್ರದ ಸಮೀಪ ಉಮಯಾ ಎಂಬ ರೈತನ ಭತ್ತದ ಜಮೀನಿನಲ್ಲಿ ಭಾರಿ ಗಾತ್ರದ‌ ಹೆಬ್ಬಾವು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದೆ.

ಇಂದು ಮಧ್ಯಾಹ್ನ ಸಮಯದಲ್ಲಿ ತಮ್ಮ ಭತ್ತದ ಜಮೀನನ್ನು ವೀಕ್ಷಣೆ ಮಾಡಲು ತೆರಳಿದ ಉಮಯಾ ಗದ್ದೆಯೊಳಗೆ ಅಡಗಿದ್ದ 15 ಅಡಿಯ ಭಾರಿ ಗಾತ್ರದ ಹೆಬ್ಬಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಬಳಿಕ ಈ ಬಗ್ಗೆ ಉರಗ ಸಂರಕ್ಷಕ ರಘು ಅವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ‌ನೀಡಿದ ರಘು ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಪಕ್ಕದ ಜಾಗೇರಿ ಅರಣ್ಯ ಪ್ರದೇಶಕ್ಕೆ‌ ಹೆಬ್ಬಾವನ್ನು ಬಿಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.