ETV Bharat / state

ವೈಟ್ ಟಾಪಿಂಗ್:ಬೆಂಗಳೂರು-ಮೈಸೂರು ರಸ್ತೆಯಲ್ಲಿ ಜನರ ಪರದಾಟ - undefined

ವಾಹನ ದಟ್ಟಣೆ ಹೊಂದಿರುವ ಬೆಂಗಳೂರು-ಮೈಸೂರು ರಸ್ತೆಯ ಕೆಆರ್ ಮಾರುಕಟ್ಟೆ ಬಳಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗಿದೆ.ಇದರಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ವೈಟ್ ಟಾಪಿಂಗ್ ಕಾಮಗಾರಿಯಿಂದ ಜನರ ಪರದಾಟ
author img

By

Published : May 17, 2019, 8:55 PM IST

ಬೆಂಗಳೂರು: ಸದಾ ವಾಹನಗಳಿಂದ ಗಿಜಿಗಿಡುವ ಬೆಂಗಳೂರು-ಮೈಸೂರು ರಸ್ತೆಯ ಕೆಆರ್ ಮಾರುಕಟ್ಟೆ ಬಳಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದು ಪ್ರಯಾಣಿಕರ ಪಾಡು ಹೇಳತೀರದಾಗಿದೆ.

ಚುನಾವಣೆ ಬಳಿಕ ಪಾಲಿಕೆ ಆರಂಭಿಸಿರುವ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ, ಪ್ರಯಾಣಿಕರನ್ನು ಹೈರಾಣು ಮಾಡುತ್ತಿದೆ.ಕೆಆರ್ ಮಾರುಕಟ್ಟೆ ಮೇಲ್ಸೇತುವೆ ಇಳಿದ ಕೂಡಲೇ ಗೌರಿಪಾಳ್ಯ ಜಂಕ್ಷನ್​ನಿಂದ ಗಾಳಿ ಆಂಜನೇಯ ದೇವಸ್ಥಾನದವರೆಗೂ ಸುಮಾರು ಮೂರು ಕಿಲೋಮೀಟರ್ ಉದ್ದದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಒಂದು ಬದಿಯ ವೈಟ್ ಟಾಪಿಂಗ್ 6 ತಿಂಗಳ ಹಿಂದೆ ಮುಗಿದಿತ್ತು. ಇನ್ನೊಂದು ಬದಿಯ ರಸ್ತೆಯಲ್ಲೂ, ರಸ್ತೆ ಅರ್ಧಭಾಗ ಸಂಚಾರಕ್ಕೆ ಬಿಟ್ಟು, ಇನ್ನರ್ಧ ಭಾಗದಲ್ಲಿ ವೈಟ್ ಟಾಪಿಂಗ್ ನಡೆಯುತ್ತಿರುವುದರಿಂದ ಕೇವಲ ಒಂದು ಬಸ್ ಓಡಾಡಲು ಸಾಕಾಗುವಷ್ಟು ಮಾತ್ರ ಜಾಗವಿದೆ.

ನೀರಿನ ಕೊಳವೆ, ವಿದ್ಯುತ್ ಕೇಬಲ್ ಹಾಗೂ ಇನ್ನಿತರ ಮೂಲಸೌಕರ್ಯಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ವೈಟ್ ಟಾಪಿಂಗ್ ಮಾಡುತ್ತಿರುವುದರಿಂದ ರಸ್ತೆ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಬಾಳ್ವಿಕೆ ಬರಲಿದೆ. ಪದೇ ಪದೇ ರಸ್ತೆ ಅಗೆಯುವ ಸಮಸ್ಯೆ ಇರುವುದಿಲ್ಲ. ಅಂತೆಯೇ ಗುಂಡಿ ಬೀಳುವ ಸಮಸ್ಯೆಗೂ ಟಾಪಿಂಗ್ ಕಾಮಗಾರಿ ನಡೆಸಲಾಗ್ತಿದೆ.

ವೈಟ್ ಟಾಪಿಂಗ್ ಕಾಮಗಾರಿ,ಜನರ ಪರದಾಟ

ಈ ಹಿನ್ನೆಲೆಯಲ್ಲಿ ಮೈಸುಡುವ ಬಿಸಿಲಿಗೆ ಸಂಚಾರ ದಟ್ಟಣೆಯಲ್ಲಿ ನಿಂತು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಸಲಿ. ಆದರೆ ಹಗಲಲ್ಲಿ ಕಾಮಗಾರಿ ನಡೆಸಿ ಪ್ರಯಾಣಿಕರಿಗೆ ಏಕೆ ಸಮಸ್ಯೆ ಕೊಡ್ತಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟೋ ಚಾಲಕರು, ಕಚೇರಿಗಳಿಗೆ ತೆರಳುವವರು, ಒಂದು ಗಂಟೆಗೂ ಹೆಚ್ಚು ಕಾಲ ಬಿರು ಬಿಸಿಲಲ್ಲಿ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲ. ಇದ್ದರೂ ಗಿರಿನಗರದ ಮೂಲಕವಾಗಿ ಮೈಸೂರು ರಸ್ತೆ ತಲುಪಲು ಕಿಲೋಮೀಟರ್​ಗಟ್ಟಲೆ ಸುತ್ತು ಹೊಡೆಯಬೇಕಾಗುತ್ತದೆ.

ಈ ಕುರಿತು ಮೇಯರ್ ಗಂಗಾಂಬಿಕೆ ಮಾತನಾಡಿ, ಟ್ರಾಫಿಕ್ ಪೊಲೀಸರು ಅನುಮತಿ ನೀಡಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ‌.ಈ ವಿಧದ ರಸ್ತೆಯಲ್ಲಿ ಕ್ಯೂರಿಂಗ್ ಕೆಲಸ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ರಸ್ತೆ ಕಾಮಗಾರಿ ಸಂಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಧಿ ಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೈಸೂರು ರಸ್ತೆಗೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Intro:ರಾತ್ರಿ-ಹಗಲೂ ಸಂಚಾರ ದಟ್ಟಣೆಯಾಗ್ತಿದೆ ಮೈಸೂರು ರಸ್ತೆ- ಪರ್ಯಾಯ ರಸ್ತೆ ಇಲ್ಲದೆ ಜನರ ಪರದಾಟ

ಬೆಂಗಳೂರು- ಸದಾ ವಾಹನಗಳಿಂದ ಗಿಜಿಗುಡುವ, ಬೆಂಗಳೂರು-ಮೈಸೂರು ನಡುವೆ ಓಡಾಡುವ ವಾಹನಗಳಿಗೆ ಮುಖ್ಯರಸ್ತೆಯಾಗಿದ್ದ ಮೈಸೂರು ರಸ್ತೆಯಲ್ಲಿ ಇದೀಗ ಪ್ರಯಾಣಿಕರ ಪಾಡು ಹೇಳತೀರದಾಗಿದೆ.
ಹೌದು ಚುನಾವಣೆ ಬಳಿಕ ಪಾಲಿಕೆ ಆರಂಭಿಸಿರುವ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪ್ರಯಾಣಿಕರನ್ನು ನರಕಯಾತನೆ ಅನುಭವಿಸುವಂತೆ ಮಾಡಿದೆ. ಕೆಆರ್ ಮಾರುಕಟ್ಟೆ ಮೇಲ್ಸೇತುವೆ ಇಳಿದ ಕೂಡಲೇ ಗೋರಿಪಾಳ್ಯ ಜಂಕ್ಷನ್ ನಿಂದ, ಗಾಳಿ ಆಂಜನೇಯ ದೇವಸ್ಥಾನದ ವರೆಗೂ ಸುಮಾರು ಮೂರು ಕಿಲೋಮೀಟರ್ ಉದ್ದದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ.
ರಸ್ತೆಯ ಇನ್ನೊಂದು ಬದಿಯ ವೈಟ್ ಟಾಪಿಂಗ್ 6 ತಿಂಗಳ ಹಿಂದೆ ಮುಗಿದಿತ್ತು. ಇನ್ನೊಂದು ಬದಿಯ ರಸ್ತೆಯಲ್ಲೂ, ರಸ್ತೆ ಅರ್ಧ ಭಾಗದಲ್ಲಿ ಸಂಚಾರಕ್ಕೆ ಬಿಟ್ಟು, ಇನ್ನರ್ಧ ಭಾಗದಲ್ಲಿ ವೈಟ್ ಟಾಪಿಂಗ್ ನಡೆಯುತ್ತಿರುವುದರಿಂದ ಕೇವಲ ಒಂದು ಬಸ್ ಓಡಾಡಲು ಸಾಕಾಗುವಷ್ಟು ಮಾತ್ರ ಜಾಗವಿದ್ದು ವಾಹನಗಳ ಕ್ಯೂ ಸುಮಾರು ಕಿಲೋಮೀಟರ್ ಗಟ್ಟಲೆ ದೂರಕ್ಕೂ ಚಾಚಿರುತ್ತದೆ.
ನೀರಿನ ಕೊಳವೆ ವಿದ್ಯುತ್ ಕೇಬಲ್ ಹಾಗೂ ಇನ್ನಿತರ ಮೂಲಸೌಕರ್ಯಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ವೈಟ್ ಟ್ಯಾಪಿಂಗ್ ಮಾಡುತ್ತಿರುವುದರಿಂದ ರಸ್ತೆ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಬಾಳಿಕೆ ಬರಲಿದೆ ಪದೇ ಪದೇ ರಸ್ತೆ ಅಗೆಯುವ ಸಮಸ್ಯೆ ಇರುವುದಿಲ್ಲ ಹಾಗೆ ಗುಂಡಿ ಬೀಳುವ ಸಮಸ್ಯೆಯಿಂದಲೂ ಟ್ಯಾಪಿಂಗ್ ಮುಕ್ತವಾಗುತ್ತದೆ ಎಂದು ಈ ಕಾಮಗಾರಿ ನಡೆಸಲಾಗ್ತಿದೆ.
ಆದರೆ ಸುಡುವ ಬಿಸಿಲಿಗೆ ಸಂಚಾರ ದಟ್ಟಣೆಯಲ್ಲಿ ನಿಂತು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾತ್ರಿವೇಳೆಯಲ್ಲಿ ಕಾಮಗಾರಿ ನಡೆಸಲಿ, ಆದರೆ ಹಗಲಲ್ಲಿ ನಡೆಸಿ ಪ್ರಯಾಣಿಕರಿಗೆ ಯಾಕೆ ಈ ರೀತಿಯ ಸಮಸ್ಯೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರು ಕಚೇರಿಗಳಿಗೆ ತೆರಳುವವರು ಒಂದು ಗಂಟೆಗೂ ಹೆಚ್ಚು ಕಾಲ ಸುಡುವ ಬಿಸಿಲಿನಲ್ಲಿ ರಸ್ತೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಆದರೆ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲ,. ಇದ್ದರೂ ಗಿರಿನಗರದ ಮೂಲಕವಾಗಿ ಮೈಸೂರು ರಸ್ತೆ ತಲುಪಲು ಕಿಲೋಮೀಟರ್ ಗಟ್ಟಲೆ ಸುತ್ತುಹೊಡೆಯಬೇಕಾಗುತ್ತದೆ.
ಈ ಕುರಿತು ಮೇಯರ್ ಗಂಗಾಂಬಿಕೆ ಮಾತನಾಡಿ, ಟ್ರಾಫಿಕ್ ಪೊಲೀಸರು ಅನುಮತಿ ನೀಡಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ‌. ಈ ವಿಧದ ರಸ್ತೆಯಲ್ಲಿ ಕ್ಯೂರಿಂಗ್ ಕೆಲಸ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ರಸ್ತೆಯ ಕಾಮಗಾರಿ ಸಂಪೂರ್ಣಗೊಳಿಸಲು ಮೂರು ತಿಂಗಳ ಕಾಲಾವಧಿ ಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮೈಸೂರು ರಸ್ತೆಗೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಸೌಮ್ಯಶ್ರೀ.

Body:..KN_BNG_17_03_Mysore_road_whitetopping_script_sowmya_7202707

Conclusion:KN_BNG_17_03_Mysore_road_whitetopping_script_sowmya_7202707

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.