ಬೆಂಗಳೂರು: ಊಟಕ್ಕೆ ಹೋಗುವುದು ತಪ್ಪಲ್ಲ, ಸ್ನೇಹಿತರು ಕರೆದಾಗ ಹೋಗಿದ್ದಾರೆ ಅಷ್ಟೇ. ಅಷ್ಟಕ್ಕೆ ಕುಮಾರಸ್ವಾಮಿ ಬೇಸರಗೊಂಡ್ರೆ ನಾವೇನು ಮಾಡೋಕೆ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಜಮೀರ್ ಅಹಮ್ಮದ್ ಸಿಎಂಗೆ ಟಾಂಗ್ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲಲ್ಲ, 1.5 - 2 ಲಕ್ಷ ಮತಗಳ ಅಂತರದಿಂದ ಗೆಲ್ತಾರೆ. ಮಂಡ್ಯ ಹಿಂದೆ ನಡೆದ ಉಪಚುನಾವಣೆಯಲ್ಲಿ ಎಲ್ಲರನ್ನೂ ಕರೆಸಿ ಸಿಎಂ ಮಾತನಾಡಿದ್ದರು. ಆದ್ರೆ, ಲೋಕಸಭಾ ಚುನಾವಣೆಯಲ್ಲಿ ಸಿಎಂ ಎಲ್ಲರನ್ನು ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ಹಾಗಾಗಿ ಚೆಲುವರಾಯಸ್ವಾಮಿ ಮತ್ತವರ ತಂಡ ಅಸಮಾಧಾನಗೊಂಡಿದೆ ಎಂದು ಎಚ್. ಡಿ ಕುಮಾರಸ್ವಾಮಿ ಅವರಿಗೂ ಗೊತ್ತಿದೆ ಎಂದರು.