ETV Bharat / state

10 ಸಾವಿರ ಮಕ್ಕಳಿಗೆ 1 ಲಕ್ಷ ನೋಟ್ ಬುಕ್ ವಿತರಣೆ: ರಕ್ಷಾ ಫೌಂಡೇಶನ್‌ ವತಿಯಿಂದ ಕಾರ್ಯ

ಉತ್ತಮ ಶಿಕ್ಷಣ ಉತ್ತಮ ಪುಸ್ತಕಗಳಿಂದ ಬರುವುದಿಲ್ಲ. ಉತ್ತಮ ಬೋಧನೆಯಿಂದಲೂ ಸಿಗುವುದಿಲ್ಲ. ಉತ್ತಮರಾಗಬೇಕು ಎನ್ನುವ ತುಡಿತ ನಮ್ಮ ಮನಸ್ಸಿನಲ್ಲಿರಬೇಕು. ಮನಸ್ಸು ಎನ್ನುವುದು ಕುದುರೆ ಇದ್ದಂತೆ. ಅದಕ್ಕೆ ಲಗಾಮು ಹಾಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ ಎಂದು ಸುಧಾಮೂರ್ತಿ ಮಕ್ಕಳಿಗೆ ಕಿವಿಮಾತು ಹೇಳಿದರು.

ನೋಟ್ ಬುಕ್ ವಿತರಿಸಿದ ಸುಧಾಮೂರ್ತಿ
author img

By

Published : Jun 23, 2019, 3:27 PM IST

ಬೆಂಗಳೂರು: ರಕ್ಷಾ ಫೌಂಡೇಷನ್ ಕಳೆದ 8 ವರ್ಷಗಳಿಂದ ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುತ್ತಿದೆ.

ರಕ್ಷಾ ಫೌಂಡೇಷನ್ ವತಿಯಿಂದ ನೋಟ್ ಬುಕ್ ವಿತರಣೆ

ವಿಕಲಚೇತನ ಹಾಗೂ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, 30 ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳಿಗೆ ಗಡಿಯಾರ ಹಾಗೂ ಐವತ್ತು ಮಕ್ಕಳಿಗೆ ಸೈಕಲ್ ವಿತರಿಸಲಾಯಿತು. ಜೊತೆಗೆ ಎಸ್‌ಎಸ್‌ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮತ್ತು ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 10,000 ವಿದ್ಯಾರ್ಥಿಗಳಿಗೆ 1,00,000 ಉಚಿತ ಪುಸ್ತಕಗಳು, ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.

ನಂತರ ಮಾತನಾಡಿದ ಸುಧಾಮೂರ್ತಿ, ಉತ್ತಮ ಶಿಕ್ಷಣ ಉತ್ತಮ ಪುಸ್ತಕಗಳಿಂದ ಬರುವುದಿಲ್ಲ. ಉತ್ತಮ ಬೋಧನೆಯಿಂದಲೂ ಸಿಗುವುದಿಲ್ಲ. ಉತ್ತಮರಾಗಬೇಕು ಎನ್ನುವ ತುಡಿತ ನಮ್ಮ ಮನಸ್ಸಿನಲ್ಲಿರಬೇಕು. ಮನಸ್ಸು ಎನ್ನುವುದು ಕುದುರೆ ಇದ್ದಂತೆ. ಅದಕ್ಕೆ ಲಗಾಮು ಹಾಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ನಿರಂತರ ಬರವಣಿಗೆ, ಓದಿನಿಂದ ಯಶಸ್ಸು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರಿಗೆ ಗೌರವ ನೀಡಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಜಾತಿ, ಮತ, ಪಂಥಗಳನ್ನು ದಾಟಿ ವಿದ್ಯಾರ್ಥಿ ಸಮುದಾಯ ಮುನ್ನಡೆಯಬೇಕು. ದೃಢವಾದ ಮನಸ್ಸಿದ್ದರೆ, ಸದೃಢವಾದ ದೇಶಕಟ್ಟಲು ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಜಯನಗರ ಶಾಸಕಿ ಸೌಮ್ಯ ರೆಡ್ಡಿ , ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸಮಾಜ ಸೇವಕಿ ಡಾ.ಸುಧಾಮೂರ್ತಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ, ಹಾಗೂ ಬಿಬಿಎಂಪಿ ಸದಸ್ಯರಾದ ಹೆಚ್ .ಸಿ ನಾಗರತ್ನ ರಾಮಮೂರ್ತಿ, ಎನ್ ನಾಗರಾಜ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಹತ್ತು ಸಾವಿರ ಮಕ್ಕಳಿಗೆ ೧ ಲಕ್ಷ ನೋಟ್ ಬುಕ್ ವಿತರಿಸಿದ ಸುಧಾಮೂರ್ತಿ ಹಾಗೂ ಬಿಎಸ್ ಯಡಿಯೂರಪ್ಪ..!!!!!

ರಕ್ಷಾ ಫೌಂಡೇಷನ್ ಕಳೆದ ೮ ವರ್ಷಗಳಿಂದ ಸಾಮಾಜಿಕ ಕಳಕಳಿ ಉದ್ದೇಶ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಾ ಬಂದಿದು . ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಜಯನಗರ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ೩೦ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.   ವಿಕಲಚೇತನ ಹಾಗೂ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ೩೦ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳಿಗೆ ಗಡಿಯಾರ ಹಾಗೂ ಐವತ್ತುಮಕ್ಕಳಿಗೆ
ಸೈಕಲ್ ವಿತರಿಸಲಾಯಿತು.ಇನ್ನೂ ಸಮಾರಂಭದಲ್ಲಿ
ಮಾಜಿ ಸಿಎಮ್ ಯಡಿಯೂರಪ್ಪ,ಜಯನಗರ
ಶಾಸಕಿಯಾದ ಸೌಮ್ಯ ರೆಡ್ಡಿ , ಇನ್ಪೋಸಿಸ್ ಫೌಂಡೇಶನ್
ಅಧ್ಯಕ್ಷರಾದ ಸಮಾಜ ಸೇವಕಿ ಡಾ.ಸುಧಾ ಮೂರ್ತಿ,
ಮೇಯರ್ ಗಂಗಾಭಿಕೆ ಮಲ್ಲಿಕಾರ್ಜುನ್, ಸಂಸದರಾದ ತೇಜಸ್ವಿ ಸೂರ್ಯ, ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಮಾಜಿಪಕ ಸದಸ್ಯೆ ತಾರಾ ಅನೂರಾಧ, ಹಾಗೂ ಬಿಬಿಎಮ್ ಪಿ ಸದಸ್ಯರಾದ ಹೆಚ್,ಸಿ.ನಾಗರತ್ನ ರಾಮಮೂರ್ತಿ, ಎನ್ ನಾಗರಾಜ್ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ ಅಭಿವೃದ್ಧಿಯ ವೇಗದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವುದು ಆತಂಕಕಾರಿಯಾಗಿದೆ ಇಂತಹ ಸಮಯದಲ್ಲಿ ರಾಮಮೂರ್ತಿ ಉತ್ತಮ ಕೆಲಸ ಮಾಡ್ತಿದ್ದಾರೆ ಎಂದರು ನಂತರ ಮಾತಾನಡಿದ ಸುಧಾಮೂರ್ತಿಅವರು  ತಾವು ಹತ್ತನೇ ತರಗತಿವರೆಗೆ ಕನ್ನಡದಲ್ಲಿ ಕಲಿತಿದ್ದನ್ನು ಸ್ಮರಿಸಿಕೊಂಡರು. ಪಿಯುಸಿಯಲ್ಲಿ ಇಂಗ್ಲೀಷ್ ಮಾಧ್ಯಮ ಸೇರಿದ ನಂತರ ಇಂಗ್ಲೀಷ್ ಕಷ್ಟವಾಗುತ್ತಿತ್ತು. ಬಳಿಕ ನನ್ನ ಅಮ್ಮನ ಸೂಚನೆಯಂತೆ ನಿರಂತರ ಪ್ರಯತ್ನದ ಫಲವಾಗಿ ಇಂಜಿಯರಿಂಗ್ ನಲ್ಲಿ ಮೊದಲ ರ‍್ಯಾಂಕ್ ಪಡೆದು ಸಾಧನೆ ಮಾಡಿದೆ ಎಂದರು. ಉತ್ತಮ ಶಿಕ್ಷಣ ಉತ್ತಮ ಪುಸ್ತಕಗಳಿಂದ ಬರುವುದಿಲ್ಲ. ಉತ್ತಮ ಬೋಧನೆಯಿಂದಲೂ ಸಿಗುವುದಿಲ್ಲ. ಉತ್ತಮರಾಗಬೇಕು ಎನ್ನುವ ತುಡಿತ ನಮ್ಮ ಮನಸ್ಸಿನಲ್ಲಿರಬೇಕು. ಮನಸ್ಸು ಎನ್ನುವುದು ಕುದುರೆ ಇದ್ದಂತೆ. ಅದಕ್ಕೆ ಲಗಾಮು ಹಾಕಿದರೆ ಮಾತ್ರ ನಿಯಂತ್ರಣಕ್ಕೆ ಬರುತ್ತದೆ. ಅದೇ ರೀತಿ ನಿರಂತರ ಬರವಣಿಗೆ, ಓದಿನಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದರು.  ವಿದ್ಯಾರ್ಥಿಗಳು ಹಿರಿಯರು, ಶಿಕ್ಷಕರಿಗೆ ಗೌರವನೀಡಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ಜಾತಿ, ಮತ, ಪಂಥಗಳನ್ನು ದಾಟಿ ವಿದ್ಯಾರ್ಥಿ ಸಮುದಾಯ ಮುನ್ನಡೆಯಬೇಕು. ದೃಢವಾಧ ಮನಸ್ಸಿದ್ದರೆ, ಸದೃಢವಾದ ದೇಶಕಟ್ಟಲು ಸಾಧ್ಯ ಎಂದು ಡಾ. ಸುಧಾರಮೂರ್ತಿ ಹೇಳಿದರು. ಜೀವನದಲ್ಲಿ ಕಠಿಣ ಪರಿಶ್ರಮದಿಂದ ಮಾತ್ರ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ. ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣದಿಂದ ಮಾತ್ರ ಪರಿಹಾರವಿದೆ. ನಾವು ನೀಡುವ ಶಿಕ್ಷಣ ವ್ಯಕ್ತಿಯ ಭವಿಷ್ಯ ರೂಪಿಸುವ ಜತೆಗೆ, ಸಮಾಜಕ್ಕೆ ಬೇಕಾದ ವ್ಯಕ್ತಿಯನ್ನೂ ಸಹ ನಿರ್ಮಾಣ ಮಾಡುವಂತಾಗಬೇಕು. ಸಮಾಜಕ್ಕೆ ಪೂರಕವಲ್ಲದ ವ್ಯಕ್ತಿಗಳಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಣವನ್ನು ಅಂಕಗಳಿಂದ ಅಳೆಯುವುದಲ್ಲ. ತನಗಾಗಿ ಅಲ್ಲ ಸಮಾಜಕ್ಕಾಗಿ ಬದುಕುವಂತಹ ವಿನಯವಂತಿಕೆಯನ್ನು, ಸೌಜನ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸಿದಾಗ ಮಾತ್ರ ಶಿಕ್ಷಣ ಮತ್ತು ಬದುಕಿಗೆ ಅರ್ಥ ಬರುತ್ತದೆ ಎಂದರು.  ಅಲ್ಲದೆ ವಿದ್ಯಾರ್ಥಿಗಳು ಡಾ‌‌.ಬಿಅರ್ ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದ ಅವರನ್ನು ಸ್ಫೂರ್ತಿಯಾಗಿ ರೆಗೆದು ಕೊಂಡರೆ ಉನ್ನತ ಸ್ಥಾನ ಮುಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು.
ನಂತರ ಮಾತನಾಡಿದ ರಕ್ಷಾ ಪ್ರತಿಷ್ಠಾನದ ಅಧ್ಯಕ್ಷ ಕೆ.ಸಿ.ರಾಮಮೂರ್ತಿ ವಿದ್ಯಾಭ್ಯಾಸದ ಜತೆಗೆ ಉತ್ತಮ ವ್ಯಕ್ತಿತ್ವವನ್ನು ಸಹ ಬೆಳೆಸಿಕೊಳ್ಳಬೇಕು. ಚಾರಿತ್ರ್ಯ, ಸಂಸ್ಕಾರ ಇಲ್ಲದ ಶಿಕ್ಷಣ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳು ಸತತ ಪರಿಶ್ರಮ, ನಿರಂತರ ಅಧ್ಯಯನ ಮಾಡಿದರೆ ಅಂತಹವರ ವ್ಯಕ್ತಿತ್ವಕ್ಕೆ ಹೊಳಪು ದೊರೆಯುತ್ತದೆ. ಜತೆಗೆ ಉತ್ತಮ ವಾತಾವರಣ, ಒಳ್ಳೆಯವರ ಸಹವಾಸದಿಂದ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.ಇನ್ನೂ  ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ೧೦,೦೦೦ ವಿದ್ಯಾರ್ಥಿಗಳಿಗೆ ೧,೦೦,೦೦೦ ಉಚಿತ ಪುಸ್ತಕಗಳು, ಮತ್ತಿತರ ಸೌಲಭ್ಯ ವಿತರಿಸಲಾಯಿತ.ಇನ್ನು ಈ ಕಾರ್ಯಕ್ರಮಕ್ಕೆ ಜಯನಗದ ಸುತ್ತಮುತ್ತಲಿನ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲಮಕ್ಕಳು ಭಾಗವಹಿಸಿದ್ರು..

ಸತೀಶ ಎಂಬಿ

( ವಿಸ್ಯುವಲ್ಸಗ ಮೊಜೊದಲ್ಲಿ ಕೊಡಲಾಗಿದೆ)

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.