ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2019, 3ನೇ ದಿನಕ್ಕೆ ಕಾಲಿಟ್ಟಿದೆ. ಮಹಿಳಾ ದಿನಾಚರಣೆ ಆಚರಿಸುತ್ತಿರುವ ವಾಯುಪಡೆ, ಮಹಿಳಾ ಪೈಲೆಟ್ಗಳಿಗೆ ಇಂದು ವಿಶೇಷ ಸನ್ಮಾನ ಹಾಗೂ ಗೌರವ ಸೂಚಿಸಲಿದೆ.
ವೀಕೆಂಡ್ ಇರುವ ಕಾರಣ ಸಾಕಷ್ಟು ಜನ ಏರ್ ಶೋ ವೀಕ್ಷಿಸಲು ಬರಲಿದ್ದು, ರಕ್ಷಣಾ ಸಚಿವಾಲಯದ ಪ್ರಕಾರ ಮೂರನೇ ದಿನದಿಂದ ಸಾರ್ವಜನಿಕರಿಗೆ ಏರೋ ಇಂಡಿಯಾದ ದ್ವಾರ ತೆರೆಯಲಿದೆ. ನಮ್ಮ ದೇಶದ ಯುದ್ಧ ವಿಮಾನಗಳು ಹಾಗೂ ಏರೋಬ್ಯಾಟಿಕ್ ತಂಡಗಳು ಈಗಾಲೇ ಸಜ್ಜಾಗಿವೆ. ವಿಶೇಷ ಎಂದರೆ ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧು ವಿಮಾನದಲ್ಲಿ ಹಾರಾಡಲಿದ್ದಾರೆ.
ಇತ್ತ ಫೈನಲ್ ಚೆಕ್ ಮಾಡುತ್ತಿರುವ ಯುದ್ಧ ವಿಮಾನಗಳು ಎಲ್ಲ ತಪಾಸಣೆ ಮುಗಿಸಿ ಬಾನಿಗೆ ಹಾರುವ ಕಾತುರದಲ್ಲಿದ್ದರೆ, ಅತ್ತ ಈ ಅದ್ಭುತವಾದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರೂ ಕಾಯುತ್ತಿದ್ದಾರೆ.
ಸೂರ್ಯಕಿರಣ್ ವಿಮಾನ ಸಹ ಇಂದು ತನ್ನ ಸಾಹಸ ಪ್ರದರ್ಶನ ಬಾನಂಗಳದಲ್ಲಿ ತೋರಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸೂರ್ಯಕಿರಣ್ ಗಾಂಧಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ ಮಾಡಿ ಮತ್ತೆ ಏರೋ ಇಂಡಿಯಾದಲ್ಲಿ ಹಾರಾಡಲಿರಲಿಲ್ಲ. ಆದರೆ, ಇಂದು ಸೂರ್ಯ ಕಿರಣ್ ಆಗಸದಲ್ಲಿ ತನ್ನ ಸಾಹಸ ಪ್ರದರ್ಶಿಸಿದೆ.