ETV Bharat / state

ಬಿಜೆಪಿಗೆ ರಿವರ್ಸ್ ಆಪರೇಷನ್ ಭೀತಿ.. ರಮಡ ರೆಸಾರ್ಟ್​ನತ್ತ ಕೇಸರಿ ಪಾಳಯದ ಶಾಸಕರು.. - ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್

ಮೈತ್ರಿ ಪಕ್ಷಗಳ ರಿವರ್ಸ್​​ ಆಪರೇಷನ್​ನಿಂದ ತಪ್ಪಿಸಿಕೊಳ್ಳಲು ಬಿಜೆಪಿ ತನ್ನೆಲ್ಲ ಶಾಸಕರನ್ನೂ ಯಲಹಂಕದ ರಮಡ ರೆಸಾರ್ಟ್​​ಗೆ ಸ್ಥಳಾಂತರಿಸಲು ಮುಂದಾಗಿದೆ. ಯಲಹಂಕ ಶಾಸಕ ಎಸ್ ಆರ್‌ ವಿಶ್ವನಾಥ್ ಇದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ರಮಡ ರೆಸಾರ್ಟ್​
author img

By

Published : Jul 12, 2019, 7:23 PM IST

Updated : Jul 12, 2019, 7:29 PM IST

ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ರಿವರ್ಸ್ ಆಪರೇಷನ್ ಮಾಡಬಹುದು ಎನ್ನುವ ಭೀತಿ ಬಿಜೆಪಿಗಿದೆ. ಇದೇ ಕಾರಣಕ್ಕೆ ತನ್ನೆಲ್ಲ ಶಾಸಕರನ್ನೂ ಒಂದೆಡೆ ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಹಾಗಾಗಿ ಬಿಜೆಪಿ ಶಾಸಕರೂ ಸಹ ರೆಸಾರ್ಟ್​ ಸೇರಿದ್ದಾರೆ.

ರಮಡ ರೆಸಾರ್ಟ್​ನತ್ತ ಧಾವಿಸುತ್ತಿರುವ ಬಿಜೆಪಿ ಶಾಸಕರು..

ರಿವರ್ಸ್ ಆಪರೇಷನ್​ನಿಂದ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿರುವ ಬಿಜೆಪಿ, ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್​ನಲ್ಲಿ 35 ಕೊಠಡಿಗಳನ್ನು ಬುಕ್ ಮಾಡಿದೆ. ಯಲಹಂಕ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಬರುವ ಹೊನ್ನೇನಹಳ್ಳಿ ರಮಡ ರೆಸಾರ್ಟ್‌ನಲ್ಲಿ ಶಾಸಕರು ವಾಸ್ತವ್ಯ ಹೂಡಲು ಸಕಲ ಸಿದ್ದತೆಗಳನ್ನು ಮಾಡಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ವಹಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ರಮಡ ರೆಸಾರ್ಟ್​ನತ್ತ ಒಬ್ಬೊಬ್ಬರೇ ಬಿಜೆಪಿ ಮುಖಂಡರು ಆಗಮಿಸುತ್ತಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಶಾಸಕ ನಡಹಳ್ಳಿ, ಎಂಎಲ್‌ಸಿ ರವಿಕುಮಾರ್, ಸುರಪುರ ಶಾಸಕ ರಾಜುಗೌಡ, ಈಗಾಗಲೇ ರೆಸಾರ್ಟ್ ತಲುಪಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಎರಡು ಬಸ್​ಗಳ ಮೂಲಕ ಇನ್ನುಳಿದ ಬಿಜೆಪಿ ಶಾಸಕರು ರೆಸಾರ್ಟ್​ ತಲುಪಲಿದ್ದಾರೆ. ರೆಸಾರ್ಟ್ ಸುತ್ತಮುತ್ತ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ. ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ಸ್ಥಳದಲ್ಲೇ ಇದ್ದುಕೊಂಡು, ಯಾವುದೇ ಕುಂದುಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ.

Intro:ಬಿಜೆಪಿ ಶಾಸಕರು ಉಳಿದುಕೊಳ್ಳಲು ರೆಸಾರ್ಟ್ ನಲ್ಲಿ ಸಕಲ ಸಿದ್ದತೆ: 35 ರೂಮ್ಗಳು ಬುಕ್.
ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಸಕಲ ಸಿದ್ಧತೆ

ಬೆಂಗಳೂರು: ಕ್ರಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದು ಯಲಹಂಕ ಬಳಿಯ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ ನಲ್ಲಿ 35 ಕೊಠಡಿಗಳನ್ನು ಬುಕ್ ಮಾಡಿದೆ.

ಯಲಹಂಕ ದೊಡ್ಡಬಳ್ಳಾಪುರ ರಸ್ತೆಯ ಹೊನ್ನೆನಹಳ್ಳಿಯಲ್ಲಿರುವ ರಮಡ ರೆಸಾರ್ಟ್ ನಲ್ಲಿ 35 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಇನ್ನು, ಶಾಸಕರು ವಾಸ್ತವ್ಯ ಹೂಡಲು ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವಹಿಸಿಕೊಂಡಿದ್ದಾರೆ.

Body:ಈಗಾಗಲೇ ರಮಡ ರೆಸಾರ್ಟ್ ನತ್ತ ಒಬ್ಬೋಬ್ಬರೇ ಬಿಜೆಪಿ ಮುಖಂಡರುಆಗಮಿಸುತ್ತಿದ್ದಾರೆ. ಎಂಎಲ್‌ಸಿ ರವಿಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗಮನ.
ಇದಕ್ಕು ಮುನ್ನ ಆಗಮಿಸಿದ ಶಾಸಕ ನಡಹಳ್ಳಿ,ಸುರಪುರ ಶಾಸಕ ರಾಜುಗೌಡ
ಈಗಾಗಲೇ ರೆಸಾರ್ಟ್ ತಲುಪಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಎರಡು ಬಸ್ಗಳ ಮೂಲಕ ಬಿಜೆಪಿ ಶಾಸಕರು ರೆಸಾರ್ಟ್ ತಲುಪಲಿದ್ದಾರೆ.

Conclusion:ರೆಸಾರ್ಟ್ ಸುತ್ತಮುತ್ತ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದು. ಸ್ಥಳದಲ್ಲೆ ಪೊಲೀಸರು ಬೀಡು ಬಿಟ್ಟಿದ್ದಾರೆ. ಇನ್ನು ಶಾಸಕ ಎಸ್.ಆರ್.ವಿಶ್ವನಾಥ್ ಸ್ಥಳದಲ್ಲೆ ಇದ್ದುಕೊಂಡು. ರೆಸಾರ್ಟ್ ನ ಪ್ರತಿಯೊಂದು ಕಡೆ ಪರಿಶೀಲಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಿ. ಯಾವುದೇ ಕುಂದುಕೊರತೆ ಬರದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

Last Updated : Jul 12, 2019, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.