ETV Bharat / state

ಸೋಲಿಲ್ಲದ ಸರದಾರ ಖರ್ಗೆ, ದೇವೇಗೌಡರ ಸೋಲು ತೀರಾ ನೋವುಂಟು ಮಾಡಿದೆ: ದೇಶಪಾಂಡೆ - ದೇಶಪಾಂಡೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ಹಿನ್ನಡೆ ಕುರಿತು ಆರ್.ವಿ.ದೇಶಪಾಂಡೆ ಮಾತನಾಡಿ, ಕಾಂಗ್ರೆಸ್​​ನಲ್ಲಿ 5 ದಶಕಗಳಿಂದ ಇದ್ದೇನೆ. ಆದರೆ ಪಕ್ಷಕ್ಕೆ ಈ ರೀತಿಯ ಹಾನಿ ಉಂಟಾಗಿರುವುದು ಬೇಸರ ತಂದಿದೆ ಎಂದಿದ್ದಾರೆ.

ಲೋಕಸಭಾ ಚುನಾವಣೆ
author img

By

Published : May 23, 2019, 8:11 PM IST

ಬೆಂಗಳೂರು: ಯಾರಿಗೆ ಎಲ್ಲಿ ಟಿಕೆಟ್ ನೀಡಬೇಕು ಎಂಬುದನ್ನು ನಾವು ಮೊದಲೇ ತೀರ್ಮಾನಿಸಬೇಕಿತ್ತು. ಬಹಳ ಲೇಟಾಗಿ ನಿರ್ಧಾರ ಕೈಗೊಂಡಿದ್ದು ಈ ಫಲಿತಾಂಶಕ್ಕೆ ಕಾರಣವಾಯಿತು ಎಂಬುದು ನನ್ನ ಅಭಿಪ್ರಾಯ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತಪ್ಪು ಅಂತ ಹೇಳಲ್ಲ. ಆದರೆ, ಉತ್ತರ ಕನ್ನಡದಲ್ಲಿ ಅವರ ಅಸ್ತಿತ್ವ ಇಲ್ಲ. ಹೀಗಾಗಿ, ಉತ್ತರ ಕನ್ನಡದಲ್ಲಿ ಜೆಡಿಎಸ್​ಗೆ ಸೀಟು ನೀಡಬೇಡಿ ಎಂದು ಹೇಳಿದ್ದೆವು. ಜೆಡಿಎಸ್​​ಗೆ ಬಲವಿಲ್ಲದಿದ್ದರೂ ಸೀಟು ಹಂಚಿಕೆ ಮಾಡಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್​​ನಲ್ಲಿ ನಾನು 5 ದಶಕಗಳಿಂದ ಇದ್ದೇನೆ. ಆದರೆ, ಪಕ್ಷಕ್ಕೆ ಈ ರೀತಿಯ ಹಾನಿಯಾಗಿರುವುದು ನನಗೆ ಬೇಸರ ಉಂಟುಮಾಡಿದೆ. ಖರ್ಗೆ ಸೋಲಿಲ್ಲದ ಸರದಾರ. ಆದರೂ ಸೋತಿರುವುದು ತೀರಾ ನೋವುಂಟು ಮಾಡಿದೆ. ದೇವೇಗೌಡರು ಸೋತಿದ್ದಕ್ಕೂ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಖರ್ಗೆ, ದೇವೇಗೌಡರು ಸೋತಿರುವುದು ನೋವುಂಟು ಮಾಡಿದೆ: ಸಚಿವ ದೇಶಪಾಂಡೆ

ಫಲಿತಾಂಶದಿಂದ ಮೈತ್ರಿ ಸರ್ಕಾರಕ್ಕೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೆಕಿದೆ. ರಾಷ್ಟ್ರಮಟ್ಟದಲ್ಲಿ ಈ ಬಗ್ಗೆ ಕೂತು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮೋದಿಗೆ ಅಭಿನಂದನೆ ತಿಳಿಸಿದ ದೇಶಪಾಂಡೆ:

ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಹಾಗೆಯೇ ಅವರಿಗೆ ನನ್ನದೊಂದು ಮನವಿ ಏನಂದರೆ ಜನ ಐದು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸುವ ಅವಕಾಶ ಕೊಟ್ಟಿದ್ದಾರೆ. ರಾಷ್ಟ್ರದಲ್ಲಿ ನಿರುದ್ಯೋಗ ಜ್ವಲಂತವಾಗಿದೆ. ಹಾಗೆ ರೈತರು ಕಷ್ಟದಲ್ಲಿದ್ದಾರೆ. ಈ ಬಗ್ಗೆ ಮೋದಿಯವರು ಹೆಚ್ಚಿನ ಗಮನ ಹರಿಸಬೇಕು ಎಂದರು.

Intro:ಸುದ್ದಿ

Body:wrap ಮೂಲಕ ಕಳುಹಿಸಲಾಗುವುದು

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.