ETV Bharat / state

ಸಿಎಲ್​ಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ: ಅಧಿವೇಶನ ಮುಗಿಸಿ ವಾಪಾಸ್ ಹೋಟೆಲ್​ಗೆ ಬರಲು ಕೈ ಶಾಸಕರಿಗೆ ಸೂಚನೆ - undefined

ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಧಿವೇಶನ ಮುಗಿಸಿ ವಾಪಾಸ್ ಹೋಟೆಲ್​ಗೆ ಬರಲು ಹಾಗೂ ಬುಧವಾರದ ವರೆಗೂ ಶಾಸಕರು ಹೋಟೆಲ್​ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.

ಸಿಎಲ್​ಪಿ ಸಭೆ
author img

By

Published : Jul 15, 2019, 12:36 PM IST

ಬೆಂಗಳೂರು: ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ತಾಜ್ ವಿವಾಂತದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.

ಅಧಿವೇಶನದಲ್ಲಿ, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು, ಯಾರೂ ಗೈರು ಹಾಜರಾಗಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ‌ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬರಲಿದ್ದು, ತೀರ್ಪಿನ ಆಧಾರದ ಮೇಲೆ ಮುಂದಿನ ಹೆಜ್ಜೆ ಇಡುವುದರ ಬಗ್ಗೆ ಚರ್ಚಿಸಲಾಗಿದ್ದು, ಹೀಗಾಗಿ ಬುಧವಾರದ ವರೆಗೂ ಶಾಸಕರು ಹೋಟೆಲ್​ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.

ರಾಜೀನಾಮೆ ನೀಡಿರುವ ಶಾಸಕ ರಾಮಲಿಂಗಾ ರೆಡ್ಡಿ ಶಾಸಕಾಂಗ ಸಭೆಗೆ ಬಾರದಿದ್ದರೂ ವಿಧಾನಸೌಧ ಅಧಿವೇಶನಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸೌಮ್ಯ ರೆಡ್ಡಿ, ದಿನೇಶ್ ಗುಂಡೂರಾವ್, ಡಿಕೆಶಿ, ಹೆಚ್ ಕೆ ಪಾಟೀಲ್, ಯು ಟಿ ಖಾದರ್ , ಕೆ.ಜೆ. ಜಾರ್ಜ್ ಭಾಗಿಯಾಗಿದ್ದರು.

ಸಚಿವರು-ಕಾರ್ಯಕರ್ತರ ನಡುವೆ ಮಾತಿನ ಚಕಮಕಿ:

ಸಿಎಲ್​ಪಿ ಸಭೆ ಮುಗಿಸಿ ಹೊರಬಂದ ಸಚಿವ ಪಿ ಟಿ ಪರಮೇಶ್ವರ್ ನಾಯಕ್ ತಮ್ಮ ಕಾರು ಹತ್ತಿ ಹೊರಡಲು ಸಿದ್ಧವಾದಾಗ ಕಾರ್ಯಕರ್ತರು ತಡೆದು, ಎಲ್ಲರೂ ಬಸ್​​ನಲ್ಲೇ ಹೋಗಬೇಕೆಂದು ಒತ್ತಾಯಿಸಿದರು‌. ಆದ್ರೆ ಕೆಲವು ವೈಯಕ್ತಿಕ ಕೆಲಸವಿದ್ದ ಕಾರಣ ಕಾರ್​​ನಲ್ಲೇ ತೆರಳುವುದಾಗಿ ತಿಳಿಸಿ ಸಚಿವರು ಹೋದರು. ಈ ವೇಳೆ ಹೋಟೆಲ್​ ಮುಂದೆ ಗದ್ದಲ, ಗಲಾಟೆ ವಾತಾವರಣ ಸೃಷ್ಟಿಯಾಗಿತ್ತು.

Intro:ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಬಿಸಿಬಿಸಿ ಚರ್ಚೆ- ಅಧಿವೇಶನ ಮುಗಿಸಿ ವಾಪಾಸ್ ಹೋಟೇಲ್ ಗೆ ಬರಲು ಸೂಚನೆ

ಬೆಂಗಳೂರು- ಸಿಎಲ್ ಪಿ ನಾಯಕ ಸಿದ್ಧರಾಮಯ್ಯ ಹಾಗೂ ಉಸ್ತುವಾರಿ ಕೆಸಿ ವೇಣುಗೋಪಾಲ್ ನೇತೃತ್ವದಲ್ಲಿ ತಾಜ್ ವಿವಾಂತದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು.
ಅಧಿವೇಶನದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಬೇಕು, ಯಾರೂ ಗೈರು ಹಾಜರಾಗಬಾರದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಅಲ್ಲದೆ‌ ನಾಳೆ ಸುಪ್ರೀಂ ಕೋರ್ಟ್ ತೀರ್ಪು ಬರಲಿದ್ದು, ತೀರ್ಪಿನ ಆಧಾರದಲ್ಲಿ ಮುಂದಿನ ಹೆಜ್ಜೆ ಒಡುವುದರ ಬಗ್ಗೆ ಚರ್ಚಿಸಲಾಯಿತು. ಹೀಗಾಗಿ ಬುಧವಾರದ ವರೆಗೂ ಶಾಸಕರು ಹೋಟೇಲ್ ನಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.
ರಾಜಿನಾಮೆ ನೀಡಿರುವ ಶಾಸಕ ರಾಮಲಿಂಗಾ ರೆಡ್ಡಿ ಶಾಸಕಾಂಗ ಸಭೆಗೆ ಬಾರದಿದ್ದರೂ ವಿಧಾನಸೌಧ ಅಧಿವೇಶನಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಗೆ ಸೌಮ್ಯ ರೆಡ್ಡಿ, ದಿನೇಶ್ ಗುಂಡೂರಾವ್, ಡಿಕೆಶಿ, ಎಚ್ ಕೆ ಪಾಟೀಲ್, ಯು ಟಿ ಖಾದರ್ ,ಕೆ.ಜೆ ಜಾರ್ಜ್ ಭಾಗಿಯಾಗಿದ್ದರು.

ಸಚಿವರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಸಿಎಲ್ ಪಿ ಸಭೆ ಮುಗಿಸಿ ಹೊರಬಂದ ಸಚಿವ ಪಿಟಿ ಪರಮೇಶ್ವರ್ ನಾಯಕ್ ತಮ್ಮ ಕಾರು ಹತ್ತಿ ಹೊರಡಲು ಸಿದ್ಧವಾದಗ ಕಾರ್ಯಕರ್ತರು ತಡೆದರು. ಈ ವೇಳೆ ಗಲಾಟೆ ನಡೆದು, ಎಲ್ಲಾರೂ ಬಸ್ ನಲ್ಲೇ ಹೋಗಬೇಕೆಂದು ಒತ್ತಾಯಿಸಿದರು‌. ಆದ್ರೆ ಕೆಲವು ವೈಯಕ್ತಿಕ ಕೆಲಸವಿದ್ದ ಕಾರಣ ಕಾರ್ ನಲ್ಲೇ ತೆರಳುವುದಾಗಿ ತಿಳಿಸಿ ಹೋದರು. ಆದ್ರೆ ಈ ಸಮಯದಲ್ಲಿ ಹೋಟೇಲ್ ಮುಂದೆ ಗದ್ದಲ, ಗಲಾಟೆ ವಾತಾವರಣ ಸೃಷ್ಟಿಯಾಗಿತ್ತು.

ಸೌಮ್ಯಶ್ರೀ
Kn_Bng_01_CLP_meeting_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.