ETV Bharat / state

ಲೋಕ ಅಖಾಡದಲ್ಲಿ ಬಿಜೆಪಿಯಿಂದ 90 ಸಾವಿರ ಕೋಟಿ ಹಣದ ಹೊಳೆ ಹರಿಯಲಿದೆ: ಭೂಷಣ್

ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಸೇರಿ 1 ಲಕ್ಷ ಕೋಟಿ ರೂ. ವ್ಯಯಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದರಲ್ಲಿ ಶೇ. 90ರಷ್ಟು ಬಿಜೆಪಿಯೇ ಖರ್ಚು ಮಾಡಲಿದೆ: ಪ್ರಶಾಂತ್ ಭೂಷಣ್

ಪಕ್ಷದ ನಿಧಿ
author img

By

Published : Mar 30, 2019, 10:22 PM IST

ಬೆಂಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದ್ದು, ಅಂದಾಜು 90 ಸಾವಿರ ಕೋಟಿ ರೂ. ಖರ್ಚು ಮಾಡಲಿದೆ ಎಂದು ಸುಪ್ರೀಂ ಕೋರ್ಟ್​ನ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು 1 ಲಕ್ಷ ಕೋಟಿ ರೂ. ವ್ಯಯಿಸಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದರಲ್ಲಿ ಶೇ. 90ರಷ್ಟು ಬಿಜೆಪಿಯೇ ಖರ್ಚು ಮಾಡಲಿದೆ ಎಂದು ಸ್ವರಾಜ್ ಅಭಿಯಾನದಡಿ 'ರಿಕ್ಲೈಮಿಂಗ್ ದಿ ರಿಪಬ್ಲಿಕ್' ಪ್ರಣಾಳಿಕೆ ಬಿಡುಗಡೆ ಮಾಡಿ ಪ್ರಶಾಂತ್​ ಭೂಷಣ್​ ಮಾತನಾಡಿದರು.

ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಹಣ ಬಲದ ಒತ್ತೆಯಾಳಾಗಿ ಸಾಗುತ್ತಿದ್ದು, ಇದನ್ನು ವಿಮೋಚನೆಗೊಳಿಸಬೇಕಿದೆ. ಇಡೀ ಚುನಾವಣಾ ವ್ಯವಸ್ಥೆಯೇ ಹಣದ ಮೇಲೆ ಅವಲಂಬಿತವಾಗಿದ್ದು, ರಾಜಕೀಯ ಪಕ್ಷಗಳು ಮಾಡುವ ಖರ್ಚಿಗೆ ಯಾವುದೇ ಮಿತಿಯಿಲ್ಲ ಎಂದು ಆಪಾದಿಸಿದ್ದಾರೆ.

ಚುನಾವಣಾ ನಿಧಿಯಲ್ಲಿನ ಪಾರದರ್ಶಕತೆಗೆ ತುರ್ತು ಕ್ರಮದ ಅವಶ್ಯಕತೆಯಿದೆ. ಭಾರತ ಹೊರತುಪಡಿಸಿ ಯಾವುದೇ ಹೊರರಾಷ್ಟ್ರಗಳಲ್ಲಿ ಹಣಕಾಸೇತರ ಎಲೆಕ್ಟ್ರಿಕ್​ ಬಾಂಡ್​ಗಳ ಮುಖೇನ ನಿಧಿ ಕಳುಹಿಸುವ ಪದ್ಧತಿ ಇಲ್ಲ. ಆದರೆ, ಭಾರತದಲ್ಲಿ ಕಾರ್ಪೊರೇಟ್ ಮತ್ತು ವಿದೇಶಿ ಘಟಕಗಳು ಯಾವುದೇ ಪಕ್ಷದ ನಿಧಿಗಳಿಗೆ ರಹಸ್ಯವಾಗಿಯೂ ಕಾನೂನುಬದ್ಧವಾಗಿ ಕಳುಹಿಸಬಹುದು. ದೇಶದಲ್ಲಿ ಚುನಾವಣಾ ಬಾಂಡ್​ಗಳಿಗೆ ಯಾವುದೇ ಪಾರದರ್ಶಕ ಸಾಧನ ಇಲ್ಲ ಎಂದು ಭೂಷಣ್​ ಅಸಮಾಧಾನ ವ್ಯಕ್ತಪಡಿಸಿದರು.

Intro:Body:

ಲೋಕ ಅಖಾಡದಲ್ಲಿ ಬಿಜೆಪಿ 90 ಸಾವಿರ ಕೋಟಿ ರೂ. ಹಣದ ಹೊಳೆ; ಭೂಷಣ್ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.