ಬೆಂಗಳೂರು; ಇಂದು ವಿಧಾನಸಭೆ ಅಧಿವೇಶನದ ಹಿನ್ನೆಲೆ ಯಲಹಂಕ ಬಳಿಯ ರಮಡ ರೆಸಾರ್ಟ್ನಲ್ಲಿ ತಂಗಿದ್ದ ಬಿಜೆಪಿ ಶಾಸಕರು ಎರಡು ಬಸ್ಗಳಲ್ಲಿ ವಿಧಾನಸೌಧಕ್ಕೆ ಬಂದಿಳಿದಿದ್ದಾರೆ.
ನಮ್ಮ ಪಕ್ಷದ ಶಾಸಕರನ್ನು ಮತ್ತೊಂದು ಪಕ್ಷ ಎಲ್ಲಿ ಸೆಳೆದು ಬಿಡುತ್ತೋ ಎಂಬ ಭಯದಲ್ಲಿ ಎಲ್ಲಾ ಪಕ್ಷಗಳು ರೆಸಾರ್ಟ್ ವಾಸ್ತವ್ಯ ಶುರುಮಾಡಿದ್ದವು. ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಎಲ್ಲಾ ಬಿಜೆಪಿ ಶಾಸಕರು ಸುರಕ್ಷಿತವಾಗಿ ಎರಡು ಬಸ್ಗಳ ಮೂಲಕ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ವಿಶೇಷವೆಂದರೆ ವಿಧಾನಸೌಧಕ್ಕೆ ಶಾಸಕರಿಗೂ ಮುನ್ನ ವಿರೋಧ ಪಕ್ಷದ ನಾಯಕ ಬಿ. ಎಸ್ ಯಡಿಯೂರಪ್ಪ ನಗು ಮೊಗದಿಂದಲ್ಲೇ ಆಗಮಿಸಿದರು. ಅಧಿವೇಶನಕ್ಕೂ ಮುನ್ನ ತಮ್ಮ ಶಾಸಕರೊಂದಿಗೆ ಬಿಎಸ್ವೈ ಸಭೆ ನಡೆಸಲಿದ್ದಾರೆ.