ಬೀದರ್: ಯುವಕನೊಬ್ಬನ ತಲೆಯ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದು ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದು ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹುಮನಾಬಾದ್ ತಾಲೂಕಿನ ಸುಲ್ತಾನಬಾದ್ ವಾಡಿ ಗ್ರಾಮದ ಈದ್ಗಾ ಮೈದಾನದ ಬಳಿ ಕೊಲೆ ನಡೆದಿದೆ. ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ವಾಹನಗಳ ವಿಮಾ ಕಂಪನಿಯೊಂದರ ಎಜೆಂಟ್ ಆಗಿದ್ದ ಮಹಮ್ಮದ್ ಅಫ್ಜಲ್ (28) ಕೊಲೆಯಾದ ವ್ಯಕ್ತಿ.