ಬೀದರ್/ಯಾದಗಿರಿ: ಬೀದರ್ನಲ್ಲಿ ಇಂದು 66 ಜನ ಸೋಂಕಿತರು ಪತ್ತೆಯಾಗಿದ್ದು, 84 ಜನರ ಗುಣಮುಖರಾಗಿದ್ದಾರೆ.
ಜಿಲ್ಲೆಯ ಔರಾದ್-08, ಬಸವಕಲ್ಯಾಣ-14, ಭಾಲ್ಕಿ-09, ಬೀದರ್-23, ಹುಮನಾಬಾದ್-06 ಹಾಗೂ ಅನ್ಯ ರಾಜ್ಯದ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 4213ಕ್ಕೆ ಏರಿಕೆಯಾಗಿದೆ. 3382 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 129 ಜನ ಮೃತಪಟ್ಟಿದ್ದಾರೆ. 401 ಜನರ ಗಂಟಲು ದ್ರವ ಮಾದರಿ ಪರಿಕ್ಷೆ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ 132 ಸೋಂಕಿತರು ಪತ್ತೆ
ಜಿಲ್ಲೆಯಲ್ಲಿ ಇಂದು 18 ಜನ ಸೋಂಕಿತು ಗುಣಮುಖರಾಗಿದ್ದು, ಈವರೆಗೆ ಒಟ್ಟು 3202 ಮಂದಿ ಡಿಸ್ಚಾರ್ಚ್ ಆಗಿದ್ದಾರೆ. ಇಂದು ಮತ್ತೆ ಹೊಸದಾಗಿ 132 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4827ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 1592. ಕೋವಿಡ್ಗೆ ಇಲ್ಲಿಯವರೆಗೆ 33 ಜನ ಮೃತಪಟ್ಟಿರುತ್ತಾರೆ.
ಇಂದು ವರದಿಯಾದ 132 ಪ್ರಕರಣಗಳಲ್ಲಿ 43 ಜನ ಯಾದಗಿರಿ ನಗರ ಮತ್ತು ಗ್ರಾಮೀಣ ಪ್ರದೇಶವರು, 46 ಜನ ಶಹಾಪೂರ ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದವರು. ಇನ್ನೂಳಿದ 43 ಪ್ರಕರಣಗಳು ಸುರಪೂರ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶದವರಾಗಿದ್ದಾರೆ.