ETV Bharat / state

ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮಹಿಳೆ ಮೃತದೇಹ ಪತ್ತೆ - ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮಹಿಳೆ

ಬುಧವಾರ ಸಂಜೆ ಹೊಲದಿಂದ ಸೋಯಾ ರಾಸಿ ಕೆಲಸ ಮಾಡಿ ಮನೆಗೆ ಬರುವಾಗ ಪರ್ತಾಪೂರ ತಾಂಡಾದಿಂದ ಮುಸ್ತಾಪೂರ ಕಡೆಗೆ ಹರಿದು ಹೋಗುವ ಹಳ್ಳ ದಾಟುತ್ತಿದ್ದ ವೇಳೆ ಆಕೆ ಕೊಚ್ಚಿಕೊಂಡು ಹೋಗಿದ್ದಳು.

Women dead body found
Women dead body found
author img

By

Published : Oct 30, 2020, 2:51 AM IST

ಬಸವಕಲ್ಯಾಣ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹರಿಯುತ್ತಿದ್ದ ಪರ್ತಾಪೂರ ಸಮೀಪದ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಮಹಿಳೆಯೊರ್ವರ ಶವ ಗುರುವಾರ ಪತ್ತೆಯಾಗಿದೆ.

ಗ್ರಾಮದ ವಿದ್ಯಾವತಿ ಶಿವಣ್ಣ(65) ಮೃತಪಟ್ಟ ಮಹಿಳೆ. ಬುಧವಾರ ಸಂಜೆ ಹೊಲದಿಂದ ಸೋಯಾ ರಾಸಿ ಕೆಲಸ ಮಾಡಿ ಮನೆಗೆ ಬರುವಾಗ ಪರ್ತಾಪೂರ ತಾಂಡಾದಿಂದ ಮುಸ್ತಾಪೂರ ಕಡೆಗೆ ಹರಿದು ಹೋಗುವ ಹಳ್ಳ ದಾಟುತ್ತಿದ್ದ ವೇಳೆ ಆಕೆ ಕೊಚ್ಚಿಕೊಂಡು ಹೋಗಿದ್ದಳು. ಹಳ್ಳದಲ್ಲಿ ಕಡಿಮೆ ನೀರು ಇದೆ ಎಂದು ಅಂದಾಜಿಸಿ ದಾಟಲು ಮಹಿಳೆ ನೀರಿಗೀಳಿದಿದ್ದಳು. ಆದರೆ ದಾಟಲಾಗದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಗುರುವಾರ ಬೆಳಗ್ಗೆ ಸುಮಾರು 200 ಅಡಿ ದೂರದಲ್ಲಿ ಶವ ತೇಲಿ ಬಂದಿದೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಜೆ.ಎಸ್.ನ್ಯಾಮಗೌಡರ್, ಪಿಎಸ್‌ಐ ಗುರು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.