ETV Bharat / state

ಫೆ.23 ರಂದು ಬೀದರ್​ನಲ್ಲಿ ಸಿಎಎ ವಿರೋಧಿಸಿ ಸಮಾವೇಶ ನಡೆಯುತ್ತಾ? ಇಲ್ಲವೋ?

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ರಥ ಮೈದಾನದಲ್ಲಿ ಫೆ.23 ರಂದು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಬೃಹತ್ ಬಹಿರಂಗ ಸಮಾವೇಶಕ್ಕೆ ಭಾರೀ ಸಿದ್ಧತೆಗಳು ನಡೆಯುತ್ತಿರುವಾಗಲೇ ಸಮಾವೇಶ ನಡೆವ ಸ್ಥಳಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.

Will there be a convention against CAA on Feb. 23?
ಫೆ.23 ರಂದು ಬೀದರ್​ನಲ್ಲಿ ಸಿಎಎ ವಿರೋಧಿಸಿ ಸಮಾವೇಶ ನಡೆಯಲಿದೆಯೇ?
author img

By

Published : Feb 21, 2020, 9:23 PM IST

ಬಸವಕಲ್ಯಾಣ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ರಥ ಮೈದಾನದಲ್ಲಿ ಫೆ.23 ರಂದು ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಬೃಹತ್ ಬಹಿರಂಗ ಸಮಾವೇಶಕ್ಕೆ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಸಮಾವೇಶ ನಡೆವ ಸ್ಥಳಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ.

ಸಮಾವೇಶ ನಡೆಸುವ ಉದ್ದೇಶಿತ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ನೀಡಲಾಗದು ಎಂದು ರಥ ಮೈದಾನ ಒಡೆತನ ಹೊಂದಿರುವ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿಗಳು ದಿಢೀರ್​ ನಿರ್ಧಾರ ಮಾಡಿದ್ದು, ಆಯೋಜಕರು ಹಾಗೂ ಸ್ಥಳೀಯ ಆಡಳಿತ ಗೊಂದಲಕ್ಕೆ ಸಿಲುಕಿದ್ದಾರೆ.

ಫೆ.23 ರಂದು ಬೀದರ್​ನಲ್ಲಿ ಸಿಎಎ ವಿರೋಧಿಸಿ ಸಮಾವೇಶ ನಡೆಯಲಿದೆಯೇ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಮತ್ತು ಎನ್ಆರ್​ಸಿ ಹಾಗೂ ಎನ್​ಪಿಆರ್ ವಿರೋಧಿಸಿ ಇಲ್ಲಿಯ ಕೆಲ ಮುಸ್ಲಿಂ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಕ್ರಿಯಾ ಸಮಿತಿ ರಚಿಸಿ, ಫೆ. 23ರಂದು ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಮುಖಂಡರು, ಸಾಮಾಜಿಕ ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ. ಬೃಹತ್ ಸಮಾವೇಶ ನಡೆಸಲು ನಗರದ ರಥ ಮೈದಾನ ಆಯ್ಕೆ ಮಾಡಿಕೊಂಡಿದ್ದ ಸಂಘಟಕರು, ಕಾರ್ಯಕ್ರಮದ ಯಶಸ್ವಿಗಾಗಿ ಈಗಾಗಲೇ ಜಿಲ್ಲಾದ್ಯಂತ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ, ಈ ಹಿನ್ನೆಲೆಯಲ್ಲಿ ಇಲ್ಲಿಯ ಶಾಸಕ ಬಿ.ನಾರಾಯಣರಾವ್​ ಅವರು, ಸ್ಥಳದ ಒಡೆತನ ಹೊಂದಿರುವ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಗೆ ಪತ್ರ ಬರೆದು ಅನುಮತಿ ನೀಡುವಂತೆ ಕೋರಿದ್ದಾರೆ.

ಶಾಸಕರ ಪತ್ರಕ್ಕೆ ಅನುಮತಿ ನೀಡಿದ ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿಗಳು ಈಗ ಉಲ್ಟಾ ಹೊಡೆದಿದ್ದು, ಗೊಂದಲಕ್ಕೆ ಕಾರಣವಾಗಿದೆ. ಪಂಚ ಕಮಿಟಿ ಅಧ್ಯಕ್ಷ ಅನಿಲ ರಗಟೆ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಮಧ್ಯಾಹ್ನ ಇಲ್ಲಿಯ ಸಿಪಿಐ ಕಚೇರಿಗೆ ತೆರಳಿ, ರಥ ಮೈದಾನದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆಗೆ ಅನುಮತಿ ನೀಡಲಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮಾವೇಶ ನಡೆಸಲಿದ್ದಾರೆ ಎಂದು ಸ್ಥಳೀಯ ಶಾಸಕರು ನಮಗೆ ಪತ್ರ ಬರೆದಿದ್ದರು. ಆದರೆ, ಪತ್ರದಲ್ಲಿ ಯಾವುದೇ ವಿಷಯ ಪ್ರಸ್ತಾಪಿಸದೇ ನಮಗೆ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಸಿಎಎ ವಿರೋಧಿ ಕಾರ್ಯಕ್ರಮಕ್ಕೆ ಎಂದು ಮೊದಲೇ ಹೇಳಿದ್ರೆ ನಾವು ಅನುಮತಿ ನೀಡುತ್ತಿರಲಿಲ್ಲ, ಆದರೆ ಈಗ ನೋಡಿದರೆ ಸಿಎಎ ವಿರುದ್ಧ ಸಮಾವೇಶ ಎಂದು ಪ್ರಚಾರ ನಡೆಸುತ್ತಿದ್ದಾರೆ. ರಥ ಮೈದಾನದಲ್ಲಿ ಸಿಎಎ ವಿರುದ್ಧ ನಡೆಯುವ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾವೇಶಕ್ಕಾಗಿ ಸ್ಥಳೀಯ ಶಾಸಕರಿಗೆ ನೀಡಿದ ಅನುಮತಿ ಹಿಂದಕ್ಕೆ ಪಡೆಯಲಾಗಿದೆ. 23ರಂದು ರಥ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ಪಂಚ ಕಮಿಟಿ ಪದಾಧಿಕಾರಿಗಳು ತಹಶೀಲ್ದಾರ್​ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಮಾವೇಶಕ್ಕೆ ಒಂದು ದಿನ ಬಾಕಿ ಇರುವಾಗಲೇ ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಯೋಜಕರು ಮತ್ತು ಸ್ಥಳೀಯ ಆಡಳಿತದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿದೆ. ಸಿಎಎ ವಿರುದ್ಧ ಸಮಾವೇಶ ನಡೆಸಲು ತಹಶೀಲ್ದಾರ್​ ಅವರು ಕೂಡ ಅನುಮತಿ ನೀಡಿದ್ದಾರೆ ಎನ್ನುಲಾಗಿದ್ದು, ಆಯೋಜಕರು ಇದೇ ಸ್ಥಳದಲ್ಲಿ ಸಮಾವೇಶ ನಡೆಸುತ್ತಾರೋ ಅಥವಾ ಬೇರೆ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಾರೋ ಎನ್ನುವುದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.