ETV Bharat / state

ಬೀದರ್‌ ಕ್ಷೇತ್ರದ ಜನತೆಯ ಅನುಕೂಲಕ್ಕೆ ಮತ್ತೆರಡು ವಿಶೇಷ ರೈಲು: ಕೇಂದ್ರ ಸಚಿವ ಖುಬಾ - ಲೋಕಮಾನ್ಯ ತಿಲಕ್ ಟರ್ಮಿನಲ್

ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲ್ಹಾಪುರ (01435/01436) ಹಾಗೂ ಸೊಲ್ಹಾಪುರ-ತಿರುಪತಿ-ಸೊಲ್ಹಾಪುರ (01437/01438) ವಿಶೇಷ ರೈಲುಗಳು ಬೀದರ್​ ಮೂಲಕ ಸಂಚರಿಸಲಿವೆ.

Union Minister Bhagavantha Khooba
ಕೇಂದ್ರ ಸಚಿವ ಭಗವಂತ ಖೂಬಾ
author img

By

Published : Dec 11, 2022, 9:43 AM IST

ಬೀದರ್​: ಬೀದರ್​ ಲೋಕಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಲೋಕಮಾನ್ಯ ತಿಲಕ್ ಟರ್ಮಿನಲ್-ಸೊಲ್ಹಾಪುರ (01435/01436) ಹಾಗೂ ಸೊಲ್ಹಾಪುರ-ತಿರುಪತಿ-ಸೊಲ್ಹಾಪುರ (01437/01438) ಎಂಬೆರಡು ವಿಶೇಷ ರೈಲುಗಳು ಸಂಚರಿಸಲಿವೆ. ಸೋಲ್ಹಾಪುರದ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿನಂತಿಸಿದ್ದಾರೆ.

ಲೋಕಮಾನ್ಯ ತಿಲಕ್ ಟರ್ಮಿನಲ್-ಸೊಲ್ಹಾಪುರ ರೈಲು, ಡಿ. 13 ರಿಂದ 2023ರ ಫೆ.14 ರವರೆಗೆ ಪ್ರತಿ ಮಂಗಳವಾರ ಸೊಲ್ಹಾಪುರದಿಂದ ಬೆ. 9.20ಕ್ಕೆ ಹೊರಟು, ಕಲಬುರಗಿ ಮಾರ್ಗವಾಗಿ ಹುಮನಾಬಾದ್‌ಗೆ ಮಧ್ಯಾಹ್ನ 12.39ಕ್ಕೆ, ಬೀದರ್​ಗೆ ಮಧ್ಯಾಹ್ನ 2ಕ್ಕೆ, ಭಾಲ್ಕಿಗೆ ಮಧ್ಯಾಹ್ನ 2.49ಕ್ಕೆ ಬರಲಿದೆ. ಅಲ್ಲಿಂದ ಉದಗೀರ, ಲಾತೂರ ರೋಡ್, ಪುಣೆ, ಥಾಣಾ ಮಾರ್ಗವಾಗಿ ಲೋಕಮಾನ್ಯ ತಿಲಕ್ ಟರ್ಮಿನಲ್‍ಗೆ ಮರುದಿನ ಬುಧವಾರ ಬೆ. 3.45ಕ್ಕೆ ತಲುಪಲಿದೆ.

ಡಿ. 14 ರಿಂದ ಫೆ.15 ರವರೆಗೆ ಒಟ್ಟು 12 ಬುಧವಾರಗಳಂದು (ರೈಲು ಸಂಖ್ಯೆ 01436, ಎಲ್.ಟಿ.ಟಿ.- ಸೊಲ್ಹಾಪುರ-ಎಲ್.ಟಿ.ಟಿ.) ಮಧ್ಯಾಹ್ನ 12.50ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್​ನಿಂದ ಹೊರಟು ಬಂದ ಮಾರ್ಗವಾಗಿ ಮಧ್ಯರಾತ್ರಿ 2.54ಕ್ಕೆ ಭಾಲ್ಕಿ, ನಸುಕಿನ ಜಾವ 4 ಗಂಟೆಗೆ ಬೀದರ್​ ಹಾಗೂ ನಸುಕಿನ ಜಾವ 4.29 ಗಂಟೆಗೆ ಹುಮನಾಬಾದ್‌ಗೆ ತಲುಪಲಿದೆ. ಮುಂದುವರೆದು ಸೊಲ್ಹಾಪುರಕ್ಕೆ ಗುರುವಾರ ಬೆಳಗ್ಗೆ 9.25ಕ್ಕೆ ತಲುಪಲಿದೆ.

ಸೋಲ್ಹಾಪೂರ-ತಿರುಪತಿ-ಸೋಲ್ಹಾಪುರ ರೈಲು ಡಿ.15 ರಿಂದ 2023ರ ಫೆ.16 ರವರೆಗೆ ಒಟ್ಟು 12 ಗುರುವಾರಗಳಂದು ಸೊಲ್ಹಾಪುರದಿಂದ ರಾತ್ರಿ 9.40ಕ್ಕೆ ಹೊರಟು ಕುರುಡವಾಡಿ, ಉಸ್ಮನಾಬಾದ್ ಉದಗಿರ ಮಾರ್ಗವಾಗಿ ಮರುದಿನ ಶುಕ್ರವಾರ ನಸುಕಿನಲ್ಲಿ 4.04ಕ್ಕೆ ಭಾಲ್ಕಿ, ನಸುಕಿನ 4.35ಕ್ಕೆ ಬೀದರ್​ ಹಾಗೂ ನಸುಕಿನ 5.54ಕ್ಕೆ ಹುಮನಾಬಾದ್​ಗೆ ತಲುಪಿ, ಕಲಬುರಗಿ, ಯಾದಗಿರ, ರೇನಿಗುಂಟಾ ಮಾರ್ಗವಾಗಿ ತಿರುಪತಿಗೆ ಶುಕ್ರವಾರ ರಾತ್ರಿ 7.45ಕ್ಕೆ ತಲುಪಲಿದೆ.

ಡಿ.16 ರಿಂದ ಫೆ.17 ರವರೆಗೆ ಒಟ್ಟು 12 ಶುಕ್ರವಾರಗಳಂದು ತಿರುಪತಿ-ಸೊಲ್ಹಾಪುರ-ತಿರುಪತಿ ರೈಲು ಪ್ರತಿ ಶುಕ್ರವಾರ ರಾತ್ರಿ 9.10ಕ್ಕೆ ತಿರುಪತಿಯಿಂದ ಹೊರಟುಬಂದ ಮಾರ್ಗವಾಗಿ ಶನಿವಾರ ಬೆಳಗ್ಗೆ 8.14ಕ್ಕೆ ಹುಮನಾಬಾದ್, ಬೆಳಗ್ಗೆ 10.10ಕ್ಕೆ ಬೀದರ್​ಗೆ ಮತ್ತು ಬೆಳಗ್ಗೆ 11.04ಕ್ಕೆ ಭಾಲ್ಕಿಗೆ ತಲುಪಿ, ಸೊಲ್ಹಾಪುರಕ್ಕೆ ರಾತ್ರಿ 7.10ಕ್ಕೆ ತಲುಪಲಿದೆ.

ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್‌ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.