ಬೀದರ್: ಮತ ಹಾಕಲು ಬಂದ ಜನರಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ದೂರ ದೂರದಿಂದ ಬಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದೆ ಪರದಾಡಬೇಕಾಯಿತು.
ನಿನ್ನೆಯಿಂದ ಚುನಾವಣೆ ಕರ್ತವ್ಯದ ಮೇಲೆ ಈಶಾನ್ಯ ಸಾರಿಗೆ ಸಂಸ್ಥೆ ಬಸ್ಗಳು ನಿಯೋಜಿತಗೊಂಡಿದ್ದರಿಂದ ದೂರ ದೂರದಿಂದ ಬಂದ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದೆ ಪರದಾಡಿದರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದಲೆ ಬಸ್ಗಳ ಅಭಾವ ಉಂಟಾಗಿ ಮತದಾನಕ್ಕಾಗಿ ಬಂದ ಪ್ರಯಾಣಿಕರು ತಮ್ಮೂರಿಗೆ ಹೋಗಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಬೀದರ್-ಭಾಲ್ಕಿ, ಔರಾದ್, ಹುಮನಾಬಾದ್ ಸೇರಿದಂತೆ ಸ್ಥಳೀಯ ಮಾರ್ಗಗಳಲ್ಲಿ ಬಸ್ಗಳ ಓಡಾಟ ಕಡಿಮೆಯಾಗಿದ್ದಕ್ಕೆ ಜನರು ಸಂಕಷ್ಟ ಎದುರಿಸಬೇಕಾಯಿತು. ಜಿಲ್ಲೆಯಲ್ಲಿ ಒಟ್ಟು 586 ಬಸ್ಗಳ ಪೈಕಿ 246 ಬಸ್ಗಳು ಚುನಾವಣೆ ಕರ್ತವ್ಯದಲ್ಲಿರುವುದರಿಂದ ಜನರು ಪ್ರಯಾಣದ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಯಿತು.
ಜಿಲ್ಲೆಯಲ್ಲಿರುವ ಖಾಸಗಿ ವಾಹನಗಳು ಕೂಡ ಅಧಿಕಾರಿಗಳ ಓಡಾಟಕ್ಕೆ ನಿಯೋಜನೆ ಮಾಡಿದಕ್ಕಾಗಿ ಖಾಸಗಿ ವಾಹನಗಳ ಸಂಚಾರ ಕೂಡ ಸ್ಥಗಿತವಾಗಿದ್ದು, ಜನರು ಒಂದೂರಿಂದ ಮತ್ತೊಂದುರಿಗೆ ಸಂಚರಿಸಲು ಬಸ್ಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿತ್ತು.