ETV Bharat / state

ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿ: ಸಿನಿಮೀಯ ಶೈಲಿಯಲ್ಲಿ ಕಳ್ಳರನ್ನು ಹಿಡಿದ ಯುವಕರು - ಕಳ್ಳತನ ಮಾಡಿ ಪರಾರಿ

ಬೀದರ್​ನ ಬಸವಕಲ್ಯಾಣದಲ್ಲಿ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು, ಯುವಕರ ತಂಡವೊಂದು ಸಿನಿಮೀಯ ಶೈಲಿಯಲ್ಲಿ ಹಿಡಿದಿದ್ದಾರೆ.

Young men find the thieves in cinematic style
ಸಿನಿಮೀಯ ಶೈಲಿಯಲ್ಲಿ ಕಳ್ಳರನ್ನು ಹಿಡಿದ ಯುವಕರು
author img

By

Published : Jan 22, 2020, 6:44 PM IST

ಬಸವಕಲ್ಯಾಣ: ಅಂಗಡಿಯಲ್ಲಿನ ಹಣ ಕದ್ದು, ಪರಾರಿಯಾದ ಕಳ್ಳರನ್ನು ಬೆನ್ನತ್ತಿದ್ದ ಯುವಕರ ತಂಡ, ಕೆಲವೇ ನಿಮಿಷದಲ್ಲಿ ಸಿನಿಮೀಯ ರೀತಿ ಚೇಸ್ ಮಾಡಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ತ್ರಿಪುರಾಂತ ಮಡಿವಾಳ್ ವೃತ್ತದಲ್ಲಿರುವ ಎಸ್​ಎಂಪಿ ಎಂಟರ್ ಪ್ರೈಸೆಸ್ ಎನ್ನುವ ಪೈಪ್ ಅಂಗಡಿಯಲ್ಲಿ ಮಾಲೀಕರ ಗಮನ ತಪ್ಪಿಸಿ, ಅಂಗಡಿಯಲ್ಲಿದ್ದ ಹಣ ಕದ್ದು ಬೈಕ್​ನಲ್ಲಿ ಪರಾರಿಯಾಗುತ್ತಿದ್ದರು. ಈ ಇಬ್ಬರು ಕಳ್ಳರನ್ನು ಬೆನ್ನತ್ತಿದ ಯುವಕರು, ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಗಡಿಯಲ್ಲಿನ ವಸ್ತುವನ್ನು ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಅಂಗಡಿ ಗಲ್ಲದಲ್ಲಿದ್ದ ಹಣ ಕಳವು ಮಾಡಿಕೊಂಡು, ಬೈಕ್ ಮೇಲೆ ಪರಾರಿಯಾಗಿದ್ದರು. ಸುದ್ದಿ ತಿಳಿದು ತಕ್ಷಣ ಕಾರ್ಯಪ್ರವತ್ತರಾದ ಯುವಕರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಗಮನಿಸಿ, ಕಳ್ಳರನ್ನು ಹುಡುಕಲೆಂದು ನಗರದಲ್ಲಿ ಸುತ್ತಾಟ ಆರಂಭಿಸಿದ್ದಾರೆ.

ಕಳ್ಳರನ್ನು ಹಿಡಿಯಲೆಂದು ಹದಿನೈದು ನಿಮಿಷಗಳ ಕಾಲ ನಗರದಲ್ಲಿ ಸುತ್ತಾಡಿದ ಯುವಕರು, ಕೊನೆಗೆ ನಾರಾಯಣಪುರ ರಸ್ತೆಯಲ್ಲಿ ಕಳ್ಳರು ಬೈಕ್ ಮೇಲೆ ತೆರಳುತ್ತಿರುವುದನ್ನು ಗಮನಿಸಿ, ಬೈಕ್ ಚೇಸ್ ಮಾಡುವ ಮೂಲಕ ಕಳ್ಳರನ್ನು ಹಿಡಿದಿದ್ದಾರೆ.

ಕಳ್ಳರನ್ನು ಹಿಡಿದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ತಲೆ ಮೇಲೆ ಟೋಪಿ ಹಾಕಿಕೊಂಡವರು ಕಳ್ಳರು ಆಗಿದ್ದಾರೆ

4 ಚಿತ್ರ ಕಳಿಸಲಾಗಿದೆ

ಬಸವಕಲ್ಯಾಣ: ಅಂಗಡಿಯಲ್ಲಿನ ಹಣ ಕದ್ದು ಪರಾರಿಯಾದ ಕಳ್ಳರನ್ನು ಬೆನ್ನತ್ತಿದ ಯುವಕರ ತಂಡ ಕೆಲವೇ ನಿಮಿಷದಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಯುವಕರ ತಂಡ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ನಗರದ ತ್ರಿಪುರಾಂತ ಮಡಿವಾಳ್ ವೃತದಲ್ಲಿರುವ ಎಸ್ ಎಂ ಪಿ ಎಂಟರ್ ಪ್ರೈಸೆಸ್ ಎನ್ನುವ ಪೈಪ್ ಅಂಗಡಿಯಲ್ಲಿ ಮಾಲೀಕರ ಗಮನ ತಪ್ಪಿಸಿ ಅಂಗಡಿ ಗಲ್ಲದಲ್ಲಿನ ಹಣ ಕದ್ದು ಬೈಕ್ ಮೇಲೆ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬೆನ್ನತ್ತಿದ್ದ ಯುವಕರು, ಹಣ ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಮೇಲೆ ಬಂದಿದ್ದ ಇಬ್ಬರು ಕಳ್ಳರು ಅಂಗಡಿಯಲ್ಲಿನ ವಸ್ತು ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಅಂಗಡಿ ಗಲ್ಲದಲ್ಲಿದ್ದ ಹಣ ಕಳವು ಮಾಡಿಕೊಂಡು ಬೈಕ್ ಮೇಲೆ ಪರಾರಿಯಾಗಿದ್ದರು. ಸುದ್ದಿ ತಿಳಿದು ತಕ್ಷಣ ಕಾರ್ಯಪ್ರವತ್ತರಾದ ಯುವಕರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಳ್ಳರ ದೃಶ್ಯ ಗಮನಿಸಿ ತಕ್ಷಣ ಬೈಕ್ ಹತ್ತಿ ಕಳ್ಳರನ್ನು ಹುಡುಕಲೆಂದು ನಗರದಲ್ಲಿ ಸುತ್ತಾಟ ಆರಂಭಿಸಿದರು. ಕಳ್ಳರನ್ನು ಹಿಡಿಯಲೆಂದು ಹದಿನೈದು ನಿಮಿಷಗಳ ಕಾಲ ನಗರದಲ್ಲಿ ಸುತ್ತಾಡಿದ ಯುವಕರು, ಕೊನೆಗೆ ನಾರಾಯಣಪುರ ರಸ್ತೆಯಲ್ಲಿ ಕಳ್ಳರು ಬೈಕ್ ಮೇಲೆ ತೆರಳುತ್ತಿರುವುದನ್ನು ಗಮನಿಸಿ ಬೈಕ್ ಚೇಸ್ ಮಾಡುವ ಮೂಲಕ ಇಬ್ಬರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರನ್ನು ಹಿಡಿದ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್ಐ ಸುನಿಲ್ ಕುಮಾರ್ ನೇತೃತ್ವದ ಪಿಸಿ ಶರಿಫೋದ್ದಿನ್, ಚಂದ್ರು ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ತೆರಳಿ ಕಳ್ಳರನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳ್ಳರನ್ನು ಹಿಡಿದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆBody:ಬಸವಕಲ್ಯಾಣ: ಅಂಗಡಿಯಲ್ಲಿನ ಹಣ ಕದ್ದು ಪರಾರಿಯಾದ ಕಳ್ಳರನ್ನು ಬೆನ್ನತ್ತಿದ ಯುವಕರ ತಂಡ ಕೆಲವೇ ನಿಮಿಷದಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ಯುವಕರ ತಂಡ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ನಗರದ ತ್ರಿಪುರಾಂತ ಮಡಿವಾಳ್ ವೃತದಲ್ಲಿರುವ ಎಸ್ ಎಂ ಪಿ ಎಂಟರ್ ಪ್ರೈಸೆಸ್ ಎನ್ನುವ ಪೈಪ್ ಅಂಗಡಿಯಲ್ಲಿ ಮಾಲೀಕರ ಗಮನ ತಪ್ಪಿಸಿ ಅಂಗಡಿ ಗಲ್ಲದಲ್ಲಿನ ಹಣ ಕದ್ದು ಬೈಕ್ ಮೇಲೆ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಬೆನ್ನತ್ತಿದ್ದ ಯುವಕರು, ಹಣ ಕದ್ದು ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಮೇಲೆ ಬಂದಿದ್ದ ಇಬ್ಬರು ಕಳ್ಳರು ಅಂಗಡಿಯಲ್ಲಿನ ವಸ್ತು ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕರ ಗಮನ ಬೇರೆಡೆ ಸೆಳೆದು ಅಂಗಡಿ ಗಲ್ಲದಲ್ಲಿದ್ದ ಹಣ ಕಳವು ಮಾಡಿಕೊಂಡು ಬೈಕ್ ಮೇಲೆ ಪರಾರಿಯಾಗಿದ್ದರು. ಸುದ್ದಿ ತಿಳಿದು ತಕ್ಷಣ ಕಾರ್ಯಪ್ರವತ್ತರಾದ ಯುವಕರು, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಕಳ್ಳರ ದೃಶ್ಯ ಗಮನಿಸಿ ತಕ್ಷಣ ಬೈಕ್ ಹತ್ತಿ ಕಳ್ಳರನ್ನು ಹುಡುಕಲೆಂದು ನಗರದಲ್ಲಿ ಸುತ್ತಾಟ ಆರಂಭಿಸಿದರು. ಕಳ್ಳರನ್ನು ಹಿಡಿಯಲೆಂದು ಹದಿನೈದು ನಿಮಿಷಗಳ ಕಾಲ ನಗರದಲ್ಲಿ ಸುತ್ತಾಡಿದ ಯುವಕರು, ಕೊನೆಗೆ ನಾರಾಯಣಪುರ ರಸ್ತೆಯಲ್ಲಿ ಕಳ್ಳರು ಬೈಕ್ ಮೇಲೆ ತೆರಳುತ್ತಿರುವುದನ್ನು ಗಮನಿಸಿ ಬೈಕ್ ಚೇಸ್ ಮಾಡುವ ಮೂಲಕ ಇಬ್ಬರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳರನ್ನು ಹಿಡಿದ ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಸಿಪಿಐ ಮಲ್ಲಿಕಾರ್ಜುನ ಯಾತನೂರ ಹಾಗೂ ಪಿಎಸ್ಐ ಸುನಿಲ್ ಕುಮಾರ್ ನೇತೃತ್ವದ ಪಿಸಿ ಶರಿಫೋದ್ದಿನ್, ಚಂದ್ರು ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ತೆರಳಿ ಕಳ್ಳರನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕಳ್ಳರನ್ನು ಹಿಡಿದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.