ETV Bharat / state

12ನೇ ಶತಮಾನದ ಅನುಭವ ಮಂಟಪ ಮರು ನಿರ್ಮಾಣ; ಸಿಎಂ ಭೂಮಿಪೂಜೆ - ಬಸವಕಲ್ಯಾಣ ಸುದ್ದಿ

ಈಗಿರುವ ಆಧುನಿಕ ಅನುಭವ ಮಂಟಪದ ಪರಿಸರದಲ್ಲಿಯೇ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಜನವರಿ 6 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೂತನ ಮಂಟಪದ ಭೂಮಿ ಪೂಜೆ ನೆರವೇರಿಸಲಿದ್ದಾರೆ.

Basavakalyan
ಪ್ರಭು ಚವ್ಹಾಣ್
author img

By

Published : Jan 4, 2021, 7:50 AM IST

ಬಸವಕಲ್ಯಾಣ(ಬೀದರ್): ಗುರು ಬಸವಾದಿ ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ 12ನೇ ಶತಮಾನದ ಅನುಭವ ಮಂಟಪ ನೆನಪಿಸುವ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಇದೀಗ ಕಾಲ ಕೂಡಿ ಬಂದಿದ್ದು, ಜ. 6ರಂದು ಮುಖ್ಯಮಂತ್ರಿ ಬಿ.ಎಸ್, ಯಡಿಯೂರಪ್ಪ ಅನುಭವ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಅನುಭವ ಮಂಟಪ ನಿರ್ಮಾಣ ಕುರಿತು ಮಾತನಾಡಿದ ಪ್ರಭು ಚವ್ಹಾಣ್​

ಅನುಭವ ಮಂಟಪದ ಭಕ್ತಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ಈಗಾಗಲೇ 600 ಕೋಟಿ ಘೋಷಿಸಿಸಲಾಗಿದ್ದು, ಮೊದಲ ಕಂತಿನ ರೂಪದಲ್ಲಿ 100 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಲಿಂ. ಡಾ.ಚೆನ್ನಬಸವ ಪಟ್ಟದ್ದೇವರು ಕಂಡ ಕನಸು ಹಾಗೂ ನೂತನ ಅನುಭವ ಮಂಟಪಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಡಾ. ಬಸವಲಿಂಗ ಪಟ್ಟದೇವರ ಕನಸು ಸಾಕಾರಗೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದರು.

12ನೇ ಶತಮಾನದಲ್ಲಿ ಗುರು ಬಸವಣ್ಣನವರ ನೇತೃತ್ವದಲ್ಲಿ ಶರಣು ಅನುಭವ ಮಂಟಪ ಸ್ಥಾಪಿಸಿ ಮನುಕುಲ ಉದ್ದಾರಕ್ಕಾಗಿ ಶ್ರಮಿಸಿದ್ದಾರೆ. ಹೀಗಾಗಿ 21ನೇ ಶತಮಾನದಲ್ಲಿ ಅದೇ ಮಾದರಿಯಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವ ಮೂಲಕ ವಿಶ್ವದ ಜನರು ಕಲ್ಯಾಣ ನಾಡಿಗೆ ಬರುವಂತಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದರು.

ಈಗಿರುವ ಹಳೇಯ ಅನುಭವ ಮಂಟಪದ ಪರಿಸರದಲ್ಲಿಯೇ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ಜನವರಿ 6 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೂತನ ಮಂಟಪದ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಅನುಭವ ಮಂಟಪಕ್ಕಾಗಿ ಒಟ್ಟು 72 ಎಕರೆ ಜಮೀನಿದ್ದು, ಇದರಲ್ಲಿ 7 ಎಕರೆಯಲ್ಲಿ 182 ಅಡಿ ಎತ್ತರದಲ್ಲಿ ನೂತನ ಅನುಭವ ಮಂಟಪದ ಕಟ್ಟಡ ನಿರ್ಮಿಸಲಾಗುತ್ತಿದೆ. ಉಳಿದ ಜಾಗದಲ್ಲಿ ಉದ್ಯಾನ ವನ, ಯಾತ್ರಿ ನಿವಾಸ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ವೀಕೆಂಡ್ ವಿತ್ ಪಬ್ಲಿಕ್: ಬೈಕ್‌ನಲ್ಲಿ ಸಂಚರಿಸಿದ ಶಿಕ್ಷಣ ಸಚಿವ

ನೂತನ ಅನುಭವ ಮಂಟಪದ ಕಾಮಗಾರಿಯು ಮುಂಬರುವ ಎರಡು ವರ್ಷದಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ನಮ್ಮ ಸರ್ಕಾರದಲ್ಲಿ ಅನುದಾನಕ್ಕೆ ಕೊರತೆ ಇಲ್ಲ ಎಂದ ಸಚಿವರು, ಅನುಭವ ಮಂಟಪದ ಅಡಿಗಲ್ಲು ನೆರವೇರಿಸಲು ಆಗಮಿಸುವ ಮುಖ್ಯಮಂತ್ರಿಗಳು ಅಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪೂರ್ವ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.

ಈ ಭಾಗದ ಅನೇಕ ಮಠಾಧೀಶರ ಒತ್ತಾಯದ ಮೇರೆಗೆ ಹೈದರಾಬಾದ್ ಕರ್ನಾಟಕ ಎಂಬ ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಬಿಜೆಪಿ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ. ಕಾಂಗ್ರೆಸ್ ಪಕ್ಷ ಕೇವಲ ಹೇಳಿಕೆಗೆ ಸೀಮಿತವಾಗಿದೆ ಎಂದು ಟೀಕಿಸಿದರು.

ಅನುಭವ ಮಂಟಪ ಟ್ರಸ್ಟ್​ನ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಈಗಾಗಲೇ ದೆಹಲಿಯಲ್ಲಿ ನೂತನ ಸಂಸತ್ತು ನಿರ್ಮಿಸಲು ಅಡಿಗಲ್ಲು ಹಾಕಲಾಗಿದ್ದು, ಇಲ್ಲಿ 12ನೇ ಶತಮಾನದ ಮಾದರಿಯಲ್ಲಿಯೇ ನೂತನ ಅನುಭವ ಮಂಟಪ 21ನೇ ಶತಮಾನದಲ್ಲಿ ನಿರ್ಮಾಣವಾಗುತ್ತಿರುವುದು ಯೋಗಾ - ಯೋಗ, ಇದು ನಮ್ಮ ಸಂಕಲ್ಪವೂ ಆಗಿದೆ ಎಂದರು.

ಇದನ್ನೂ ಓದಿ: ಮೆಜೆಸ್ಟಿಕ್​ನಿಂದ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭ; ಜಸ್ಟ್​ 10 ರೂ.ನಲ್ಲಿ ಏರ್​​ಪೋರ್ಟ್​​ ತಲುಪಿ!!

ಅನುಭವ ಮಂಟಪ ಕಾರ್ಯ ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಸಮುದಾಯದ ಜನರಿಗೂ ಅನ್ವಯವಾಗುತ್ತದೆ. ಹೀಗಾಗಿ ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು ಎಂದ ಅವರು, ಅನುಭವ ಮಂಟಪ ನಿರ್ಮಾಣ ಕಾಮಗಾರಿ ಬೇಗ ಮುಗಿಸಬೇಕು ಎಂದು ಒತ್ತಾಯಿಸಿದರು.

ಭಾಲ್ಕಿ ಹಿರೇಮಠದ ಶ್ರೀ ಗುರುಬಸವ ಪಟ್ಟದ್ದೇವರು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಎಸ್ಪಿ ಡಿ.ಎಲ್ ನಾಗೇಶ, ಎಸಿ ಭುವನೇಶ ಪಾಟೀಲ, ತಹಸೀಲ್ದಾರ ಸಾವಿತ್ರಿ ಸಲಗರ, ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟೆಪ್ಪಗೋಳ, ಪ್ರಮುಖರಾದ ಬಸವರಾಜ ಧನ್ನೂರ, ಬಾಬು ವಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಮುಖಂಡರಾದ ರವಿ ಚಂದನಕೆರೆ, ದೀಪಕ ಗಾಯಕವಾಡ, ಮಲ್ಲಿಕಾರ್ಜುನ ಕುಂಬಾರ, ಅರವಿಂದ ಮುತ್ತೆ, ಶಂಕರ ನಾಗದೆ, ಶರಣು ಸಲಗರ, ಹುಮನಾಬಾದ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.