ETV Bharat / state

ಬೀದರ್​ನ ಕ್ವಾರಂಟೈನ್​ ಕೇಂದ್ರದಲ್ಲಿ ನವವಿವಾಹಿತ ಆತ್ಮಹತ್ಯೆ! - ರಾಜ್ಯದಲ್ಲಿ ಕೊರೊನಾ ಪ್ರಕರಣಗಳು

ನವವಿವಾಹಿತನೊಬ್ಬ ಕ್ವಾರಂಟೈನ್​ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್​ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿಯಲ್ಲಿ ನಡೆದಿದೆ.

gfys
ಬೀದರ್​ನ ಕ್ವಾರೆಂಟೈನ್​ ಕೇಂದ್ರದಲ್ಲಿ ನವವಿವಾಹಿತ ಆತ್ಮಹತ್ಯೆ..!
author img

By

Published : May 26, 2020, 10:43 AM IST

ಬೀದರ್: ಮಹಾರಾಷ್ಟ್ರದ ಮುಂಬೈನಿಂದ ವಾಪಸಾದ ಯುವಕನೊಬ್ಬ ಕ್ವಾರಂಟೈನ್ ಕೇಂದ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಚಿನ್​ ಜಾಧವ್(22) ಎಂಬಾತ ನೇಣಿಗೆ ಶರಣಾಗಿದ್ದಾನೆ. ನಾರಾಯಣಪುರ ಗ್ರಾಮದ ನಿವಾಸಿಯಾದ ಈತ, ಒಂದು ವಾರದ ಹಿಂದಷ್ಟೇ ಪತ್ನಿ ಜೊತೆ ಮುಂಬೈನಿಂದ ಹಿಂದಿರುಗಿದ್ದ. ಇಬ್ಬರೂ ಕ್ವಾರಂಟೈನ್​ನಲ್ಲಿದ್ದರು.

ಸಚಿನ್​ ಜಾಧವ್​ ಈ ವರ್ಷವಷ್ಟೇ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದ. ಈತನ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳಕ್ಕೆ ಔರಾದ್​ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.