ETV Bharat / state

ಕಾಲೇಜಿನ ಬ್ಲಾಕ್‌ ಬೋರ್ಡ್​ಗಳ ಮೇಲೆ ಅಶ್ಲೀಲ ಚಿತ್ರಗಳ ವೆಬ್‌ಲಿಂಕ್ ಬರೆದ ಪುಂಡರು! - ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಬೀದರ್ ಜಿಲ್ಲೆ ಔರಾದ್​ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪುಢಾರಿಗಳ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಕೂಡಲೇ ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬೀದರ್​ ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
author img

By

Published : Sep 15, 2019, 1:51 PM IST

ಬೀದರ್: ಕಾಲೇಜು ಕ್ಲಾಸ್ ರೂಂಗಳಲ್ಲಿರುವ ಕರಿ ಹಲಗೆ​, ಗೋಡೆಗಳು.. ಹೀಗೆ ಎಲ್ಲೆಂದರಲ್ಲಿ ಪುಢಾರಿಗಲು ಅಶ್ಲೀಲ ಚಿತ್ರಗಳ ವೆಬ್ ಲಿಂಕ್ ಬರೆದಿದ್ದಾರೆ. ಇದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾಲೇಜಿಗೆ ಬರಲು ಮುಜುಗರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಬೀದರ್​ ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಬೀದರ್​ ಜಿಲ್ಲೆ ಔರಾದ್​ ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಈ ದೃಶ್ಯಗಳು ಕಂಡು ಬಂದಿದೆ.

ಸನ್ನಿ ಲಿಯೋನ್ ಚಿತ್ರಗಳ ವೆಬ್ ಲಿಂಕ್ ಜತೆಗೆ ಪ್ರಾಚಾರ್ಯರ ಫೋನ್ ನಂಬರ್ ಹಾಕಿ, ಮನಸ್ಸಿಗೆ ಬಂದಂತೆ ಬರೆದಿದ್ದಾರೆ. ಇದರಿಂದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಕಿರಿಕಿರಿ ಉಂಟಾಗಿದೆ.

ಕಳೆದ 5 ವರ್ಷಗಳಿಂದ ಕಟ್ಟಡದ ಸಮಸ್ಯೆ ಎದುರಿಸುತ್ತಿದ್ದ ಕಾಲೇಜಿಗೆ ಈಚೆಗೆ ಪಟ್ಟಣದಿಂದ 2 ಕಿಮೀ ದೂರದ ಗುಡ್ಡವೊಂದರಲ್ಲಿ ನೂತನ ಕಾಲೇಜು ಕಟ್ಟಡ ನಿರ್ಮಿಸಿಕೊಡಲಾಗಿತ್ತು. ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದರಿಂದ ಸಂಜೆಯಾಗುತ್ತಿದ್ದಂತೆ ಕಾಲೇಜು ಅಕ್ರಮಗಳ ಅಡ್ಡೆಯಾಗಿ ಮಾರ್ಪಡುತ್ತಿದೆ.

ಉನ್ನತ ವ್ಯಾಸಂಗಕ್ಕಾಗಿ ಪಟ್ಟಣದಿಂದ ಇಷ್ಟು ದೂರು ಬರಬೇಕಿದೆ. ಎಲ್ಲೆಂದರಲ್ಲಿ ಉಗುಳಿದ ಕಲೆಗಳು, ಮನಸೋ ಇಚ್ಚೆ ಬರೆದ ಬರಹಗಳು. ಇವೆಲ್ಲವೂ ಕಾಲೇಜಿನ ವಾತಾವರಣವನ್ನು ಹದಗೆಡಿಸಿವೆ ಎಂದು ವಿದ್ಯಾರ್ಥಿನಿಯರು ತಮ್ಮ ಗೋಳು ಹೇಳಿಕೊಂಡರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ವಿದ್ಯಾಮಂದಿರಗಳು ಕೀಡಿಗೇಡಿಗಳ ಪುಂಡಾಟದಿಂದ ನಿಯಂತ್ರಿಸಬೇಕಿದೆ. ಕೂಡಲೇ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಬೇಕು. ಕುಡಿಯುವ ನೀರು, ಭದ್ರತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ವಿದ್ಯಾರ್ಥಿಗಳು, ಉಪನ್ಯಾಸಕರ ಆಗ್ರಹವಾಗಿದೆ.

Intro:ಕಾಲೇಜಿನ ಬೋರ್ಡ್ ಮೇಲೆ ನೀಲಿ ಚಿತ್ರಗಳ ವೇಬ್ ಲಿಂಕ್ ಬರೆದು ಕಿಡಿಗೇಡಿಗಳ ಅಟ್ಟಹಾಸ...!

ಬೀದರ್:
ಕಾಲೇಜು ಬೋರ್ಡ್ ಮೇಲೆ ಕಟ್ಟಡದ ಗೋಡೆಗಳ ಮೇಲೆ ಎಲ್ಲಂದರಲ್ಲಿ ನೀಲಿ ಚಿತ್ರದ ವೇಬ್ ಲಿಂಕ್ ಬರೆದು ಕೀಡಿಗೇಡಿಗಳ ತಂಡವೊಂದು ಅಟ್ಟಹಾಸ ಮೇರೆಯುತ್ತಿದ್ದು ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿರುವ ವಿಧ್ಯಾರ್ಥಿಗಳಿಗೆ ಮುಜುಗರಕ್ಕೀಡು ಮಾಡಿದೆ.

ವೈ.ಓ:
ಹೀಗೆ ಕಾಲೇಜಿನ ಮುಖ್ಯದ್ವಾರದಲ್ಲಿ ವೇಲ್ ಕಂ ಟೂ ಸೇಕ್ಷ್ ರೂಂ ಅಂತ, ನೋಟಿಸ್ ಬೋರ್ಡ್ ಮೇಲೆ ನೀಲಿ ತಾರೆ ಸನ್ನಿ ಲಿಯೋನ್ ಚಿತ್ರದ ವೇಬ್ ಲಿಂಕ್ ಜತೆಗೆ ಪ್ರಾಚಾರ್ಯರ ಫೋನ್ ನಂಬರ್ ಹಾಕಿ ಮನಸ್ಸಿಗೆ ಬಂದಂತೆಲ್ಲಾ ಗಿಚಿ ಉಪನ್ಯಾಸಕರು ಮತ್ತು ವಿಧ್ಯಾರ್ಥಿಗಳಿಗೆ ಮಾನಸಿಕ ಕಿರಿಕಿರಿ ಕೊಡ್ತಿರುವ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಔರಾದ್ ಪಟ್ಟಣದ ಪದವಿ ಮಹಾ ವಿದ್ಯಾಲಯದಲ್ಲಿ. ಹೊಸದಾಗಿ ಮಂಜೂರಾದ ಕಾಲೇಜಿಗೆ ಕಳೇದ ಐದು ವರ್ಷಗಳ ಕಾಲ ಕಟ್ಟಡದ ಸಮಸ್ಯೆ ಇತ್ತು ಈಗ ಪಟ್ಟಣ ಬಿಟ್ಟು ದೂರದ ಗುಡ್ಡವೊಂದರಲ್ಲಿ ಕಾಲೇಜು ನಿರ್ಮಿಸಲಾಗಿದೆ. ಸಂಜೆ ಯಾಗ್ತಿದ್ದಂತೆ ಈ ಕಾಲೇಜು ಅಕ್ರಮ ಅಡ್ಡೆಗಳ ಕೂಪವಾಗ್ತಿದ್ದು ಬೆಳಿಗ್ಗೆಯಾದ್ರೆ ಸಾಕು ವಿಧ್ಯಾರ್ಥಿಗಳು ಕಾಲಿಡಲು ಭಯವಾಗುವಂಥ ಸ್ಥೀತಿ ನಿರ್ಮಾಣವಾಗಿದೆ. ಕಂಪೌಂಡ್ ಗೋಡೆ ಇಲ್ಲದೆ ವಾಚ್ ಮ್ಯಾನ್ ಕೂಡ ನಿಯೋಜಿಸದೆ ಗದ್ದೆಗಳ ನಡುವೆ ನಡೆಯುತ್ತಿರುವ ಕಾಲೇಜಿನ ಗೋಡೆಗಳ ಮೇಲೆ ಅಶ್ಲೀಲ ಶಬ್ದಗಳನ್ನು ನೋಡಿ ತಲೆ ಕೆಟ್ಟು ಹೊಗ್ತಿದೆ ಅಂತಾರೆ ಸ್ಥಳೀಯ ವಿಧ್ಯಾರ್ಥಿನಿಯರು.

ಬೈಟ್-೦೧: ವಿಧ್ಯಾರ್ಥಿನಿ(ಮುಖ ಬ್ಲರ್ ಮಾಡಿ)

ಬೈಟ್-೦೨: ವಿಧ್ಯಾರ್ಥಿನಿ( ಮುಖ ಬ್ಲರ್ ಮಾಡಿ)

ವೈ.ಓ:
ಇನ್ನೂ ಶಾಲೆಯಲ್ಲಿ ಕುಡಿಯಲು ಹನಿ ನೀರು ಸಿಗೊಲ್ಲ ಹೀಗಾಗಿ ಶೌಚಾಲಯದ ಸಮಸ್ಯೆ ಕೂಡ ಎದುರಾಗಿದೆ. ಅಲ್ಲದೆ ಸುಸಜ್ಜಿತ ಕಟ್ಟಡದ ಕಿಡಕಿ ಗಾಜುಗಳು ಪುಡಿ ಪುಡಿ ಮಾಡಿರುವ ಕಿಡಿಗೇಡಿಗಳು ಗುಠಕಾ ತಿಂದು ಆವರಣದ ತುಂಬೆಲ್ಲಾ ಉಗುಳಿ ಅಸಹ್ಯವಾಗಿ ಮಾಡಿದ್ದಾರೆ. ಕೇಳಲು ಹೊದ್ರೆ ಹೊಡಿಯಲಿಕ್ಕೆ ಬರ್ತಾರೆ ಹೀಗಾಗಿ ಇರೋ ಕಟ್ಟಡದಲ್ಲೆ ಅದೆಂಗಾದ್ರು ಮಾಡಿ ಡಿಗ್ರಿ ತಗೊಂಡ್ರೆ ಸಾಕಪ್ಪ ಸಾಕು ಅನ್ನುವಂತಾಗಿದೆ ಇಲ್ಲಿ ವಿಧ್ಯಾರ್ಥಿಗಳ ಗೋಳು.

ಬೈಟ್-೦೩: ಧನಾಜಿ ರಾಠೋಡ- ವಿಧ್ಯಾರ್ಥಿ.

ವೈ.ಓ:
ಒಟ್ಟನಲ್ಲಿ ಮಕ್ಕಳ ಭವಿಷ್ಯ ರೂಪಿಸಬೇಕಾದ ವಿಧ್ಯಾಮಂದಿರಕ್ಕೆ ಕೀಡಿಗೇಡಿಗಳ ಕಾಟ ಹೆಚ್ಚಾಗಿದ್ದು ಅಕ್ಷರ ಜ್ಞಾನ ಪಡೆಯಲು ಬರುವ ಅದೇಷ್ಟೋ ವಿಧ್ಯಾರ್ಥಿನಿಯರು ಮುಜುಗರಕ್ಕೀಡಾಗಿ ಕಾಲೇಜಿಗೆ ಬರದಂತ ಸ್ಥೀತಿ ನಿರ್ಮಾಣವಾಗಿದ್ದು ಈ ಪದವಿ ಕಾಲೇಜಿಗೆ ಅಂಟಿಕೊಂಡ ಭಯಂಕರ ಕಾಟಕ್ಕೆ ಜಿಲ್ಲಾಡಳಿತ ಮುಕ್ತಿ ಹಾಡಬೇಕಿದೆ.
----- ಈಟಿವಿ ಭಾರತ ಬೀದರ್------Body:ಅನೀಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.