ಬೀದರ್ : ಪಿಸ್ತೂಲ್ ತೋರಿಸಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ನಿವಾಸಿಗಳಾದ ಶಾಂತಪ್ಪ, ಈರಣ್ಣ, ಮಾಳಪ್ಪಾ ವಿಠಲ, ಝಳಕಿ ಚಂದ್ರಕಾಂತ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ಇತ್ತೀಚೆಗೆ ಇಲ್ಲಿನ ಎಕಂಬ ಗ್ರಾಮದ ಸೊನು ರಾಮ ನರಸಿಂಗೆ ಎಂಬವರಿಗೆ ಪಿಸ್ತೂಲ್ನಿಂದ ಬೆದರಿಸಿ 1500 ಹಣ ಮತ್ತು ಬೈಕ್ ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮಠಾಂಳ ಪೊಲೀಸರು, ಎಸ್ ಪಿ ಡೆಕ್ಕ ಕಿಶೋರ್ ಬಾಬು ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಬೈಕ್, ಪಿಸ್ತೂಲ್, ನಗದು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಇದನ್ನೂ ಓದಿ : ಗುದದ್ವಾರದಲ್ಲಿ ಇಟ್ಟುಕೊಂಡು ಅಕ್ರಮ ಚಿನ್ನ ಸಾಗಣೆ: 28 ಲಕ್ಷ ರೂ. ಮೌಲ್ಯದ ಚಿನ್ನದೊಂದಿಗೆ ಆರೋಪಿ ವಶಕ್ಕೆ