ETV Bharat / state

ಪ್ರಧಾನಿ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ: ಶಾಹೀನ್ ಸಂಸ್ಥೆಯ ಕಂಟ್ರೋಲ್ ರೂಂ ಸೀಜ್...!

author img

By

Published : Jan 28, 2020, 9:27 PM IST

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಿಸಿದ, ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಸಿಟಿವಿ ಕಂಟ್ರೋಲ್ ರೂಂ ಸೀಜ್ ಮಾಡಿಸಲಾಗಿದೆ.

Shaheen institute Control Room Sieged
ಶಾಹೀನ್ ಸಂಸ್ಥೆಯ ಕಂಟ್ರೋಲ್ ರೂಂ ಸೀಜ್...!

ಬೀದರ್: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಿಸಿದ, ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಸಿಟಿವಿ ಕಂಟ್ರೋಲ್ ರೂಂ ಸೀಜ್ ಮಾಡಿಸಲಾಗಿದೆ. ನಗರದ ಶಹಪೂರ್ ಗೇಟ್ ಬಳಿಯಿರುವ ಶಾಹೀನ್ ಶಿಕ್ಷಣ ಸಂಸ್ಥೆಯ, ಎರಡು ನೂರಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಕಂಟ್ರೋಲ್ ಮಾಡುವ ಕೊಠಡಿಗೆ ಬೀಗ ಜಡಿದು ಜಪ್ತಿ ಮಾಡಿಕೊಳ್ಳಲಾಗಿದೆ.

ಡಿವೈಎಸ್​​ಪಿ ಬಸವರಾಜ ಹೀರಾ ನೇತೃತ್ವದಲ್ಲಿ ಭೇಟಿ ನೀಡಿದ ತನಿಖಾ ಅಧಿಕಾರಿಗಳ ತಂಡ, ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಹಾಗೂ ಸಹೋದರ ಮನ್ನಾನ್ ಶೇಠ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಶಾಹೀನ್ ಸಂಸ್ಥೆಯ ಕಂಟ್ರೋಲ್ ರೂಂ ಸೀಜ್...!

ಶಾಹೀನ್ ಶಿಕ್ಷಣ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಕುರಿತು ಅವಹೇಳನಕಾರಿ ನಾಟಕ ಪ್ರದರ್ಶಿಸಿರುವ ಆರೋಪ ಕೇಳಿ ಬಂದಿತ್ತು. ಶಾಲಾ ಮಕ್ಕಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ನಾಟಕ ಪ್ರದರ್ಶನ ಮಾಡಿಸಿ, ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಅಸಂವಿಧಾನಿಕ ಪದವೊಂದನ್ನು ಬಳಸಿದ ವಿಡಿಯೋ ಒಂದು ವೈರಲ್ ಆಗಿತ್ತು.

Intro:ಪ್ರಧಾನಿ ವಿರುದ್ಧ ಅವಹೇಳನಕಾರಿ ನಾಟಕ, ಶಾಹೀನ್ ಸಂಸ್ಥೆಯ ಕಂಟ್ರೋಲ್ ರೂಂ ಸೀಜ್...!

ಬೀದರ್:
ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ವಿರೋಧಿಸಿ ವಿಧ್ಯಾರ್ಥಿಗಳಿಂದ ನಾಟಕ ಪ್ರದರ್ಶನ ಮಾಡಿದ ನಗರದ ಶಾಹೀನ್ ಶಿಕ್ಷಣ ಸಂಸ್ಥೆಯ ಸಿಸಿಟಿವಿ ಕಂಟ್ರೋಲ್ ರೂಂ ಸಿಜ್ ಮಾಡಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ನಗರದ ಶಹಪೂರ್ ಗೇಟ್ ಬಳಿ ಇರುವ ಶಾಹೀನ್ ಶಿಕ್ಷಣ ಸಂಸ್ಥೆಯ 200 ಕ್ಕು ಅಧಿಕ ಸಿಸಿಟಿವಿ ಕ್ಯಾಮರ ಕಂಟ್ರೋಲ್ ಮಾಡುವ ಕೊಠಡಿಗೆ ಬೀಗ ಜಡಿದು ಜಪ್ತಿ ಮಾಡಿಕೊಳ್ಳಲಾಗಿದೆ.

ಡಿವೈಎಸ್ ಪಿ ಬಸವರಾಜ ಹೀರಾ ನೇತೃತ್ವದಲ್ಲಿ ಭೇಟಿ ನೀಡಿದ ತನಿಖಾ ಅಧಿಕಾರಿಗಳ ತಂಡ ಸಂಸ್ಥೆ ಅಧ್ಯಕ್ಷ ಅಬ್ದುಲ್ ಖದೀರ್ ಹಾಗೂ ಸಹೋದರ ಮನ್ನಾನ್ ಶೇಠ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
-----------Body:ಅನೀಲConclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.