ಬೀದರ್: ಪಶು ಸಂಗೋಪನಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಬಹಿರಂಗ ಸಮಾವೇಶದಲ್ಲಿ ಪಂಚಾಯತ್ ಸದಸ್ಯ ಇಮಾನ್ಯುವೇಲ್ ದರ್ಬಾರೆ ಅವರಿಗೆ ಭಾಷಣದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹಲವರು ಔರಾದ್ ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನಕದಾಸ ಜಯಂತಿ ನಿಮಿತ್ತ ಸಮಾರಂಭದಲ್ಲಿ ಪರೋಕ್ಷವಾಗಿ ವಿರೋಧ ಪಕ್ಷಗಳ ಮುಖಂಡರನ್ನು ಟಾರ್ಗೆಟ್ ಮಾಡಿ ಭಾಷಣ ಮಾಡಿದ್ದಾರೆ. ನಾನಿನ್ನು 10 ವರ್ಷಗಳ ಕಾಲ ಆಡಳಿತದಲ್ಲಿರುತ್ತೇನೆ. ನನ್ನ ಕೆಲಸಕ್ಕೆ ಅಡ್ಡಿ ಬಂದ್ರೆ ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಇಮಾನ್ಯುವೇಲ್ ದರ್ಬಾರೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಅವರ ಮೇಲೆಯೇ ಸಚಿವ ಪ್ರಭು ಚವ್ಹಾಣ ಅವರು ಬೆದರಿಕೆ ಹಾಕಿದ್ದಾರೆ. ಸಚಿವರ ಮೇಲೆ ಬೆದರಿಕೆ ಪ್ರಕರಣ ದಾಖಲಿಸುವುದಲ್ಲದೆ ಪಟ್ಟಣ ಪಂಚಾಯತ್ ಸದಸ್ಯ ಇಮಾನ್ಯುವೇಲ್ ದರ್ಬಾರೆ ಅವರಿಗೆ ರಕ್ಷಣೆ ನೀಡಬೇಕು ಎಂದು ಈ ಮೂಲಕ ಕೋರಿದ್ದಾರೆ.