ಬೀದರ್: ದಾಖಲೆ ಇಲ್ಲದೆ, ನೋಂದಣಿ ಮಾಡದೆ ದ್ವಿಚಕ್ರ ವಾಹನ ಬಳಕೆ ಮಾಡ್ತಿದ್ದ ಬೈಕ್ ಸವಾರರ ಚಳಿ ಬಿಡಿಸಿದ ಪೊಲೀಸರು 16 ಅಕ್ರಮ ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ದಾಖಲೆ ಇಲ್ಲದೆ ಮತ್ತು ಹೊಸ ಬೈಕ್ಗಳು ನೋಂದಣಿ ಮಾಡದೆ ವರ್ಷಗಟ್ಟಲೆ ಸುತ್ತಾಡಿಕೊಂಡು ಸಂಚಾರ ನಿಯಮ ಸಾಮೂಹಿಕ ಉಲ್ಲಂಘನೆ ಮಾಡುತ್ತಿದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಔರಾದ್ ಸಿಪಿಐ ರಮೇಶ ಮೈಲೂರಕರ್ ಹಾಗೂ ಪಿಎಸ್ ಐ ನಾನಾಗೌಡ ಮಾಲಿ ಪಾಟೀಲ್ ರಸ್ತೆಗಿಳಿದು ಅಕ್ರಮ ಬೈಕ್ಗಳ ತಪಾಸನೆ ನಡೆಸಿದಾಗ 16 ಬೈಕ್ ಗಳು ಅನಧಿಕೃತವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.