ಬೀದರ್: ಕಾಂಗ್ರೆಸ್ ನವರು ಭಾರತೀಯ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಅವರನ್ನು "ರಾಕ್ಷಸ, ರಾಷ್ಟ್ರ ದ್ರೋಹಿ" ಎಂದು ನಿಂದಿಸಿದ್ದರು ಅಲ್ಲದೇ ಕಾಂಗ್ರೆಸ್ ಪಕ್ಷ ಲಿಂಗಾಯತ ಸಮುದಾಯವನ್ನು ಕಳ್ಳರು ಎನ್ನುವ ಮೂಲಕ ಅವಮಾನಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿರುವ ಮೋದಿ ಇಂದು ಬೀದರ್ನ ಹುಮ್ನಾಬಾದ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೊದಲಿಗೆ ಕನ್ನಡದಲ್ಲಿ ಮಾತನ್ನು ಆರಂಭಿಸಿದ ಪ್ರಧಾನಿ ಬಸವೇಶ್ವರ ಮತ್ತು ಶಿವಶರಣರ ಭೂಮಿಗೆ ನಮಸ್ಕಾರ ಎಂದು ಮಾತು ಆರಂಭಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿರುವ ಬಗ್ಗೆ ಅಂಬೇಡ್ಕರ ಅವರೇ ಸಭೆಯೊಂದರಲ್ಲಿ ಎಲ್ಲವನ್ನೂ ವಿವರಿಸಿದ್ದರು ಎಂದರು.
ಮುಂದು ವರೆದು ಮಾತನಾಡಿ, ಡಬಲ್ ಇಂಜಿನ ಸರ್ಕಾರ ಇದ್ದರೆ ರಾಜ್ಯ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಕರ್ನಾಟಕದ ಈ ಚುನಾವಣೆ ಕೇವಲ 5 ವರ್ಷದ ಸರ್ಕಾರ ರಚನೆ ಮಾಡುವ ಚುನಾವಣೆಯಾಗಿಲ್ಲ. ಬದಲಿಗೆ ಈ ಬಾರಿಯ ಚುನಾವಣೆ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯ ಮಾಡಲಿರುವ ಚುನಾವಣೆಯಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ದೇಶದ ನಂ1 ರಾಜ್ಯವಾಗಲು ಡಬಲ್ ಇಂಜಿನ ಸರ್ಕಾರದ ಅವಶ್ಯಕತೆಯಿದೆ ಎಂದು ಮೋದಿ ಬಲವಾಗಿ ಪ್ರತಿಪಾದನೆ ಮಾಡಿದ್ದು, ತಮ್ಮ ಗುರಿಯನ್ನ ರಾಜ್ಯದ ಜನರ ಮುಂದಿಟ್ಟಿದ್ದಾರೆ.
ಡಬಲ್ ಇಂಜಿನ ಸರ್ಕಾರ ಇದ್ದರೆ ರಾಜ್ಯ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದರು. ಮುಂದುವರೆದು ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಎಕ್ಸ್ಪ್ರೆಸ್ ವೇ, ವಂದೇ ಭಾರತ್ ರೈಲು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳಾಗಿ. ಬೀದರನಲ್ಲೂ ಹಲವಾರು ಅಭಿವೃದ್ಧಿ ಕಾರ್ಯಗಳಾಗಿವೆ. ಈಗಾಗಲೇ ರಾಜ್ಯದ ಜನರು ಇಡೀ ದೇಶಕ್ಕೆ ಸಂದೇಶ ಸಾರಿದ್ದು, ಈ ಬಾರಿಯ ತಮ್ಮ ನಿರ್ಧಾರ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಎಂದು ಮೋದಿ ಹೇಳಿದರು.
ಜನರು ಕರ್ನಾಟಕ ಯಾವ ರೀತಿ ಇರಬೇಕು ಎಂದು ನಿರೀಕ್ಷಿಸಿದ್ದರೂ ಅದೇ ರೀತಿಯ ಕರ್ನಾಟಕ ನಿರ್ಮಾಣವಾಗುತ್ತಿದೆ. ಜನರು ಹೈವೇ ಎಕ್ಸ್ಪ್ರೆಸ್ ವೇ ಗಳಂತಹ ರಸ್ತೆಗಗಳ ಬಗ್ಗೆ ನಿರೀಕ್ಷೆ ಮಾಡಿದ್ದರು, ಅಲ್ಲದೇ ವಂದೇ ಭಾರತ್ ರೈಲುಗಳ ಸಂಚಾರ ಸೇರಿದಂತೆ ಹತ್ತು ಹಲವು ಬಗೆಯ ನಿರೀಕ್ಷೆಗಳನ್ನು ಜನರು ಹೊಂದಿದ್ದರು. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಈ ವರೆಗೂ ಜನರು ನಿರೀಕ್ಷೆ ಮಾಡಿದ್ದ ಎಲ್ಲ ಕಾರ್ಯಗಳು ಕರ್ನಾಟಕದಲ್ಲಿ ಆಗಿವೆ. ಅವರ ಕಂಡ ಕನಸನ್ನು ನಿಜ ಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಕೂತುಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ.. ಶಿವಶಂಕರಪ್ಪ ಅವರಿಗೆ ಟಕ್ಕರ್ ಕೊಡಲು ಬಿಜೆಪಿ ರಣತಂತ್ರ!
ಈ ಹಿನ್ನೆಲೆ ಕರ್ನಾಟಕ ನಂ 1 ರಾಜ್ಯ ಆಗಿರಲು ರಾಜ್ಯದಲ್ಲಿ ಡಬಲ್ ಇಂಜಿನ ಸರ್ಕಾರದ ಅವಶ್ಯಕತೆ ಇದೆ. ರಾಜ್ಯಕ್ಕೆ ಡಬಲ್ ಎಂಜಿನ ಬಲ ಇದ್ದರೆ ರಾಜ್ಯದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಇನ್ನು ಮೋದಿ ವಿಷದ ಹಾವು ಎಂದು ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಜನಾಶೀರ್ವಾದದಿಂದ ಕಾಂಗ್ರೆಸ್ ಬೈಗಳು ಮಣ್ಣಲ್ಲಿ ಮಣ್ಣಾಗುತ್ತವೆ. ನನ್ನ ಬೈಯುವುದರಲ್ಲೇ ಕಾಂಗ್ರೆಸ್ ಸಮಯ ವ್ಯರ್ಥ ಮಾಡುತ್ತಿದೆ. ಅಭಿವೃದ್ಧಿ ಕೆಲಸ ಮಾಡುವವರನ್ನು ಬೈಯುವುದು ಕಾಂಗ್ರೆಸ್ನವರ ಚಾಳಿ. ಕಾಂಗ್ರೆಸ್ ನವರು ಬೈದಾಗೆಲ್ಲ ಅವರಿಗೆ ತಕ್ಕ ಶಿಕ್ಷೆಯಾಗಿದೆ. ನೀವು ಬೈಯುತ್ತಿರಿ ನಾನು ಕೆಲಸ ಮಾಡುತ್ತಿರುವೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಏ.30ರಂದು ಸುಳ್ಯಕ್ಕೆ ಜೆಪಿ ನಡ್ಡಾ ಆಗಮನ.. ಪ್ರವೀಣ್ ನೆಟ್ಟಾರು ಮನೆಗೂ ಭೇಟಿ ಸಾಧ್ಯತೆ!