ಬಸವಕಲ್ಯಾಣ: ಕ್ವಾರಂಟೈನ್ ಕೇಂದ್ರದಲ್ಲಿ 20 ದಿನ ಕಳೆದರೂ ಮನೆಗೆ ತೆರಳಲು ಬಿಡುತ್ತಿಲ್ಲ. ಇದುವರೆಗೂ ವೈದ್ಯಕೀಯ ತಪಾಸಣೆ ಸಹ ನಡೆಸಿಲ್ಲ ಎಂಬ ಆರೋಪ ಬಸವಕಲ್ಯಾಣದಲ್ಲಿ ಕೇಳಿಬಂದಿದೆ.
ಮನೆಗೆ ತೆರಳಲು ಸಿದ್ಧರಾಗಿ ಕುಳಿತ ಕಾರ್ಮಿಕರು
ನಗರದ ಹೊರವಲಯದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ತಮ್ಮ ಮನೆಗೆ ತೆರಳಲು ಸಿದ್ಧರಾಗಿ ನಿಲಯದ ಹೊರಗೆ ಬಂದು ಕುಳಿತಿದ್ದರು.
ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ಭಾಗಗಳಿಂದ ಬಂದಿದ್ದ 100ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಅಧಿಕಾರಿಗಳ ಅನುಮತಿ ಇಲ್ಲದೇ ತಮ್ಮ ಮನೆಗಳಿಗೆ ತೆರಳಲು ತವರಿಗೆ ಮರಳಿದ ವಲಸಿಗ ಕಾರ್ಮಿಕರು ಸಿದ್ಧರಾಗಿದ್ದಾರೆ.
ಕಳೆದ 20 ದಿನಗಳ ಹಿಂದೆ ನಮ್ಮನ್ನು ಇಲ್ಲಿಗೆ ತಂದು ಕ್ವಾರಂಟೈನ್ ಮಾಡಲಾಗಿದೆ. ಕ್ವಾರಂಟೈನ್ ಅವಧಿ ಮುಗಿದರೂ ಇದುವರೆಗೆ ಸೋಂಕು ಪರೀಕ್ಷಾ ತಪಾಸಣೆ ನಡೆಸಿಲ್ಲ. ನಮ್ಮ ಸಮಸ್ಯೆ ಆಲಿಸಲು ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಸಹ ಭೇಟಿ ನೀಡಿಲ್ಲ. ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಮಹಿಳೆಯರು, ಮಕ್ಕಳು ನಿತ್ಯ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಅವಧಿ ಮುಗಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ಕ್ವಾರಂಟೈನ್ನಲ್ಲಿ ಇರುವವರು ಆಪಾದಿಸಿದರು.