ETV Bharat / state

ಬಿ.ನಾರಾಯಣರಾವ್​ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ಆಗ್ರಹ - B. Narayana Rao Commemoration Program

ಉಪ ಚುನಾವಣೆಯಲ್ಲಿ ಅವರ ನಾರಾಯಣರಾವ್ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಮೂಲಕ ನ್ಯಾಯ ಕಲ್ಪಿಸಬೇಕು ಎಂದು ಟೋಕ್ರಿ ಕೋಳಿ ಸಮಾಜ ಸಂಘದ ತಾಲೂಕು ಅಧ್ಯಕ್ಷ ಈಶ್ವರ ಬೋಕ್ಕೆ ಮನವಿ ಮಾಡಿದರು.

Basavakalyana Taluk President Ishwar Bokke
ಬಸವಕಲ್ಯಾಣ
author img

By

Published : Oct 4, 2020, 11:35 PM IST

ಬಸವಕಲ್ಯಾಣ: ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರು ಆಗಿದ್ದ ಶಾಸಕ ಬಿ.ನಾರಾಯಣರಾವ್​ ಅವರು ಬಡವರು ಮತ್ತು ಹಿಂದುಳಿದ ವರ್ಗಗಳ ಜನರ ಕಲ್ಯಾಣಕ್ಕಾಗಿ ಹಗಲಿರಳು ಶ್ರಮಿಸುತಿದ್ದರು. ಶಾಸಕರ ನಿಧನದಿಂದಾಗಿ ನಡೆಯಲಿರುವ ಉಪ ಚುನಾವಣೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಮೂಲಕ ನ್ಯಾಯ ಕಲ್ಪಿಸಬೇಕು ಎಂದು ಟೋಕ್ರಿ ಕೋಳಿ ಸಮಾಜ ಸಂಘದ ತಾಲೂಕು ಅಧ್ಯಕ್ಷ ಈಶ್ವರ ಬೋಕ್ಕೆ ಮನವಿ ಮಾಡಿದರು.

ಪುಣ್ಯಸ್ಮರಣೆ ಕಾರ್ಯಕ್ರಮ

ಸಸ್ತಾಪೂರ ಬಂಗ್ಲಾ ಬಳಿಯ ನಿಜ ಶರಣರ ಅಂಬಿಗರ ಚೌಡಯ್ಯನವರ ಜ್ಞಾನ ಆಶ್ರಮದ ಬಳಿ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕರನ್ನು ಕಳೆದುಕೊಂಡ ನಂತರ ಹಿಂದುಳಿದ ವರ್ಗದ ಜನರಿಗೆ ದಿಕ್ಕು ತೋಚದಂತಾಗಿದೆ. ಶಾಸಕರ ಕುಟುಂಬದವರಿಗೆ ಅವಕಾಶ ಕಲ್ಪಿಸುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿಕೊಂಡರು.

ಉಪ ಚುನಾವಣೆಯಲ್ಲಿ ನಾರಾಯಣರಾವ್​ ಅವರ ಕುಟುಂಬದವರಿಗೆ ಟಿಕೆಟ್ ನೀಡಿದಲ್ಲಿ ಮತ್ತೆ ಪ್ರತಿ ಬೂತ್ ಮಟ್ಟದಲ್ಲಿ ನಿಂತು ಕೆಲಸ ಮಾಡುವ ಮೂಲಕ ಭಾರಿ ಬಹುಮತದಿಂದ ಆಯ್ಕೆ ಮಾಡಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈಶ್ವರ ಬೋಕ್ಕೆ ಮಾತನಾಡಿ ಮನವಿ ಮಾಡುತ್ತಿದ್ದಂತೆ ವೇದಿಕೆಗೆ ಧಾವಿಸಿದ ಸಮಾಜದ ಹಿರಿಯ ಗಣ್ಯ ವ್ಯಕ್ತಿ ರಾಮಣ್ಣ ಮಂಠಾಳೆ, ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರ ಕಾಲಿಗೆ ಬಿದ್ದು ನಮಸ್ಕರಿಸುವ ಮೂಲಕ ನಾರಾಯಣರಾವ್​ ಅವರ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಬಸವಕಲ್ಯಾಣ ಕ್ಷೇತ್ರಕ್ಕೂ ಮತ್ತು ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆ ಭೀಮಣ್ಣ ಖಂಡ್ರೆ ಹಾಗೂ ನಾನು ಕೂಡಾ ಬಸವಕಲ್ಯಾಣದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದೇವೆ. ಮುಂದೆಯೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಆದರೆ ನನಗೆ ವೈಯಕ್ತಿಕವಾಗಿ ಯಾವುದೇ ಆಸೆ, ಆಕಾಂಕ್ಷೆಗಳು ಇಲ್ಲ ಎಂದು ಹೇಳುವ ಮೂಲಕ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬದಿಂದ ಯಾರು ಸ್ಪರ್ಧೆ ಮಾಡುವುದಿಲ್ಲ ಪರೋಕ್ಷವಾಗಿ ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.