ETV Bharat / state

ಡೆಂಗ್ಯೂ ಮಹಾಮಾರಿಗೆ ತತ್ತರಿಸಿದ ಜನ: ನಿದ್ರಾವಸ್ಥೆಗೆ ಜಾರಿದ ಬಸವ ಕಲ್ಯಾಣ ತಾಲೂಕು ಆಡಳಿತ! - ತಾಲೂಕು ಆರೋಗ್ಯ ಇಲಾಖೆ

ಶಂಕಿತ ಡೆಂಗ್ಯೂ ಮಹಾಮಾರಿಗೆ ತತ್ತಾಗಿ ಅದೆಷ್ಟೋ ಜನ ಹೈರಾಣಾಗುತ್ತಿದ್ದರೂ, ಕಾಯಿಲೆ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಬಸವ ಕಲ್ಯಾಣದ ಸ್ಥಳೀಯ ಆಡಳಿತ ನಿದ್ರಾವಸ್ಥೆಗೆ ಜಾರಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಡೆಂಘೀ ಜ್ವರ
author img

By

Published : Oct 10, 2019, 11:06 AM IST

Updated : Oct 10, 2019, 4:15 PM IST

ಬಸವಕಲ್ಯಾಣ: ಶಂಕಿತ ಡೆಂಗ್ಯೂ ಮಹಾಮಾರಿ ಕಾಯಿಲೆಗೆ ತತ್ತಾಗಿ ಅದೆಷ್ಟೋ ಜನ ಹೈರಾಣ ಆಗುತ್ತಿದ್ದರೂ, ಕಾಯಿಲೆ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ನಿದ್ರಾವಸ್ಥೆಗೆ ಜಾರಿದೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ನಗರ ಸೇರಿದಂತೆ ತಾಲೂಕಿನ ವಿವಿಧಡೆ ಹತ್ತಾರು ಸಂಖ್ಯೆಯಲ್ಲಿ ಜನ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ದಿನದಿಂದ ದಿನಕ್ಕೆ ಇದಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಷ್ಟಾದರೂ ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಇಲ್ಲಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ತಾಲೂಕು ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬೆರಳೆಣಿಕೆಯಷ್ಟು ರೋಗಿಗಳಲ್ಲಿ ಮಾತ್ರ ಶಂಕಿತ ಡೆಂಗ್ಯೂ ವೈರಾಣು ಪತ್ತೆಯಾಗಿದೆ. ಇನ್ನು ಜ್ವರಕ್ಕೆ ತುತ್ತಾದವರ ರಕ್ತದ ಮಾದರಿ ಸಂಗ್ರಹಿಸಿ ಉನ್ನತ ಹಂತದ ತಪಾಸಣೆಗಾಗಿ ಕಳಿಸಲಾಗಿತ್ತು. ಆದರೆ ಡೆಂಗ್ಯೂ ವೈರಾಣು ಇಲ್ಲ ಎನ್ನುವ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾದವರು ನಗರದ ಪಾಟೀಲ ಆಸ್ಪತ್ರೆ, ಭುರಳೆ, ರೀಫಾ ಆಸ್ಪತ್ರೆ, ರೆಡ್ಡಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಜ್ವರದ ತೀವ್ರತೆಗೆ ತುತ್ತಾದ ಹಲವರು ನೆರೆಯ ಮಹಾರಾಷ್ಟ್ರದ ಉಮರ್ಗಾ ಹಾಗೂ ಸೋಲಾಪೂರ ಹಾಗೂ ಹೈದ್ರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಶಂಕಿತ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ನಗರ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಬಗ್ಗೆ ವಿವರ ಕಲೆ ಹಾಕಿ ಅಗತ್ಯ ಚಿಕಿತ್ಸೆಗೆ ಆರೋಗ್ಯ ಅಧಿಕಾರಿಗಳು ಮುಂದಾಗಬೇಕಿದೆ. ನಿರ್ಲಕ್ಷ ವಹಿಸಿದಲ್ಲಿ ಮತ್ತಷ್ಟು ರೋಗ ಉಲ್ಬಣಗೊಂಡು ಇಲಾಖೆ ಕೈಮೀರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಶಂಕಿತ ಡೆಂಗ್ಯೂ ಜ್ವರ ಪತ್ತೆಯಾದ ಕೆಲ ಪ್ರದೇಶಗಳಲ್ಲಿಯ ಜನರನ್ನು ಭೇಟಿಯಾಗಿ ಜಾಗೃತಿ ಮೂಡಿಸಲಾಗಿದೆ. ಆದರೆ ನಗರಸಭೆಯಿಂದ ಮನೆ-ಮನೆಗಳಿಗೆ ಸರಬರಾಜುಗೊಳಿಸಲಾಗುತ್ತಿರುವ ನೀರಿನಲ್ಲಿಯೇ ಡೆಂಗ್ಯೂ ವೈರಾಣು ಹರಡುವ ಹುಳುಗಳು ಬರುತ್ತಿವೆ (ಲಾರ್ವಾ) ಎಂದು ಜನರು ಗೋಳು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಸಭೆ ಅಧಿಕಾರಿಗಳಿಗೆ ಪತ್ರ ಬರೆದರು ಪ್ರಯೋಜನವಾಗಿಲ್ಲ. ಬುಧವಾರ ಮತ್ತೆ ಪತ್ರ ಬರೆಯಲಾಗುವುದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Intro:ಡೆಂಘೀ ಜ್ವರ ಹರಡುವ ಸೊಳ್ಳೆ ಚಿತ್ರ ಕಳಿಸಲಾಗಿದೆ.

ಬಸವಕಲ್ಯಾಣ: ಶಂಕಿತ ಡೆಂಘೀ ಮಹಾಮಾರಿ ಕಾಯಿಲೆಗೆ ತತ್ತಾಗಿ ಅದೇಷ್ಟೊÃ ಜನ ಹೈರಾಣ ಆಗುತ್ತಿದ್ದರು ಕಾಯಿಲೆ ನಿಯಂತ್ರಣಕ್ಕೆ ಮುಂದಾಬೇಕಿದ್ದ ಸ್ಥಳೀಯ ಆಡಳಿತ ನಿದ್ರಾವಸ್ಥೆಗೆ ಜಾರಿಗೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ.
ನಗರ ಸೇರಿದಂತೆ ತಾಲೂಕಿನ ವಿವಿಧಡೆ ಹತ್ತಾರು ಸಂಖ್ಯೆಯಲ್ಲಿ ಜನ ಡೆಂಘೀ ಜ್ವರದಿಂದ ಬಳಲುತ್ತಿದ್ದು, ದಿನದಿಂದ ದಿನಕ್ಕೆ ಇದಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಲೆ ಇದ್ದರು ಕೂಡ, ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಸೂಕ್ತ ಪ್ರಯತ್ನ ಸನಡೆಯುತ್ತಿಲ್ಲ ಎನ್ನುವ ಆರೋಪ ಇಲ್ಲಿಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರು ಸಹ ಇದರ ನಿಯಂತ್ರಣಕ್ಕ ಕ್ರಮ ಕೈಗೊಳ್ಳದೆ ಇರುವದು ಸ್ಥಳೀಯ ಆಡಳಿತದ ಕಾರ್ಯ ವೈಖರಿಗೆ ಹಿಡಿದ ಕನ್ನಡಿಯಾಗಿದೆ.
ತಾಲೂಕು ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಬೆರಳಣಿಕೆಯಷ್ಟು ರೋಗಿಗಳಲ್ಲಿ ಮಾತ್ರ ಶಂಕಿತ ಡೆಂಘೀ ವೈರಾಣು ಪತ್ತೆಯಾಗಿದೆ. ಶಂಕಿತ ಡೆಂಘೀ ಜ್ವರಕ್ಕೆ ತುತ್ತಾದವರ ರಕ್ತದ ಮಾದರಿ ಸಂಗ್ರಹಿಸಿ ಉನ್ನತ ಹಂತದ ತಪಾಸಣೆಗಾಗಿ ಕಳಿಸಲಾಗಿತ್ತು. ಆದರೆ ಡೆಂಘೀ ವೈರಾಣು ಇಲ್ಲ ಎನ್ನುವ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಸರ್ಕಾರಿ ಆಸ್ಪçತೆಗೆ ಬರುವ ರೋಗಿಗಳಲ್ಲಿ ಡೆಂಘೀ ವೈರಾಣು ಕಂಡು ಬಂದರೆ ಮಾತ್ರ ದಾಖಲೆಯಲ್ಲಿ ಇಡಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ, ಡೆಂಘೀ ರೋಗ ಉಲ್ಬಣಗೊಂಡರೂ ಇಲಾಖೆ ವೈದ್ಯರು ಕಚೇರಿ ಬಿಟ್ಟು ಮೇಲೇಳುತ್ತಿಲ್ಲ ಎಂದು ಜನರು ಆಕ್ರೊÃಶ ವ್ಯಕ್ತಪಡಿಸುತಿದ್ದಾರೆ.
ಶಂಕಿತ ಡೆಂಘೀ ಜ್ವರಕ್ಕೆ ತುತ್ತಾದವರು ನಗರದ ಪಾಟೀಲ ಆಸ್ಪತ್ರೆ, ಭುರಳೆ, ರೀಫಾ ಆಸ್ಪತ್ರೆ, ರೆಡ್ಡಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತದ್ದರೆ, ಜ್ವರದ ತೀವ್ರತೆಗೆ ತುತ್ತಾದ ಹಲವರು ನೆರೆಯ ಮಹಾರಾಷ್ಟçದ ಉಮರ್ಗಾ ಹಾಗೂ ಸೋಲಾಪೂರ ಹಾಗೂ ಹೈದ್ರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಖಾಸಗಿ ಆಸ್ಪತ್ರಗೆ ದಾಖಲಾದ ರೋಗಿಗಳಲ್ಲಿ ಶಂಕಿತ ಡೆಂಘೀ ವೈರಾಣು ಕಂಡು ಬಂದಲ್ಲಿ ತಕ್ಷಣ ಸಂಬಂಧಪಟ್ಟ ಸ್ಥಳೀಯ ಆರೋಗ್ಯ ಇಲಾಖೆ ವೈದ್ಯರಿಗೆ ಮಾಹಿತಿ ನೀಡಬೇಕು. ಆದರೆ ನಗರದಲ್ಲಿಯ ಒಂದೆರಡು ಆಸ್ಪತ್ರೆಯವರು ಬಿಟ್ಟರೆ ಉಳಿದವರು ಇದರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುತ್ತಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದುಬರುತ್ತಿದೆ.
ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಡೆಂಘೀ ವೈರಾಣು ಇರುವ ಬಗ್ಗೆ ಶಂಕೆ ಇದಲ್ಲಿ ಖಾಸಗಿ ಆಸ್ಪತ್ರೆಯವರು ಸ್ಥಳೀಯ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಈ ಮಾಹಿತಿ ಆಧರಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ರೋಗಿಗಳ ಚಿಕಿತ್ಸೆಗೆ ಮುಂದಾಗುವ ಜೋತೆಗೆ ವೈರಾಣು ಪತ್ತೆಯಾದ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು.
ಅಸ್ವಚ್ಛತೆಯಿಂದ ಕೂಡಿದ ಪರಿಸರ, ಮನೆ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ವಾರಗಟ್ಟಲೆ ಸಂಗ್ರಹಗೊಂಡು ನಿಲ್ಲುವ ನೀರಿನಲ್ಲಿ ಡೆಂಘೀ ವೈರಾಣು ಹರಡುವ ಈಡಿಸ್ ಜಾತಿಯ ಸೊಳ್ಳೆ ಉತ್ಪತಿಯಾಗಿ ಮನುಷ್ಯರಿಗೆ ಕಚ್ಚಿದಾಗ ಡೆಂಘೀ ಜ್ವರ ಹರಡುತ್ತದೆ. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಜನರಲ್ಲಿ ಅಭಿಯಾನದ ರೀತಿಯಲ್ಲಿ ಜಾಗೃತಿ ಮೂಡುವ ಕೆಲಸ ನಡೆಯಬೇಕಾಗಿದೆ.
ಶಂಕಿತ ಡೆಂಘೀ ಜ್ವರಕ್ಕೆ ತುತ್ತಾಗಿ ನಗರ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಬಗ್ಗೆ ವಿವರ ಕಲೆ ಹಾಕಿ ಅಗತ್ಯ ಚಿಕಿತ್ಸೆಗೆ ಆರೋಗ್ಯ ಅಧಿಕಾರಿಗಳು ಮುಂದಾಗಬೇಕಿದೆ. ನಿರ್ಲಕ್ಷ ವಹಿಸಿದಲ್ಲಿ ಮತ್ತಷ್ಟು ರೋಗ ಉಲ್ಬಣಗೊಂಡು ಇಲಾಖೆ ಕೈಮೀರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

(ಬಾಕ್ಸ್ ಮಾಡಿಕೊಳ್ಳಿ ಸರ್)

ನಗರಸಭೆ ನೀರಿನೊಂದಿಗೆ ಡೆಂಘೀ ಹುಳಗಳ ಸರಬರಾಜು.?
ಶಂಕಿತ ಡೆಂಘೀ ಜ್ವರ ಪತ್ತೆಯಾದ ಕೆಲ ಪ್ರದೇಶಗಳಲ್ಲಿಯ ಜನರಿಗೆ ಭೇಟಿಯಾಗಿ ಜಾಗೃತಿ ಮೂಡಿಸಲಾಗಿದೆ. ಆದರೆ ನಗರಸಭೆಯಿಂದ ಮನೆ-ಮನೆಗಳಿಗೆ ಸರಬರಾಜು ಗೊಳಿಸಲಾಗುತ್ತಿರುವ ನೀರಿನಲ್ಲಿಯೇ ಡೆಂಘೀ ವೈರಾಣು ಹರಡುವ ಹುಳುಗಳು ಬರುತ್ತಿವೆ (ಲಾರ್ವಾ) ಎಂದು ಜನರು ಗೋಳು ತೊಡಿಕೊಳ್ಳುತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಸಭೆ ಅಧಿಕಾರಿಗಳಿಗೆ ಪತ್ರ ಬರೆದರು ಪ್ರಯೋಜನೆಯಾಗಿಲ್ಲ. ಬುಧವಾರ ಮತ್ತೆ ಪತ್ರ ಬರೆಯಲಗುವದು ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
Last Updated : Oct 10, 2019, 4:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.