ETV Bharat / state

ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ನಾರಾಯಣರಾವ್​ ಚಾಲನೆ

ಬೀದರ್​ನ ಬಸವಕಲ್ಯಾಣ ನಗರದಲ್ಲಿ ಶಾಸಕ ನಾರಾಯಣರಾವ್​ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಿದರು.

MLA Narayanarawa inauguration drinking water units
ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಶಾಸಕ ನಾರಾಯಣರಾವ ಚಾಲನೆ
author img

By

Published : May 12, 2020, 9:53 PM IST

ಬಸವಕಲ್ಯಾಣ: ಆರೋಗ್ಯಕರ ದೇಹಕ್ಕೆ ಶುದ್ಧ ನೀರು ಅತ್ಯವಶ್ಯಕವಾಗಿದ್ದು, ಜನರಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಬಿ.ನಾರಾಯಣರಾವ್​​ ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಒಟ್ಟು 15 ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದವು. ಇವುಗಳ ಪೈಕಿ 12 ಘಟಕಗಳ ಕೆಲಸ ಪೂರ್ಣಗೊಂಡಿದ್ದು, ಇದರಲ್ಲಿ ನಾಲ್ಕು ಕಡೆ ಇಂದು ಉದ್ಘಾಟಿಸಲಾಗಿದೆ. ಉಳಿದ ಮೂರು ಕಡೆ ಕೆಲಸ ಪ್ರಗತಿಯಲ್ಲಿದೆ. ನಗರದ ಎಲ್ಲಾ ವಾರ್ಡ್​​ಗಳಲ್ಲಿ ಘಟಕ ಅರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಿ, ಕೆಲಸ ಮಾಡಲಾಗಿದೆ. ನಗರ ಸೇರಿ ಕ್ಷೇತ್ರದಲ್ಲಿ ಹಲವು ಹೊಸ ರಸ್ತೆ ಕಾಮಗಾರಿ ನಡೆದಿದೆ. ನಗರದ ಹಲವು ವಾರ್ಡ್​​ಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ. ನಗರದಲ್ಲಿ ನೀರಿನ ಸಮಸ್ಯೆಯಾಗದಂತೆ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.