ಬೀದರ್: ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಕ್ರಮ ನಡೆದಿದೆ ಎಂಬ ಸಾಲು ಸಾಲು ಆರೋಪಗಳಿಂದ ಎಚ್ಚೆತ್ತ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ ನೀಡಿ ಉಪಕುಲಪತಿಗಳಿಗಾಗಿ ಕಾದು ಕಾದು ಸುಸ್ತಾದ ಘಟನೆ ನಡೆದಿದೆ.
ಕಮಠಾಣ ರಸ್ತೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಎಂಟ್ರಿ ಕೊಟ್ಟ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣಗೆ ಶಾಕ್ ಆಗಿದೆ. ಕಚೇರಿ ಸಮಯಕ್ಕೆ ನಿಗದಿತವಾಗಿ ಬರಬೇಕಾದ ಉಪ ಕುಲಪತಿಗಳು ಒಂದು ಗಂಟೆ ತಡವಾಗಿ ಆಗಮಿಸಿದರು. ಸಚಿವ ಚವ್ಹಾಣ ಅವರು ಕುಲಪತಿಗಳ ಚೆಂಬರ್ನಲ್ಲಿ ಕಾದು ಕಾದು ಸುಸ್ತಾಗಿ ಹೊದ್ರು. ಚವ್ಹಾಣ ಅವರ ಆಪ್ತ ಸಹಾಯಕರು ಉಪ ಕುಲಸಚಿವ ನಾರಾಯಣ ಸ್ವಾಮಿ ಅವರಿಗೆ ಫೋನ್ ಮಾಡಿ ಸಚಿವರು ನಿಮಗಾಗಿ ಕಾದು ಕುಳಿತಿದ್ದಾರೆ ಬನ್ನಿ ಬನ್ನಿ ಎಂದು ದುಂಬಾಲು ಬಿದ್ದು ಕರೆ ಮಾಡಿದ್ದು ಕಂಡು ಬಂತು.
ಇದೇ ವೇಳೆ ವಿಶ್ವವಿದ್ಯಾಲಯದ ಪಿಠೋಪಕರಣ ಹಾಗೂ ಸಾಮಾಗ್ರಿ ಖರೀದಿಯಲ್ಲಿ ಗೋಲ್ಮಾಲ್ ನಡೆದು ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆರೋಪ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆದ ಹಿನ್ನಲೆಯಲ್ಲಿ ಹೀಗೆ ದಿಢೀರ್ ಭೇಟಿ ನೀಡಿರುವುದಾಗಿ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.