ಬೀದರ್: ಸದ್ಗುರು ಹರಿನಾಥ್ ಮಹಾರಾಜರ ಜಾತ್ರೆಯ ನಿಮಿತ್ತ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಹರಿನಾಮ ಹಾಡಿಗೆ ಹೆಜ್ಜೆ ಹಾಕಿದರು.
ಜಿಲ್ಲೆಯ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿನ 12ನೇ ಶತಮಾನದ ಸಂತ ಶ್ರೀ ಹರಿನಾಥ್ ಮಹಾರಾಜರ ಜಾತ್ರೆಯಲ್ಲಿ ಪಾಲ್ಗೊಂಡ ಸಚಿವರು, ಭಜನಾ ಮೇಳದ ಭಕ್ತರೊಂದಿಗೆ ಕೈ-ಕೈಹಿಡಿದು ಹರಿನಾಮ ಹಾಡಿಗೆ ಹೆಜ್ಜೆ ಹಾಕಿದರು.
ಹಿಂದೂ, ಮುಸ್ಲಿಂ, ಜೈನ್ ಸಮುದಾಯದವರು ಒಗ್ಗೂಡಿ ಪರಂಪರಾಗತವಾಗಿ ಆಚರಣೆ ಮಾಡಿಕೊಂಡು ಬರುತ್ತಿರುವ ಜಾತ್ರೆಯಲ್ಲಿ ಸಚಿವರ ನೃತ್ಯ ಎಲ್ಲರ ಗಮನ ಸೆಳೆದಿದೆ.