ETV Bharat / state

ಹಣ ಪಡೆಯದೇ ಯಾವುದೇ ಕೆಲಸ ಆಗುತ್ತಿಲ್ಲ: ನಗರಸಭೆ ಅವ್ಯವಸ್ಥೆಗೆ ಬ್ರೇಕ್ ಹಾಕುವಂತೆ ಸದಸ್ಯರಿಂದಲೇ ಒತ್ತಾಯ

ನಗರ ಸಭೆಯಲ್ಲಿ ಅಧ್ಯಕ್ಷ ನಾಹಿದಾ ಅಫ್ಸರ್‌ಮಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಬ್ಬರು ಹಿರಿಯ ಸದಸ್ಯರು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು. ನಗರಸಭೆಯಲ್ಲಿನ ಅವ್ಯವಸ್ಥೆ, ಕೆಲ ಸಿಬ್ಬಂದಿ ಬೇಜವ್ದಾರಿತನ ಸೇರಿದಂತೆ ಇತರ ಎಡವಟ್ಟುಗಳನ್ನು ಬಿಚ್ಚಿಡುವ ಮೂಲಕ ತರಾಟೆಗೆ ತೆದುಕೊಂಡು, ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಿದರು.

Members urged to control fraud case in nagarsabhe
ಹಣ ಪಡೆಯದೆ ಯಾವುದೇ ಕೆಲಸ ಆಗುತ್ತಿಲ್ಲ: ನಗರಸಭೆ ಅವ್ಯವಸ್ಥೆಗೆ ಬ್ರೇಕ್ ಹಾಕುವಂತೆ ಸದಸ್ಯರಿಂದಲೇ ಒತ್ತಾಯ
author img

By

Published : Jan 12, 2021, 6:56 AM IST

ಬಸವಕಲ್ಯಾಣ: ನಗರಸಭೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸದಸ್ಯರಿಗೆ ಗೌರವ ಕೊಡುತ್ತಿಲ್ಲ. ಅನಧಿಕೃತ ನಿವೇಶನಗಳಿಗೆ ನಂಬರ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಹಣ ಪಡೆಯದೆ ಯಾವುದೇ ಕೆಲಸ ಕಾರ್ಯಗಳು ಸಹ ಆಗುತ್ತಿಲ್ಲ ಎಂದು ಖುದ್ದು ನಗರಸಭೆ ಸದಸ್ಯರೇ ಆರೋಪಿಸಿ, ತಕ್ಷಣ ಕ್ರಮ ಕೈಗೊಂಡು ವ್ಯವಸ್ಥೆಯ ಸುಧಾರಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ನಗರ ಸಭೆಯಲ್ಲಿ ಅಧ್ಯಕ್ಷ ನಾಹಿದಾ ಅಫ್ಸರ್‌ಮಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಬ್ಬರು ಹಿರಿಯ ಸದಸ್ಯರು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿ ಗಮನ ಸೆಳೆದರು. ನಗರಸಭೆಯಲ್ಲಿನ ಅವ್ಯವಸ್ಥೆ, ಕೆಲ ಸಿಬ್ಬಂದಿಯ ಬೇಜವ್ದಾರಿತನ ಸೇರಿದಂತೆ ಇತರ ಎಡವಟ್ಟುಗಳನ್ನು ಬಿಚ್ಚಿಡುವ ಮೂಲಕ ತರಾಟೆಗೆ ತೆಗೆದುಕೊಂಡು, ವ್ಯವಸ್ಥೆ ಸುಧಾರಣೆಗೆ ಸಲಹೆ ನೀಡಿದರು.

ನಗರಸಭೆ ಅವ್ಯವಸ್ಥೆಗೆ ಬ್ರೇಕ್ ಹಾಕುವಂತೆ ಸದಸ್ಯರಿಂದಲೇ ಒತ್ತಾಯ

ಹಿರಿಯ ಸದಸ್ಯ ರವೀಂದ್ರ ಗಾಯಕವಾಡ ವಿಷಯ ಪ್ರಸ್ತಾಪಿಸಿ, 15ನೇ ಹಣಕಾಸು ಯೋಜನೆಯಡಿ 4.6 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಯಾರು ಸಿದ್ಧಪಡಿಸಿದ್ದಾರೆ. ನಗರದಲ್ಲಿ ಗಾಂಧಿ ವೃತ್ತದ ಬಳಿ ರಸ್ತೆ ಕೆಟ್ಟಿದೆ. ಇಂತಹ ಅಗತ್ಯವಾದ ಸ್ಥಳಗಳಲ್ಲಿ ಕಾಮಗಾರಿ ನಡೆಯದೇ ಅನಗತ್ಯ ಸ್ಥಳದಲ್ಲಿ ಕಾಮಗಾರಿ ಇಟ್ಟಿರುವುದು ನಾಚಿಕೆಯ ವಿಷಯವಾಗಿದೆ. ಈ ಕ್ರಿಯಾ ಯೋಜನೆ ರದ್ದುಪಡಿಸಿ ಹೊಸದಾಗಿ ಉತ್ತಮ ಕ್ರಿಯಾ ಯೋಜನೆ ರೂಪಿಸಿ ಎಂದರು. ಇದಕ್ಕೆ ಸದಸ್ಯರು ಕೂಡ ಧ್ವನಿಗೂಡಿಸಿದರು.

ನಗರದ ಚಮ್ಮನ್ ಗಾರ್ಡನ್‌ನಲ್ಲಿಯ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳು ಹಂಚಿಕೆಯಾಗಿ ಎರಡು ವರ್ಷ ಕಳೆದಿದೆ. ಇಲ್ಲಿ ಅಗತ್ಯ ಸೌಲಭ್ಯಗಳಿಲ್ಲದೇ ಅಂಗಡಿಗಳು ತೆರೆದಿಲ್ಲ. ಜನ ಬಾಡಿಗೆ ಕಟ್ಟುತ್ತಿಲ್ಲ. ಸೌಲಭ್ಯಗಳನ್ನು ಕಲ್ಪಿಸಿ ನಿರ್ವಹಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: ಕ್ಷಣಾರ್ಧದ ನಿದ್ದೆಗೆ ಕಾರನ್ನೇ ಕಳೆದುಕೊಂಡ ಚಾಲಕ..!!

ಮತ್ತೊಬ್ಬ ಹಿರಿಯ ಸದಸ್ಯ ಗಫಾರ್​ ಪೇಶಮಾಮ ಮಾತನಾಡಿ, ಸಮಸ್ಯೆ ಹೊತ್ತು ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳಿಗೆ ಇಲ್ಲಿ ಕೇಳುವರಿಲ್ಲ. ಇವರಿಗೆ ಹಣ ಕೊಟ್ಟರೆ ಕೆಲಸ ಆಗುತ್ತದೆ. ಇಲ್ಲಿ ಸದಸ್ಯರಿಗೂ ಗೌರವ ಇಲ್ಲ. ಹಣವೇ ಮುಖ್ಯ ಎನ್ನುವಂತಿದೆ ಎಂದು ಅಧಿಕಾರಿ ಸಿಬ್ಬಂದಿ ವಿರುದ್ಧ ಕಿಡಿ ಕಾರಿದರು.

ನಗರಸಭೆಯಲ್ಲಿ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ಮತ್ತು ಸಿಬ್ಬಂದಿ ಸೇರಿ ವ್ಯವಸ್ಥೆ ಸರಿಪಡಿಸೋಣ. ಯಾವುದೇ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ನಿರ್ದಿಷ್ಟವಾಗಿ ದೂರುಗಳು ಬಂದರೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದಸ್ಯರು ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ ಅವರು ಸದಸ್ಯರಲ್ಲಿ ಕೇಳಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.