ಬೀದರ್: ಪೊಲೀಸ್ ಕ್ರೀಡಾಕೂಟ ಅಂಗವಾಗಿ ಸೌಹಾರ್ದಯುತವಾಗಿ ಆಯೋಜಿಸಿದ ಪೊಲೀಸ್ ಹಾಗೂ ಮಾಧ್ಯಮ ತಂಡದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ತಂಡದ ವಿರುದ್ಧ ಮಾಧ್ಯಮ ತಂಡ ಭರ್ಜರಿ ಗೆಲುವು ಸಾಧಿಸಿದೆ.
ನಗರದ ಪೊಲೀಸ್ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸ್ ತಂಡ ನಿಗದಿತ 12 ಒವರ್ ನಲ್ಲಿ 143 ರನ್ ಗಳಿಸಿತ್ತು. ಪೊಲೀಸ್ ತಂಡದ ಗರಿಷ್ಠ ರನ್ ಗಳನ್ನು ಚೇಸ್ ಮಾಡಿದ ಮಾಧ್ಯಮ ತಂಡ 10.2 ಒವರ್ ನಲ್ಲಿ 144 ರನ್ ಗಳಿಸಿ ಗೆಲುವು ಸಾಧಿಸಿದೆ.
ಮಾಧ್ಯಮದ ತಂಡದಲ್ಲಿ ಬ್ಯಾಟಿಂಗ್ ಮಾಡಿದ ಅಪರ ಜಿಲ್ಲಾಧಿಕಾರಿ ರುದ್ರೇಶ್ ಘಾಳಿ ಅವರು 43 ಎಸೆತಗಳಲ್ಲಿ ಭರ್ಜರಿ 73 ರನ್ ಸಿಡಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಅಲ್ಲದೆ ಮಾಧ್ಯಮ ತಂಡದ ನಾಯಕ ರಾಜಕುಮಾರ ಸ್ವಾಮಿ 9 ಎಸೆತದಲ್ಲಿ ಔಟಾಗದೆ 34 ರನ್ ಗಳಿಸಿರುವುದು ಮಾಧ್ಯಮ ತಂಡದ ಗೆಲುವಿಗೆ ವರದಾನವಾಯ್ತು.