ಬೀದರ್: ಲಾಕ್ಡೌನ್ ಆದೇಶವನ್ನು ತಜ್ಞರ ಸಲಹೆ ಮೇರೆಗೆ ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯ ಪಟ್ಟಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಹಾಮಾರಿ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಕ್ಷೇತ್ರಗಳ ಕುರಿತು ತಜ್ಞರ ಸಲಹೆಯಂತೆ ಲಾಕ್ಡೌನ್ ಮುಂದುವರಿಸಿದರೆ ಸರ್ಕಾರದ ತಿರ್ಮಾನದ ಜೊತೆ ನಾವು ಇರುತ್ತೇವೆ ಎಂದಿದ್ದಾರೆ.
ಅಲ್ಲದೇ ಫೆ.12 ರಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ಎಚ್ವರಿಸಿದ್ರು, ಆದರೆ ಅಂದೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂದು ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದರೂ ಈಗ ಹಾಕಲಾದ ಲಾಕ್ಡೌನ್ ಪರಿಣಾಮಕಾರಿಯಾಗಬೇಕಿದ್ದು, ಇದರಿಂದಾಗಿ ಸಂಕಟದಲ್ಲಿರುವ ಬಡವರನ್ನು ಹಸಿವಿನಿಂದ ಉಳಿಸಿಕೊಳ್ಳುವ ಎಲ್ಲಾ ಕ್ರಮಗಳು ಸರ್ಕಾರ ತೆಗೆದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಉಳಿಸಬೇಕಿದೆ ಎಂದರು.