ETV Bharat / state

ವೀರಶೈವ-ಲಿಂಗಾಯತ ಬದಲಿಗೆ 'ಲಿಂಗಾಯತ' ಎಂದು ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹ - Lingayat community

ವೀರಶೈವ-ಲಿಂಗಾಯತ ಬದಲಾಗಿ ಕೇವಲ ಲಿಂಗಾಯತ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು.

Basavakalyana
Basavakalyana
author img

By

Published : Oct 1, 2020, 7:08 PM IST

ಬಸವಕಲ್ಯಾಣ: ಲಿಂಗಾಯತ ಸಮುದಾಯದವರಿಗೆ ಸೂಕ್ತ ರೀತಿಯಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಹುಲಸೂರಿನ ಶ್ರೀ ವಿಶ್ವಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಒತ್ತಾಯಿಸಿದೆ.

ಹುಲಸೂರ ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆಳಿದ ಟ್ರಸ್ಟ್ ಪದಾಧಿಕಾರಿಗಳ ನಿಯೋಗ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಸಂಜುಕುಮಾರ ಭೈರೆ ಅವರಿಗೆ ಸಲ್ಲಿಸಿ, ಬೇಡಿಕೆ ಈಡೇರಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಲಿಂಗಾಯತ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷಗಳು ಉಂಟಾಗುತ್ತಿವೆ. ಈ ಸಮಾಜದ ಜನರ ಪೂರ್ವಜರು ದಾಖಲಾತಿಗಳಲ್ಲಿ ತಮ್ಮ ಮೂಲ ಜಾತಿ ಲಿಂಗಾಯತ ಎಂದು ನಮೂದಿಸಿದರು ಕೂಡ ಪ್ರಸ್ತುತ ಸಂದರ್ಭದಲ್ಲಿ ಲಿಂಗಾಯತ ಜಾತಿ ಪ್ರಮಾಣ ಪತ್ರಕ್ಕಾಗಿ ಸರ್ಜಿ ಸಲ್ಲಿಸಿದಲ್ಲಿ ಕಂದಾಯ ಇಲಾಖೆಯಿಂದ ವೀರಶೈವ-ಲಿಂಗಾಯತ ಎಂದು ನೀಡಲಾಗುತ್ತಿದೆ. ಇದರಿಂದ ಲಿಂಗಾಯತ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಲಿಂಗಾಯತ ಸಮಾಜದ ಜನರ ಭಾವನೆಗಳಿಗೆ ಸ್ಪಂದಿಸಿ ಇನ್ನೂ ಮುಂದೆಯಾದರೂ ವೀರಶೈವ ಲಿಂಗಾಯತ ಬದಲಿಗೆ ಕೇವಲ ಲಿಂಗಾಯತ ಎನ್ನುವ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಈ ವೇಳೆ ಶ್ರೀ ವಿಶ್ವಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಾಲಕುಂದೆ, ಪ್ರಮುಖರಾದ ಪ್ರವೀಣ ಕಾಡಾದಿ, ಶಿವರಾಜ ಖಪಲೆ, ರಮೇಶ ಭೋಪಳೆ, ರಾಜಕುಮಾರ ತೊಂಡಾರೆ, ಸಚಿನ ವಗ್ಗೆ, ಬಸವರಾಜ ಕವಟೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.