ETV Bharat / state

ಕಾರ್ತಿಕ ಮಾಸ: ಸಿದ್ದೇಶ್ವರ ದೇವಾಲಯದಲ್ಲಿ ದೀಪೋತ್ಸವ - ದೀಪೋತ್ಸವ ಕಾರ್ಯಕ್ರಮ

ಕಾರ್ತಿಕ ಮಾಸದ ಅಂಗವಾಗಿ ಸಿದ್ದೇಶ್ವರ ದೇವಾಲಯದಲ್ಲಿ ದೀಪೋತ್ಸವ ಅದ್ಧೂರಿಯಾಗಿ ಜರುಗಿತು. ದೀಪಗಳಿಂದ ಅಲಂಕೃತಗೊಂಡಿದ್ದ ಪುಷ್ಕರಣಿ ನೆರದಿದ್ದ ಭಕ್ತರ ಗಮನ ಸೆಳೆಯಿತು.

Karthika Deepotsava, ದೀಪೋತ್ಸವ
author img

By

Published : Nov 17, 2019, 9:23 PM IST

ಬಸವಕಲ್ಯಾಣ: ಶಿವಪೂರ ಐತಿಹಾಸಿಕ ಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರುಗಿತು.

ಸಿದ್ದೇಶ್ವರ ದೇವಾಲಯದಲ್ಲಿ ಕಾರ್ತಿಕ ಮಾಸದ ದೀಪೋತ್ಸವ...

ಕಾರ್ತಿಕ ಮಾಸದ ನಿಮಿತ್ತ ಸಿದ್ದೇಶ್ವರ ದೇವಾಲಯದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿದ್ದೇಶ್ವರ ದೇವಾಲಯದಲ್ಲಿ ಭಕ್ತಿ, ಶ್ರದ್ಧೆಯಿಂದ ಪ್ರತಿ ವರ್ಷ ದೀಪೋತ್ಸವ ಆಚರಿಸಿಕೊಂಡು ಬರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆವರಣದಲ್ಲಿ ಹಾಗೂ ಕೆರೆಯ ದಂಡೆಯಲ್ಲಿ, ದೇವಾಲಯದ ಮುಂಭಾದಲ್ಲಿರುವ ಪುಷ್ಕರಣಿಯ ಮುಟ್ಟಿಲುಗಳ ಮೇಲೆ ಸಾಲು-ಸಾಲು ದೀಪಗಳನ್ನು ಬೆಳಗಿಸಲಾಯಿತು. ದೀಪಗಳ ಬೆಳಕಿನಿಂದ ಪುಷ್ಕರಣಿ ಅಲಂಕೃತಗೊಂಡಿದ್ದು, ನೆರದಿದ್ದ ಭಕ್ತರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಜಿ.ಮುಳೆ, ಪ್ರಮುಖರಾದ ಶರಣು ಸಲಗರ್, ಶಿವರಾಜ ಬಾಲಿಕಿಲೆ, ಸಮಿತಿ ಪ್ರಮುಖರಾದ ಅನಿಲ್​ ಸ್ವಾಮಿ, ಅನಿಲ ಮಠಪತಿ, ನವನಾಥ ಪೊದ್ಧಾರ, ಧೋಂಡಿಬಾ ಪೂಜಾರಿ, ಮಹೇಶ ಉಮರ್ಗೆ, ಅನಿಲ್​ ಉಮರ್ಗೆ ಉಪಸ್ಥಿತರಿದ್ದರು. ಬಸವಕಲ್ಯಾಣ ನಗರ, ಶಿವಪೂರ ಗ್ರಾಮ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿದ್ದರು.

Intro:
(ಗಮನಕ್ಕೆ: ಸುದ್ದಿಯಲ್ಲಿ ಬರೆಯಲಾದ ಹೆಸರುಗಳನ್ನು ಕಟ್ ಮಾಡಬೇಡಿ ಸರ್)

ಒಂದು ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ನಗರಕ್ಕೆ ಹೊಂದಿರಕೊAಡಿರುವ ಶಿವಪೂರನ ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯದ ಪರಿಸರದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಾನುವಾರ ಸಂಜೆ ೫ಕ್ಕೆ ಭಕ್ತರಿಂದ ದೀಪೋತ್ಸವ ಕಾರ್ಯಕ್ರಮ ಜರುಗಿತು. ದೀಪೋತ್ಸವ ಪುಷ್ಕರಣಿಯಲ್ಲಿ ದೀಪಗಳ ಬೆಲಕು ಝಗ ಮಗಿಸುತಿದ್ದವು.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಾಲಯದ ಆವರಣ ಹಾಗೂ ಕೆರೆಯ ದಡೆಯಲ್ಲಿಯ ದೇವಾಲಯದ ಮುಂಭಾದಲ್ಲಿರುವ ಪುಷ್ಕರಣಿಯ ಮುಟ್ಟಿಲುಗಳ ಮೇಲೆ ಸಾಲು-ಸಾಲು ದೀಪಗಳನ್ನು ಬೆಳಗಿಸಲಾಯಿತು. ದೀಪಗಳ ಬೆಳಕಿನಿಂದಾಗಿ ಪುಷ್ಕರಣಿಯಲ್ಲಿ ನೀರಿನಲ್ಲಿ ಕಂಡ ದೃಶ್ಯ ಕಣ್ಮನ ಸೆಳೆಯುವಂತಿತ್ತು.
ದೀಪೋತ್ಸವಕ್ಕೆ ಚಾಲನೆ ನೀಡಿದ ಗವಿಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಮಾತನಾಡಿ, ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿ ಭಕ್ತರಿಂದ ಭಕ್ತಿ-ಶೃದ್ಧೆಯಿಂದ ಪ್ರತಿ ವರ್ಷ ದೀಪೋತ್ಸವ ಆಚರಿಸಿಕೊಂಡು ಬರುತ್ತರಿವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಜಿ.ಮುಳೆ, ಪ್ರಮುಖರಾದ ಶರಣು ಸಲಗರ್, ಶಿವರಾಜ ಬಾಲಿಕಿಲೆ, ಸಮಿತಿ ಪ್ರಮುಖರಾದ ಶ್ರೀ ಅನೀಲ ಸ್ವಾಮಿ, ಅನೀಲ ಮಠಪತಿ, ನವನಾಥ ಪೊದ್ಧಾರ, ಧೋಂಡಿಬಾ ಪೂಜಾರಿ, ಮಹೇಶ ಉಮರ್ಗೆ, ಅನೀಲ ಉಮರ್ಗೆ ಉಪಸ್ಥಿತರಿದ್ದರು. ಬಸವಕಲ್ಯಾಣ ನಗರ, ಶಿವಪೂರ ಗ್ರಾಮ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು, ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.