ಬೀದರ್: ಯುವಜನ ಹಾಗೂ ಕ್ರೀಡಾ ಅಭಿವೃದ್ಧಿ ಸಚಿವ ರಹಿಂಖಾನ್ ಸಹೋದರರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಬರಿಗೈಯಲ್ಲಿ ಹಿಂದುರುಗಿದ್ದಾರೆ.
ನಗರದ ನೂರ್ ತಾಲೀಮ್ ಕಾಲೋನಿಯಲ್ಲಿರುವ ರಹಿಂಖಾನ್ ಸಹೋದರ ಫೇಹಿಮುದ್ದಿನ್ ಖಾನ್ ಹಾಗೂ ಬಿಲಾಲ್ ಕಾಲೋನಿಯಲ್ಲಿರುವ ಅಜೀಜ್ ಖಾನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೂರಿನ ಹಿನ್ನೆಲೆಯಲ್ಲಿ ಯಾರಿಗು ಸುಳಿವು ನೀಡದೆ ದಾಳಿ ಮಾಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಮುಂಚೂಣಿಯಲ್ಲಿ ಪ್ರಚಾರದಲ್ಲಿರುವ ಸಚಿವ ರಹಿಂಖಾನ್ಗೆ ಬ್ರೇಕ್ ಹಾಕಲು ಈ ದಾಳಿ ನಡೆದಿದೆ ಎಂದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.